ಜಿಲ್ಲೆಯಾದ್ಯಂತ ಸಂಭ್ರಮದಿಂದ ಮಣ್ಣೆತ್ತಿನ ಅಮಾವಾಸ್ಯೆ ಆಚರಣೆ. ಜಯ ಧ್ವಜ ನ್ಯೂಸ್, ರಾಯಚೂರು,ಜೂ.25- ನಗರ ಸೇರಿ ಜಿಲ್ಲೆಯಾದ್ಯಂತ ಮಣ್ಣೆತ್ತಿನ ಅಮಾವಾಸ್ಯೆವನ್ನು ಸಂಭ್ರಮದಿಂದ ಆಚರಿಸಲಾಯಿತು.
ಕೃಷಿಯಲ್ಲಿ ಪ್ರಾಧಾನ್ಯತೆ ವಹಿಸುವ ಎತ್ತುಗಳನ್ನು ಪೂಜಿಸಿ ಮಳೆ ಬೆಳೆ ಸಮೃದ್ಧವಾಗಿ ಸುಭಿಕ್ಷೆ ನೆಲೆಸಲಿ ಎಂದು ಕೋರಿ ಮಣ್ಣೆತ್ತಿನ ಅಮಾವಾಸ್ಯೆ ಭಕ್ತಿಯಿಂದ ಪೂಜಿಸುವ ಈ ವಿಶೇಷ ಆಚರಣೆ ಪ್ರಚಲಿತದಲ್ಲಿದೆ. ಮಣ್ಣೆತ್ತು ಖರೀದಿ ಭರಾಟೆ:
ನಗರದ ಕುಂಬಾರ ಓಣಿಯಲ್ಲಿ ಮತ್ತು ಆಂಧ್ರದ ಕೋಸಗಿಯಿಂದ ಬಂದು ಮಣ್ಣೆತ್ತು ಸಿದ್ಧಪಡಿಸಿ ಮಾರಾಟ ಮಾಡುತ್ತಾರೆ ನಗರದ ಕರ್ನಾಟಕ ಸಂಘ ಮುಂಭಾಗದಲ್ಲಿ ಮಣ್ಣೆತ್ತು ಖರೀದಿ ಭರಾಟೆ ಜೋರಾಗಿತ್ತು ಗ್ರಾಹಕರು ಗಂಟೆಗಳವರೆಗೆ ಕಾದು ಮಣ್ಣೆತ್ತು ಖರೀದಿಸಿದರು. ಒಂದು ಜೋಡಿಗೆ 50 ರೂ. ದರದಂತೆ ಮಣ್ಣೆತ್ತು ಖರೀದಿ ನಡೆಯಿತು. ಒಟ್ಟಾರೆ ಶ್ರದ್ದಾ ಭಕ್ತಿಯಿಂದ ಮಣ್ಣೆತ್ತು ಅಮಾವಾಸ್ಯ ಆಚರಿಸಲಾಗುತ್ತಿದೆ.
Comments
Post a Comment