ಏಮ್ಸ್ ಹೋರಾಟಗಾರರ ಮೇಲೆ ಪ್ರಕರಣ ದಾಖಲು:   
ಹಳಿ ತಪ್ಪಿತೆ ಏಮ್ಸ್ ಹೋರಾಟ?.   
                                ಜಯ ಧ್ವಜ ನ್ಯೂಸ್, ರಾಯಚೂರು,ಜೂ.26-              ಸುಮಾರು ಮೂರು ವರ್ಷದಿಂದ ಶಾಂತಿಯುತವಾಗಿ ನಡೆದುಕೊಂಡು ಬಂದಿದ್ದ ಏಮ್ಸ್ ಹೋರಾಟ ಹಳಿ ತಪ್ಪಿತೆ? ಎಂಬ ಭಾವನೆ ಜನರಲ್ಲಿ ಮೂಡಿದೆ.                                 ಜಿಲ್ಲೆಗೆ ರಾಷ್ಟ್ರ ಮಟ್ಟದ ಸಂಸ್ಥೆಯಾದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ನೀಡಬೇಕೆಂದು ನಗರದ ಜಿಲ್ಲಾ ಕ್ರೀಡಾಂಗಣ ಬಳಿಯ ಮಹಾತ್ಮಾ ಗಾಂಧಿ ಪುತ್ಥಳಿ ಬಳಿ  1140 ದಿನಗಳಿಂದ ನಡೆದುಕೊಂಡು ಬರುತ್ತಿದ್ದ ಹೋರಾಟಕ್ಕೆ ನಿನ್ನೆ ಅನಿರೀಕ್ಷಿತವಾಗಿ ವಿಘ್ಞವೊಂದು ಎದುರಾಗಿದೆ ಅದೇನೆಂದರೆ ಇತ್ತೀಚೆಗೆ ನಗರಕ್ಕಾಗಿಮಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಏಮ್ಸ್ ನೀಡುವುದು ತಜ್ಞರ ಸಮಿತಿ ತೀರ್ಮಾನಿಸುತ್ತದೆ ಎಂಬ ಹೇಳಿಕೆ ಏಮ್ಸ್ ಹೋರಾಟಗಾರರಲ್ಲಿ ಕಿಚ್ಚು ಹೆಚ್ಚಿತು ಇದಕ್ಕೆ ಪ್ರತಿಯಾಗಿ ಏಮ್ಸ್ ಹೋರಾಟಗಾರರು ಸುದ್ದಿಗೋಷ್ಟಿ ನಡೆಸಿ ಕೇಂದ್ರ ಸಚಿವರ ಮತ್ತು ಸ್ಥಳಿಯ ನಗರ ಶಾಸಕರ ಮೇಲೆ ಹರಿಹಾಯ್ದಿದ್ದರಿಂದ ಕೆರಳಿದ ಬಿಜೆಪಿ ಕಾರ್ಯಕರ್ತರು ಶಾಸಕರ ನೇತೃತ್ವದಲ್ಲಿ ನಿನ್ನೆ ಭಾರಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಕೇಂದ್ರ ಸಚಿವರನ್ನು ನಿಂದಿಸಿದ ಏಮ್ಸ್ ಹೋರಾಟಗಾರರನ್ನು ಬಂಧಿಸಬೇಕೇಂಬ ಆಗ್ರಹ ಬೆನ್ನಲ್ಲೆ ನಿನ್ನೆ ರಾತ್ರಿ ಏಮ್ಸ್ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಬಸವರಾಜ ಕಳಸ ಸೇರಿದಂತೆ ಐವರು ಮೇಲೆ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಏಮ್ಸ್ ಹೋರಾಟಕ್ಕೆ ಇದು ಭಾರಿ ಪೆಟ್ಟು ನೀಡಿದಂತಾಗಿದ್ದು ಕೇಂದ್ರ ಸಚಿವರನ್ನು ಹಾಗೂ ಸ್ಥಳೀಯ ಶಾಸಕರನ್ನು ತರಾಟೆಗೆ ತೆಗೆದುಕೊಳ್ಳುವ ಭರದಲ್ಲಿ ಕಾನೂನು ಎಲ್ಲೆ ಮೀರಿ ಹೋರಾಟಗಾರರು ನಡೆದುಕೊಂಡರೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಇಂದು ಏಮ್ಸ್ ಹೋರಾಟ ವೇದಿಕೆ ಬಿಕೋ ಎನ್ನುತ್ತಿತ್ತು ದಿನನಿತ್ಯ ಬೆರಳೆಣಿಕಯಷ್ಟಾದರೂ ಜನರಿಂದ ಹೋರಾಟ ವೇದಿಕೆ ಸೆಳೆಯುತ್ತಿತ್ತು ಆದರೆ ಇಂದು ಪೊಲೀಸ್ ವಾಹನವೊಂದು ವೇದಿಕೆ ಬಳಿ ನಿಂತಿದ್ದು ಬಿಟ್ಟರೆ ಯಾವ ಹೋರಾಟಗಾರರು ಕಾಣಲಿಲ್ಲ ವರ್ಷದಿಂದ ಹೋರಾಟವನ್ನು ಸರಿಯಾದ ರೀತಿಯಲ್ಲಿ ಕಾನೂನು ಮೀರದಂತೆ ನಡೆಸಿಕೊಂಡು ಬರಲಾಗಿತ್ತು ಇದೀಗ ಏಕಾಏಕಿ ಹೋರಾಟಗಾರರ ಮೇಲೆ ಪ್ರಕರಣ ದಾಖಲಾಗಿದ್ದರಿಂದ ಏಮ್ಸ್ ಹೋರಾಟ ಮುನ್ನೆಡೆಸುವವರು ಯಾರು ಮತ್ತು ಏಮ್ಸ್ ಹೋರಾಟದ ಮೇಲೆ ರಾಜಕೀಯ ಕರಿ ಛಾಯೆ  ಆವರಿಸಿತೆ ಎಂಬಂತಾಗಿದ್ದು ಇದರಿಂದ ಹೋರಾಟವು ಯಾವ  ತಿರುವು ಪಡೆಯುತ್ತೆ ಕಾದು ನೋಡಬೇಕಾಗಿದೆ. ಒಟ್ಟಾರೆಯಾಗಿ ಕೇಂದ್ರ ಸರ್ಕಾರ ಏಮ್ಸ್ ಮಂಜೂರು ಮಾಡಬೇಕೆನ್ನುವ ಕಳಕಳಿ ಜಿಲ್ಲೆಯ ಜನರದ್ದಾಗಿದೆ. ರಾಜ್ಯ ಸರ್ಕಾರ ಏಮ್ಸ್ ದೊರಕಿಸುವ ನಿಟ್ಟಿನಲ್ಲಿ ಶತಾಯ ಗತಾಯ ಪ್ರಯತ್ನ ಮಾಡಬೇಕೆನ್ನುವುದು ಜನರು ಒತ್ತಾಯವಾಗಿದೆ.

Comments

Popular posts from this blog