ಕಾಡ್ಲೂರು ಶ್ರೀ ಉಪೇಂದ್ರ ತೀರ್ಥ ಕರಾರ್ಚಿತ ಪ್ರಾಣ ದೇವರ ದೇವಸ್ಥಾನ ಜಲಾವೃತ.                                               ಜಯ ಧ್ವಜ ನ್ಯೂಸ್, ರಾಯಚೂರು, ಜೂ.29- ತಾಲೂಕಿನ ಕಾಡ್ಲೂರು ಗ್ರಾಮದ ಕೃಷ್ಣಾ ನದಿ ತೀರದ ಶ್ರೀ ಉಪೇಂದ್ರ ತೀರ್ಥ ಕರಾರ್ಚಿತ ಶ್ರೀ ಪ್ರಾಣದೇವರ ದೇವಸ್ಥಾನ ಜಲಾವೃತವಾಗಿದೆ. 

   ನಾರಾಯಣಪೂರು ಜಲಾಶಯದಿಂದ ಸುಮಾರು 1.10ಲಕ್ಷ ಕ್ಯೂಸೆಕ್ ನೀರು ನದಿಗೆ ಹರಿ ಬಿಟ್ಟಿದ್ದರಿಂದ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗುತ್ತಿದ್ದು ನದಿ ದಡದಲ್ಲಿರುವ ದೇವಸ್ಥಾನ ಸಂಪೂರ್ಣ ಜಲಾವೃತವಾಗಿದೆ. ಜಲಾಶಯದ ಒಳ ಹರಿವು ಹೆಚ್ಚಳವಾದಲ್ಲಿ ನದಿಗೆ ಅಧಿಕ  ನೀರು ಬಿಟ್ಟ ಸಂದರ್ಭದಲ್ಲಿ  ದೇವಸ್ಥಾನ  ಮುಳುಗುವ ಸಂಭವವಿದೆ.

Comments

Popular posts from this blog