ರಾಜ್ಯದಲ್ಲೇ ಮೊಟ್ಟಮೊದಲ ಅತ್ಯಾಧುನಿಕ ವೈದ್ಯಕೀಯ ಯಂತ್ರ ಬೆಟ್ಟದೂರು ಆಸ್ಪತ್ರೆಯಲ್ಲಿ ಪರಿಚಯ- ಡಾ.ಜಯ ಪ್ರಕಾಶ್ ಪಾಟೀಲ್. ಜಯ ಧ್ವಜ ನ್ಯೂಸ್, ರಾಯಚೂರು,ಜೂ.26- ರಾಜ್ಯದಲ್ಲೆ ಪ್ರಪ್ರಥಮವಾಗಿ ನಗರದ ಬೆಟ್ಟದೂರು ಆಸ್ಪತ್ರೆಯಲ್ಲಿ ಅತ್ಯಾಧುನಿಕ ವೈದ್ಯಕೀಯ ಯಂತ್ರದ ಮೂಲಕ ಸ್ತನ ಗಡ್ಡೆ ನಿವಾರಣೆ ಶಸ್ತ್ರ ಚಿಕೆತ್ಸೆ ಮಾಡುವುದನ್ನು ಪರಿಚಯಿಸಲಾಗುತ್ತಿದೆ ಎಂದು ಬೆಟ್ಟದೂರು ಆಸ್ಪತ್ರೆ ಮುಖ್ಯಸ್ಥರಾದ ಡಾ.ಜಯ ಪ್ರಕಾಶ್ ಪಾಟೀಲ್ ಹೇಳಿದರು.
ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಹಿಳೆಯರಲ್ಲಿ ಸ್ತನ ಗಡ್ಡೆ ಅತೀವ ವೇದನೆ ನೀಡುವ ಆರೋಗ್ಯ ಸಮಸ್ಯೆಯಾಗಿದ್ದು ಇದು ಅನೇಕ ಶಾರೀರಿಕ ದುಷ್ಪರಿಣಾಮಗಳಿಗೆ ಎಡೆಮಾಡಿಕೊಡುತ್ತದೆ ಆದ್ದರಿಂದ ನಮ್ಮ ಆಸ್ಪತ್ರೆಯಲ್ಲಿ ರಾಜ್ಯದಲ್ಲೆ ನವೀನ ತಂತ್ರಜ್ಞಾನದ ಯಂತ್ರವನ್ನು ಮೊಟ್ಟ ಮೊದಲ ಬಾರಿಗೆ ಪರಿಚಯಿಸುತ್ತಿದ್ದು ಹೈದ್ರಾಬಾದ್, ಮುಂಬೈ ಮುಂತಾದ ಮಹಾನಗರ ಹೊರತುಪಡಿಸಿ ಕರ್ನಾಟಕ ರಾಜ್ಯದಲ್ಲಿ ನಮ್ಮ ಆಸ್ಪತ್ರೆಯಲ್ಲಿ ಮೊದಲು ಪರಿಚಯಿಸುತ್ತಿರುವ ಹೆಗ್ಗಳಿಕೆ ನಮ್ಮದಾಗಿದ್ದು ನಮಗೆ ಹೆಮ್ಮೆಯನ್ನಿಸುತ್ತಿದೆ ಎಂದರು.ಮೈಕ್ರೋವೇವ್ ಆಬ್ಲೇಷನ್ ಎಂದು ಕರೆಯುವ ಈ ಚಿಕಿತ್ಸೆಯಿಂದ ಅತ್ಯಾಧುನಿಕ ಉಪಕರಣದ ಆಂಟೇನಾ ಮೂಲಕ ಸ್ತನ ಗಡ್ಡೆಯನ್ನು ಕರಗಿಸುವ ವಿಧಾನ ರಿಂದ ರೋಗಿಗೆ ಯಾವುದೆ ಅಡ್ಡಪರಿಣಾಮವಿಲ್ಲದೆ ಎರೆಡು ದಿನದಲ್ಲಿ ಆಸ್ಪತ್ರೆಯಿಂದ ಮನೆಗೆ ತೆರಳಿ ಬಹುದೆಂದರು. ಈ ತಂತ್ರಜ್ಞಾನ ತೈವಾನ್, ಚೀನಾ ನಂತರ ಭಾರತದಲ್ಲಿ ಪರಿಚಯವಾಗಿದ್ದು ನಮ್ಮ ಆಸ್ಪತ್ರೆಯಲ್ಲಿ ಬೇರೆ ರಾಜ್ಯಗಳಿಗಿಂತ ಕಡಿಮೆ ದರದಲ್ಲಿ ಸುಮಾರು ಒಂದು ಲಕ್ಷ ರೂ. ಆಸು ಪಾಸಿನಲ್ಲಿ ಶಸ್ತ್ರ ಚಿಕಿತ್ಸೆ ನೀಡಲಾಗುತ್ತಿದ್ದು ಅಧಿಕ ಲಾಭದ ದೃಷ್ಟಿಕೋನ ಹೊಂದಿಲ್ಲವೆಂದ ಅವರು ಶನಿವಾರದಿಂದ ಶುಭಾರಂಭಗೊಳ್ಳಲಿದ್ದು ಈಗಾಗಲೆ ರೋಗಿಗಳು ತಮ್ಮ ಹೆಸರು ನೊಂದಾಯಿಸಿದ್ದಾರೆ ಎಂದರು. ಸ್ತನ ಕ್ಯಾನ್ಸರ್ ಇಲ್ಲವೆಂದು ಖಚಿತಪಡಿಸಿಕೊಂಡು ಈ ಶಸ್ತ್ರ ಚಿಕಿತ್ಸಾಸೌಲಭ್ಯ ನೀಡಲಾಗುತ್ತದೆ ಎಂದರು. ಮೊದಲ ಬಾರಿಗೆ ರಾಜ್ಯದಲ್ಲಿ ಇದನ್ನು ಪರಿಚಯಿಸಲಾಗುತ್ತಿರುವ ಕಾರಣಕ್ಕಾಗಿ ಇನ್ನೂ ಇದು ಸರ್ಕಾರದ ಯಶಸ್ವಿನಿ ಯೋಜನೆ ಅಥವಾ ಖಾಸಗಿ ಆರೋಗ್ಯ ವಿಮಾ ಸೌಲಭ್ಯ ವ್ಯಾಪ್ತಿಗೊಳಪಟ್ಟಿಲ್ಲವೆಂದರು.ಈ ಸಂದರ್ಭದಲ್ಲಿ ಮಹಾಂತೇಶ ಸಜ್ಜನ್ ಇದ್ದರು.
Comments
Post a Comment