ಒತ್ತಡ ಜೀವನಕ್ಕೆ ಧ್ಯಾನವೇ ಪರಿಹಾರ- ರಾಜ ಯೋಗಿನಿ ಶಿವರಶ್ಮಿ ಅಕ್ಕ
ಜಯ ಧ್ವಜ ನ್ಯೂಸ್, ರಾಯಚೂರು, ಜೂ.29- ಋಣಾತ್ಮಕ ಆಲೋಚನೆ ಮತ್ತು ಒತ್ತಡದ ಜೀವನ ಅನಾರೋಗ್ಯಕ್ಕೆ ಕಾರಣ ಎನ್ನುವ ಎಚ್ಚರಿಕೆಯೊಂದಿಗೆ ಪ್ರತಿಯೊಬ್ಬರೂ ತಮ್ಮ ವೃತ್ತಿಯ ಒತ್ತಡ ನಿವಾರಣೆಗೆ ಧ್ಯಾನ ಮತ್ತು ಧನಾತ್ಮಕ ಅಂಶಗಳ ಆಲೋಚನೆಗೆ ಆದ್ಯತೆ ನೀಡಬೇಕೆಂದು ಚಿತ್ರದುರ್ಗದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಮುಖ್ಯಸ್ಥರಾದ ರಾಜ ಯೋಗಿನಿ ಶಿವರಶ್ಮಿ ಅಕ್ಕ ಹೇಳಿದರು. ಅವರಿಂದು ನಗರದ ಈಶ್ವರಿ ವಿಶ್ವವಿದ್ಯಾಲಯ ಆವರಣದಲ್ಲಿ ಪತ್ರಿಕ ದಿನಾಚರಣೆ ಅಂಗವಾಗಿ ಪತ್ರಕರ್ತರಿಗೆ ಹಾಗೂ ವೈದ್ಯರಿಗೆ, ಇಂಜಿನಿಯರಗಳಿಗೆ, ಲೆಕ್ಕಪರಿಶೋಧಕರಿಗೆ ಹಮ್ಮಿಕೊಂಡ ಒತ್ತಡ ನಿವಾರಣಾ ಕಾರ್ಯಗಾರದಲ್ಲಿ ಮಾತನಾಡಿದರು. ಸಮಾಜದ ನಿತ್ಯ ಕೆಲಸ ಕಾರ್ಯಗಳು ಒತ್ತಡದಲ್ಲಿ ಆರೋಗ್ಯ ರಕ್ಷಣೆ ನಿರ್ಲಕ್ಷ್ಯ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ತಮ್ಮ ಕೆಲಸ ಕಾರ್ಯಗಳನ್ನು ನಿರ್ವಹಿಸುವದೊರೊಂದಿಗೆ ಆರೋಗ್ಯದತ್ತ ಹೆಚ್ಚಿನ ಗಮನ ನೀಡುವುದು ನಮ್ಮ ಆದ್ಯ ಕರ್ತವವಾಗಿದೆ ಕಚೇರಿಗೆ ತೆರಳುವ ಪೂರ್ವ ಮನೆಯಲ್ಲಿಯ ಒಂದು ನಿಮಿಷ ಧ್ಯಾನ ಮಾಡಿ ಧನಾತ್ಮಕ ಆಲೋಚನೆ ಮೂಲಕ ಕಚೇರಿಗೆ ತೆರಳುವುದು ಹಾಗೂ ಕೆಲಸದ ಒತ್ತಡಕ್ಕೆ ಗುರಿ ಆಗದೆ ಅತ್ಯಂತ ಆಸಕ್ತಿಯಿಂದ ಮತ್ತು ಸರಳವಾಗಿ ಕೆಲಸ ನಿರ್ವಹಿಸುವತ್ತ ಗಮನ ಹರಿಸಬೇಕಾಗಿದೆ ಎಂದರು. ವೈದ್ಯರು, ಪತ್ರಕರ್ತರು, ಅಭಿಯಂತರರು ಹಾಗೂ ಲೆಕ್ಕ ಪರಿಶೋಧಕರು ತಮ್ಮ ವೃತ್ತಿಯಲ್ಲಿ ಭಾರಿ ಒತ್ತಡದಲ್ಲಿ ಕಾರ್ಯ ನಿರ್ವಹಿಸುವ ಸಂದರ್ಭ ನಾವು ಕಾಣುತ್ತೇವೆ ಇದು ಅವರ ಆರೋಗ್ಯದ ಮೇಲು ಪರಿಣಾಮ ಬೀರುತ್ತದೆ ಆದರೆ ಧನಾತ್ಮಕ ವಿಚಾರಗಳು ಹಾಗೂ ಧ್ಯಾನ ಸಮಾಧಾನಕರ ಆಲೋಚನೆಯಿಂದ ಕೆಲಸ ಕಾರ್ಯಗಳಲ್ಲಿ ಆರೋಗ್ಯ ಪೂರ್ಣವಾಗಿ ನಾವು ತೊಡಗಿಸಿಕೊಳ್ಳಬಹುದಾಗಿದೆ ಎಂದರು.
ಕಾರ್ಯಕ್ರಮ ಕುರಿತು ಪ್ರಾಸ್ತಾವಿಕ ನುಡಿಯನ್ನು ರಾಯಚೂರಿನ ಈಶ್ವರೀಯ ವಿಶ್ವವಿದ್ಯಾಲಯ ಮುಖ್ಯಸ್ಥರಾದ ರಾಜಯೋಗಿನಿ ಬಿ.ಕೆ ಸ್ಮಿತಾ ಅಕ್ಕನವರು ಮಾತನಾಡಿ ಒತ್ತಡದ ಮಧ್ಯದಲ್ಲಿ ವೈದ್ಯರು,ಪತ್ರಕರ್ತರು ಅಭಿಯಂತರರು ಮತ್ತು ಲೆಕ್ಕ ಪರಿಶೋಧಕರು ಕಾರ್ಯ ಮಾಡುವುದು ಕಾಮಣುತ್ತೇವೆ ತಮ್ಮ ಒತ್ತಡವನ್ನು ಹೇಗೆ ನಿವಾರಣೆ ಮಾಡಬೇಕು ಹೇಗೆ ನಿಯಂತ್ರಣ ಮಾಡಬೇಕು ಧ್ಯಾನ ಮೂಲಕ ಅವುಗಳನ್ನು ಹೇಗೆ ಯಶಸ್ವಿಗೊಳಿಸಬಹುದು ಒತ್ತಡದಿಂದ ನಾವುಗಳು ದೂರವಿದ್ದು ಕೆಲಸಗಳನ್ನು ಎಷ್ಟು ಸರಳವಾಗಿ ಮಾಡಬಹುದು ಎಂಬುವುದನ್ನು ತಿಳಿಸಿಕೊಡಲು ಈ ಕಾರ್ಯಗಾರವನ್ನು ಮಾಡಲಾಗಿದೆ ಎಂದು ಹೇಳಿದರು. ಹಿರಿಯ ಪತ್ರಕರ್ತ ಬಿ. ವೆಂಕಟ ಸಿಂಗ್ ಮಾತನಾಡಿ ರಾಯಚೂರಿನ ಪ್ರಜಾಪಿತ ಬ್ರಹ್ಮಕುಮಾರಿ ಸಂಸ್ಥೆಯವರು ಉತ್ತಮವಾದ ಕಾರ್ಯಗಾರವನ್ನ ಆಯೋಜನೆ ಮಾಡಿದ್ದಾರೆ ಇದರ ಲಾಭವನ್ನು ನಾವೆಲ್ಲರೂ ಪಡೆದುಕೊಳ್ಳೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ಸುಶಿಲೇಂದ್ರ ಸೋದೆಗಾರ್, ರಂಗನಾಥ್, ಛಾಯಾಗ್ರಹಕರಾದ ನಿವಾಸ್ ಇನಾಮದಾರ್, ಅಬ್ದುಲ್ ಖಾದರ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹ ಕಾರ್ಯದರ್ಶಿ ಡಾ. ದಂಡಪ್ಪ ಬಿರಾದಾರ್ ನಿರೂಪಿಸಿ ಮಾತನಾಡುತ್ತಾ ರಾಯಚೂರಿನ ಬ್ರಹ್ಮಕುಮಾರಿ ಸಂಸ್ಥೆ ನಡೆದು ಬಂದ ದಾರಿ ಜನರಲ್ಲಿ ಆಧ್ಯಾತ್ಮಿಕ ಅಂಶಗಳನ್ನು ತುಂಬಲು ಮತ್ತು ತಿಳಿದುಕೊಳ್ಳಲು ಅವರು ಮಾಡುವ ಕಾರ್ಯಕ್ರಮಗಳು ಇನ್ನಿತರ ಸಾಮಾಜಿಕ ಸೇವ ಕಾರ್ಯಕ್ರಮಗಳು ಕುರಿತು ಹೇಳಿದರು.
ಈ ಸಂದರ್ಭದಲ್ಲಿ ರಾಮಚಂದ್ರ ಪ್ರಭು, ಎಸ್ ಬೋಹರ ,ಡಾ. ಮನೋಹರ್ ಪತ್ತಾರ್, ಡಾ. ಸಿಂಗಾವಿ, ಬಿ.ವಿ ದೇಸಾಯಿ ನಾರಾಯಣ, ಚನ್ನಬಸವಣ್ಣ, ವಿಜಯ ಜಾಗಟಗಲ್ ಚಂದ್ರಕಾಂತ್ ಮಸಾನಿ, ಪ್ರಭಾ ಸುದ್ದಿಮೂಲ, ವೆಂಕಟೇಶ್ ಹೂಗಾರ್, ವಾಗೀಶ ಪಾಟೀಲ್ , ಶ್ರೀಕಾಂತ್ ಸಾವೂರ್,ರಘುನಾಥ್ ರೆಡ್ಡಿ, ಮಲ್ಲಿಕಾರ್ಜುನ್ ಸ್ವಾಮಿ,ಜಯ ಕುಮಾರ್ ದೇಸಾಯಿ, ಗುರುರಾಜ, ಶಂಕರ್, ಅಯ್ಯಪ್ಪ ಸೇರಿದಂತೆ ಅನೇಕರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
Comments
Post a Comment