ನಗರದಲ್ಲಿ ವಿಜೃಂಭಣೆಯಿಂದ ಜರುಗಿದ ಜಗನ್ನಾಥ ರಥಯಾತ್ರೆ
ಜಯ ಧ್ವಜ ನ್ಯೂಸ್, ರಾಯಚೂರು, ಜೂ.28- ನಿನ್ನೆ ನಗರದಲ್ಲಿ ವಿಜೃಂಭಣೆಯಿಂದ ಜಗನ್ನಾಥ ರಥಯಾತ್ರೆ ನಡೆಯಿತು. ಟೀಮ್ ನ್ಯೂ ವೃಂದಾವನ್ ಲ್ಯಾಂಡ್ ಸಂಘಟನೆಯಿಂದ ಆಯೋಜನೆಯಾದ ಈ ಪವಿತ್ರ ರಥ ಯಾತ್ರೆ ಬಸವನ ಭಾವಿ ವೃತ್ತದಿಂದ ಪ್ರಾರಂಭವಾಗಿ ಪಟೇಲ್ ರಸ್ತೆ, ಸರಾಫ್ ಬಜಾರ್, ಕ್ಲಾತ್ ಬಜಾರ್ ಮಾರ್ಗವಾಗಿ ಮಹಾಬಲೇಶ್ವರ ವೃತ್ತದವರೆಗೆ ಸಾಗಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ರಥ ಎಳೆದು ಪ್ರಸಾದ್ ಸ್ವೀಕರಿಸಿದರು.
ಯಾತ್ರೆಯ ಸಮಯದಲ್ಲಿ ಭಕ್ತರು ಭಜನೆ ಹಾಡುತ್ತಾ, ನೃತ್ಯ ಮಾಡುತ್ತಾ, ಭಕ್ತಿ ಭಾವದಲ್ಲಿ ತಲ್ಲೀನರಾಗಿ ಹೆಜ್ಜೆ ಇಟ್ಟರು. ರಥದೊಂದಿಗೆ ಸಾಗಿದ ಭಕ್ತರ ಜತೆ ಜತೆ ಯಾತ್ರೆಯ ಶ್ರದ್ಧಾಭಕ್ತಿಯಿಂದ ಪೂರಿತ ವಾತಾವರಣವು ನಗರದ ಬೀದಿಗಳಲ್ಲಿ ವಿಶಿಷ್ಟ ಚೈತನ್ಯವನ್ನು ಮೂಡಿಸಿತು. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಭಕ್ತಿಭಾವದಿಂದ ಪಾಲ್ಗೊಂಡರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಎ. ಪಾಪಾರೆಡ್ಡಿ, ಯುವ ಮುಖಂಡರಾದ ರವಿ ಬೋಸರಾಜು, ಮಂಚಾಲ್ ರವಿ,, ಪಾಲಿಕೆ ಸದಸ್ಯ ಶ್ರೀನಿವಾಸ್ ರೆಡ್ಡಿ, ಮಲ್ಲಿಕಾರ್ಜುನ ಪಾಟೀಲ್, ವಿಜಯ್ ರಾಜ್ ಇನ್ನಿತರರು ಉಪಸ್ಥಿತರಿದ್ದರು.
ಈ ಎಲ್ಲಾ ಕಾರ್ಯಕ್ರಮವನ್ನು ಟೀಮ್ ನ್ಯೂ ವೃಂದಾವನ್ ಲ್ಯಾಂಡ್‌ನ ಅಧ್ಯಕ್ಷರಾದ ಎಚ್.ಜಿ. ಜಯತೀರ್ಥ ದಾಸ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು. ಶಿಸ್ತುಬದ್ಧ ಕಾರ್ಯಕ್ರಮ ವ್ಯವಸ್ಥೆ ಮತ್ತು ಭಕ್ತರ ಆತ್ಮೀಯತೆಯಿಂದ ಯಾತ್ರೆ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.
Comments
Post a Comment