ಶಾನ್ ಭೋಗ್ ದಾಸಪ್ಪ ದತ್ತಿ ಪ್ರತಿಷ್ಟಾನದಿಂದ ನರಸಿಂಗ ರಾವ್ ದೇಶಪಾಂಡೆಗೆ ರಜತ ಕಿರೀಟ ಹಾಗೂ ಧರ್ಮ ರತ್ನಾಕರ್ ಪ್ರಶಸ್ತಿ ಪ್ರದಾನ:                                         ಇಂದಿನ ಆಧುನಿಕ ಯುಗದಲ್ಲಿ ಇಂತಹ ಕಾರ್ಯಕ್ರಮ ಅಪರೂಪ- ಡಾ.ಶಿವರಾಜ ಪಾಟೀಲ್                                                                                                     ಜಯಧ್ವಜ ನ್ಯೂಸ್ ರಾಯಚೂರು,ಜೂ.3-                          ಇಂದಿನ ಆಧುನಿಕ ಹಾಗೂ ಸಂಕುಚಿತ ಯುಗದಲ್ಲಿ ಇಂತಹ ಕಾರ್ಯಕ್ರಮ ಅಪರೂಪ ಮತ್ತು ವಿರಳವೆಂದು ಶಾಸಕ ಡಾ.ಶಿವರಾಜ ಪಾಟೀಲ್ ಅಭಿಪ್ರಾಯ ಪಟ್ಟರು. ಅವರಿಂದು ನಗರದ ಸಾವಿತ್ರಿ ಕಾಲೋನಿ ಶ್ರೀ ಜೋಡು ವೀರಾಂಜನೇಯ ದೇವಸ್ಥಾನ ಸಭಾಂಗಣದಲ್ಲಿ ಶಾನಭೋಗ್ ದಾಸಪ್ಪ ದತ್ತಿ ಪ್ರತಿಷ್ಟಾನ ಆಶ್ರಯದಲ್ಲಿ ಬ್ರಾಹ್ಮಣ ಸಮಾಜದ ಹಿರಿಯರಾದ ನರಸಿಂಗರಾವ್ ದೇಶಪಾಂಡೆ ಯವರಿಗೆ  ಕಿರೀಟ ಹಾಗೂ ಧರ್ಮ ರತ್ನಾಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ದಾಸಪ ಪ್ರತಿಷ್ಟಾನದ ಕೆ.ಪಿ.ವೆಂಕಟೇಶ ಮೂರ್ತಿಯವರು ರಾಜ್ಯದ  ಹಲವೆಡೆ ಕಾರ್ಯಕ್ರಮ ಮಾಡಿದ್ದಾರೆ ಅವರಿಗೆ ಪಿತ್ರಾರ್ಜಿತವಾಗಿ ದೊರೆತ ನೂರಾರು ಕೋಟಿ ಸಂಪತ್ತನ್ನು ಸ್ವಾರ್ಥಕ್ಕಾಗಿ ಬಳಸದೆ ಸಮಾಜಕ್ಕೆ ದಾನ ಧರ್ಮದ ರೂಪದಲ್ಲಿ ನೀಡುತ್ತಿದ್ದಾರೆ ಅವರು ತಮ್ಮ ಸ್ವಂತಕ್ಕಾಗಿ ಅದನ್ನು ವಿನಿಯೋಗಿಸದೆ ವಿವಿಧ ಸಮಾಜದ ಸಾಧಕರನ್ನು ಗುರುತಿಸಿ ಪ್ರಶಸ್ತಿ ಮತ್ತು ರಜತ ಕರೀಟ ನೀಡುತ್ತಿದ್ದಾರೆ ಭಾರತವನ್ನು ವಿಶ್ವ ಗುರು ಮಾಡಲು ಸಂಕಲ್ಪಿಸಿರುವ ನಮ್ಮ ದೇಶದ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರಿಗೆ   ಡಿಸೆಂಬರ್ ತಿಂಗಳಲ್ಲಿ  ಸುವರ್ಣ ಕಿರೀಟ ನೀಡುತ್ತಿದ್ದಾರೆ ಇದು ಹೆಮ್ಮೆಯ ಸಂಗತಿ ಎಂದರು.

ಹಿಂದಿನ ರಾಜ ಮಹಾರಾಜರ ಕಾಲದಲ್ಲಿ ನಾವು ಕೇಳಿದ್ದೆವು ಬೆಳ್ಳಿ ಬಂಗಾರ ದಾನ ಧರ್ಮ ರೂಪದಲ್ಲಿ ನೀಡುತ್ತಿದ್ದರೆಂದು ಆದರೆ ಇಂದಿನ ದುಬಾರಿ ಕಾಲದಲ್ಲಿ ಅವರು ಕೋಟ್ಯಾಂತರ ರೂ.ಗಳನ್ನು ಪರೋಪಕಾರಿ ಕಾರ್ಯಕ್ಕೆ ನೀಡುವುದು ಶ್ಲಾಘನೀಯ ಮತ್ತು ಮಾದರಿ ಕಾರ್ಯ ಅದೇ ರೀತಿ ಅವರ ಪಿತ್ರಾರ್ಜಿತ ಆಸ್ತಿಯಲ್ಲಿ ಅವರ ಅಣ್ಣ ತಮ್ಮಂದಿರು ವೆಂಕಟೇಶ್ ಮೂರ್ತಿಯವರಿಗೆ ತಮ್ಮ ಪಾಲಿನ ಕೋಟ್ಯಾಂತರ ಆಸ್ತಿ ಬಿಟ್ಟುಕೊಟ್ಟಿದ್ದು ಅದೊಂದು ಮಾದರಿ ಮತ್ತು ಆಶ್ಚರ್ಯಕರ ಸಂಗತಿ ಇಂದು ಒಂದು ಅಡಿ ಜಾಗಕ್ಕಾಗಿ ದಾಯಾದಿ ಕಲಹ ನೋಡುತ್ತೇವೆ ಆದರೆ ಅವರ ಕುಟುಂಬದ ಸದಸ್ಯರ ಉದಾರತೆ ಅನುಕರಣೀಯ ವೆಂದರು. ಇಂದು ಪ್ರಶಸ್ತಿ ಸ್ವೀಕರಿಸಿದ ನರಸಿಂಗ್ ರಾವ್ ದೇಶಪಾಂಡೆ ಸಾತ್ವಿಕ ಸ್ವಭಾವದವರು ಅವರು ಸಮಾಜಕ್ಕೆ ಕೊಡುಗೆ ನೀಡಿದ್ದಾರೆ, ನನ್ನ ಮಕ್ಕಳಿಗೆ ಶೈಕ್ಷಣಿಕವಾಗಿ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶ ದೊರಕಿಸಿಕೊಟ್ಟ ಪ್ರಸಂಗ ವಿವರಿಸಿ ಅವರಿಗೆ ಪ್ರಶಸ್ತಿ ದೊರೆತಿದ್ದು ನಮಗೆಲ್ಲ ಹರ್ಷ ತಂದಿದೆ ಎಂದರು. ಬ್ರಾಹ್ಮಣ ಸಮಾಜದ ಸಹಕಾರದಿಂದ ನಾನು ಸತತವಾಗಿ ಮೂರನೇ ಬಾರಿಗೆ ಶಾಸಕನಾಗಿ ಆಯ್ಕೆಯಾಗಿದ್ದೇನೆ ಇದಕ್ಕೆ ಎಲ್ಲ ಸಮಾಜಗಳ ಕೊಡುಗೆಯಿದೆ ಬ್ರಾಹ್ಮಣ ಸಮಾಜ ಅತ್ಯಂತ ಉತ್ತಮ ವಿಚಾರಧಾರೆಯಿರುವ ಸಮಾಜ ನಿಮ್ಮಲ್ಲೂ ಬಡವರಿದ್ದಾರೆ ಅದಕ್ಕಾಗಿ ಕೇಂದ್ರ ಸರ್ಕಾರ ಶೇ.10 ಆರ್ಥಿಕ ಹಿಂದುಳಿದವರಿಗೆ ಆರ್ಥಿಕ ಸೌಲಭ್ಯ ನೀಡಿದೆ ಅದನ್ನು ಸಮರ್ಪಕವಾಗಿ ಜಾರಿಯಾಗಬೇಕೆಂದರು.

ಅಲ್ಪ ಸಂಖ್ಯಾತರಿಗೆ ಉನ್ನತ ಅಭ್ಯಾಸ , ವಿದೇಶಿ ವ್ಯಾಸಂಗಕ್ಕಾಗಿ ಲಕ್ಷಾಂತರ ರೂ. ಸರ್ಕಾರ ನೀಡುತ್ತದೆ ಅದೆ ಬ್ರಾಹ್ಮಣರಿಗೆ ಬಿಡಿಗಾಸು ಸಿಗುತ್ತಿಲ್ಲ ವೆಂದು ಕಳವಳ ವ್ಯಕ್ತಪಡಿಸಿದರು. ಪ್ರಾಸ್ತಾವಿಕವಾಗಿ ಪ್ರಾಣೇಶ್ ಮುತಾಲಿಕ್ ಮಾತನಾಡಿ ಯೋಗ ಮತ್ತು ಯೋಗ್ಯತೆ ದೊರಕುವುದು ದುರ್ಲಭ ಆದರೆ ದೇಶಪಾಂಡೆಯವರಿಗೆ ಅದು ಲಭಿಸಿದೆ ಶಾನುಭೋಗ ದಾಸಪ್ಪ ದತ್ತಿ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು ಸಂತಸ ತಂದಿದೆ ಎಂದರು. ಶಾನುಭೋಗ ದಾಸಪ್ಪ ದತ್ತಿ ಪ್ರತಿಷ್ಟಾನದ ಕೆ.ಪಿ.ವೆಂಕಟೇಶ ಮೂರ್ತಿ ಮಾತನಾಡಿ ಅರಸಿಕೆರೆ ಬಳಿ ನಮ್ಮ ಚಿಕ್ಕ ಗ್ರಾಮದಲ್ಲಿ ಜನಿಸಿದ ನಮಗೆ ನಮ್ಮ ಪಿತ್ರಾರ್ಜಿತವಾಗಿ ಲಭಿಸಿದ ಸಂಪತ್ತನ್ನು ಪರೋಪಕಾರ್ಯ ಮಾಡಲು ವಿನಿಯೋಗಿಸುತ್ತಿದ್ದೇನೆ ನಾನು ಗ್ರಾಂ.ಪಂ ಅಧ್ಯಕ್ಷನಾಗಿ ಹಳ್ಳಿಯಲ್ಲಿ ಅನೇಕ ಸಾಮಾಜಿಕ ಕಾರ್ಯ ಮಾಡಿದ್ದೇನೆ ನನಗೆ ಸ್ವಂತಕ್ಕಾಗಿ ಮಾಡಿಕೊಳ್ಳಬೇಕೆಂಬ ಆಸೆಯಿಲ್ಲವೆಂದ ಅವರು ಅಯೋಧ್ಯೆಯಲ್ಲಿ ಪೇಜಾವರ ಶ್ರೀಗಳಿಗೆ ಕಿರೀಟ ಸಮರ್ಪಣೆ ಮಾಡಿದ್ದೆ ಆಗ ದೇಶಪಾಂಡೆಯವರ ಸಂಪರ್ಕ ಲಭಿಸಿತು ಅವರ ಸಾತ್ವಿಕ ನಡೆ ನುಡಿಗಳು ಪರೋಪಕಾರಿ ವ್ಯಕ್ತಿತ್ವ ಹಿನ್ನೆಲೆ ಅರಿತು ಅವರಿಗೆ ಪ್ರಶಸ್ತಿ ನೀಡಲು ನಿರ್ಧರಿಸಿದೆ ಎಂದರು. ಡಿಸೆಂಬರ್ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸುವರ್ಣ ಕಿರೀಟ ಸಮರ್ಪಣೆ ಮಾಡುವ ಭಾಗ್ಯ ಲಭಿಸಿದೆ ಎಂದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನರಸಿಂಗ ರಾವ್ ದೇಶಪಾಂಡೆ ನನ್ನಲ್ಲಿ ಏನನ್ನು ನೋಡಿ ಪ್ರಶಸ್ತಿ ನೀಡಿದ್ದಾರೋ ತಿಳಿಯುತ್ತಿಲ್ಲ ಅವರ ಕಾರ್ಯಕ್ಕೆ ನಾನು ಆಭಾರಿಯಾಗಿದ್ದೇನೆಂದರು. ಅತಿಥಿಗಳಾಗಿ ಪಾಲ್ಗೊಂಡ ವೆಂಕಟರಾವ್ ಕುಲಕರ್ಣಿ ಪ್ರಶಸ್ತಿ ಪುರಸ್ಕೃತರ ಜೀವನ ಪರಿಚಯ ಮಾಡಿ ಅವರ ವ್ಯಕ್ತಿತ್ವ ಕೊಂಡಾಡಿದರು. ಅಧ್ಯಕ್ಷತೆಯನ್ನು ಡಾ.ಆರ್.ಎಂ.ಜೋಷಿ ವಹಿಸಿದ್ದರು. ವೇದಿಕೆ ಮೇಲೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ವಿಷ್ಣು ತೀರ್ಥ ಸಿರವಾರ್, ಸುಧಾ ನರಸಿಂಗ್ ರಾವ್ ದೇಶಪಾಂಡೆ ಇನ್ನಿತರರು ಇದ್ದರು.ಶ್ರೀಷ ವೇದ ಘೋಷ ಮಾಡಿದರು,  ಹೇಮಾ ವಸುಧೇಂದ್ರ ಸಿರವಾರ್ ಪ್ರಾರ್ಥಿಸಿದರು, ವೇಣುಗೋಪಾಲ್ ಇನಾಂದಾರ್ ಸ್ವಾಗತಿಸಿದರು.

ವಿನೋದ ಸಗರ ನಿರೂಪಿಸಿದರು. ಅನಿಲ್ ಗಾರಲದನ್ನಿ ವಂದಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಎಂಎಲ್ಸಿ ಎನ್.ಶಂಕ್ರಪ್ಪ, ಮುಖಂಡರಾದ ಕಡುಗೋಲು ಆಂಜಿನೇಯ, ವೈ.ಗೋಪಾಲರೆಡ್ಡಿ, ರಮೇಶ್ ಕುಲಕರ್ಣಿ ,ಬಿ.ಗೋವಿಂದ್, ಶಶಿರಾಜ್ ಸೇರಿದಂತೆ ಬ್ರಾಹ್ಮಣ ಸಮಾಜ, ಆರ್ಯವೈಶ್ಯ ಸಮಾಜ ಮುಖಂಡರು, ಮಹಿಳೆಯರು ಉಪಸ್ಥಿತರಿದ್ದರು . ಪ್ರಶಸ್ತಿ ಪುರಸ್ಕೃತರಿಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಪದಾಧಿಕಾರಿಗಳು ಸೇರಿದಂತೆ ಅನೇಕರು ಶಾಲು ಹೊದಿಸಿ ಸತ್ಕರಿಸಿ ಅಭಿನಂದಿಸಿದರು.

Comments

Popular posts from this blog