ಬಹುಕೋಟಿ ವಂಚನೆ ಪ್ರಕರಣ : ವಿನಿವಿಂಕ್ ಶಾಸ್ತ್ರಿ ಸೇರಿ ನಾಲ್ವರು ದೋಷಮುಕ್ತ
ಜಯ ಧ್ವಜ ನ್ಯೂಸ್,ರಾಯಚೂರು ಜೂ.25_
ಬಹುಕೋಟಿ ವಂಚನೆ ಪ್ರಕರಣದ ಆರೋಪಿಯಾಗಿದ್ದ ವಿನಿವಿಂಕ್ ಶಾಸ್ತ್ರಿ ಅಲಿಯಾಸ್ ಕೆ.ಎನ್.ಶ್ರೀನಿವಾಸ್ ಶಾಸ್ತ್ರಿ ಸೇರಿದಂತೆ ನಾಲ್ವರನ್ನು ದೋಷಮುಕ್ತಗೊಳಿಸಿ ಎರಡನೇ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಧೀಶರಾದ ಶ್ರೀ ಅನೀಲ್ ಶೇಖನವರ್ ತೀರ್ಪು ನೀಡಿದ್ದಾರೆ.
ವಿನಿವಿಂಕ್ ಶಾಸ್ತ್ರಿ ಅಲಿಯಾಸ್ ಕೆ.ಎನ್..ಶ್ರೀನಿವಾಸ್ ಶಾಸ್ತ್ರಿ, ಜಿ.ಲೋಕೇಶ್, ಶ್ರೀರಂಗ ಮತ್ತು ಯಧುನಾಥ ಕೋಲಾರ್ ದೋಷಮುಕ್ತಗೊಂಡ ಆರೋಪಿತರಾಗಿದ್ದಾರೆ.
ರಾಯಚೂರಿನ ಸಾರ್ವಜನಿಕರೊಬ್ಬರು ಸಲ್ಲಿಸಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ನಂತರ ವಂಚನೆ ಪತ್ತೆ ವಿಚಕ್ಷಣದ ಸಿಓಡಿ ತಂಡ ಬೆಂಗಳೂರಿನ ಡಿವೈಎಸ್‌ಪಿ ಎಸ್.ಎಲ್.ಸಿಂಗದ್ ನೇತೃತ್ವದಲ್ಲಿ ತನಿಖೆ ನಡೆಸಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಎರಡನೇ ಹೆಚ್ಚುವರಿ ಜೆಎಂಎಫ್ ಸಿ ನ್ಯಾಯಾಧೀಶ ಅನೀಲ್ ಶೇಖನವರ್ ಸಾಕ್ಷಧಾರಗಳ ಕೊರತೆ ಹಿನ್ನೆಲೆಯಲ್ಲಿ ಆರೋಪಿಗಳನ್ನು ದೋಷ ಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ.
ಹೆಚ್ಚಿನ ಬಡ್ಡಿ ನೀಡುವ ಆಮೀಷ ತೋರಿಸಿ ಹಣ ಹೂಡಿಕೆ ಮಾಡಿಕೊಂಡು ನಂತರ ವಂಚಿಸಿದ್ದಾರೆ ಎಂಬ ದೂರಿನಡಿ ನಡೆದ ತನಿಖೆಯಲ್ಲಿ ವಿನಿವಿಂಕ್ ಸೇರಿದಂತೆ 13 ಅಂಗ ಸಂಸ್ಥೆಗಳಲ್ಲಿನ ಹಣ ಹೂಡಿಕೆ ಸಂಬಂಧಿಸಿದಂತೆ 2005 ರಲ್ಲಿ ನಡೆದ ಬಹುಕೋಟಿ ವಂಚನೆ ಪ್ರಕರಣ ರಾಜ್ಯ ವ್ಯಾಪಿ ಸುದ್ದಿಯಾಗಿತ್ತು.
ವಿನಿವಿಂಕ್ ಶಾಸ್ತ್ರಿ ಅಲಿಯಾಸ್ ಕೆ.ಎನ್..ಶ್ರೀನಿವಾಸ್ ಶಾಸ್ತ್ರಿ ಸೇರಿ ಹಲವರನ್ನು ಬಂಧಿಸಲಾಗಿತ್ತು. ನಂತರ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು,ಹಲವು ಕಡೆ ಪ್ರಕರಣ ದಾಖಲಾಗಿದ್ದವು. ಇದರಲ್ಲಿ ರಾಯಚೂರುನ ಸದರ ಬಜಾರ್ ಪೊಲೀಸ್ ಠಾಣೆಯ ಕ್ರೈಂ ನಂಬರ್ 189/2005 ನ್ಯಾಯಾಲಯದ ಸಿಸಿ ನಂಬರ್ 1059/2008, 1061/2008, 1061/2008, ಪ್ರಕರಣ ದಾಖಲಾಗಿತ್ತು.ಆರೋಪಿಗಳಾದ ವಿನಿವಿಂಕ್ ಶಾಸ್ತ್ರಿ, ಲೋಕೇಶ್, ಯಧುನಾಥ ಕೋಲಾರ್ ಪರ ಶ್ರೀ ಚೂಡಾಮಣಿ ರಾಘವೇಂದ್ರ ವಕೀಲರು ವಾದಿಸಿದ್ದರು. ಶ್ರೀ ರಂಗ ಪರ ರೇಣುಕಾ ವಕೀಲರು ಹಾಜರಾಗಿದ್ದರು.
Comments
Post a Comment