ಏಮ್ಸ್ ಹೋರಾಟಗಾರರಿಂದ ಕೇಂದ್ರ ಸಚಿವರ ವಿರುದ್ಧ ನಿಂದನೆ ಆರೋಪ ಐವರ ವಿರುದ್ಧ  ಎಫ್ ಐ ಆರ್ ದಾಖಲು.                                                         ಜಯ ಧ್ವಜ ನ್ಯೂಸ್, ರಾಯಚೂರು,ಜೂ.25-                ಏಮ್ಸ್  ಕುರಿತಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ   ಹೇಳಿಕೆ ಖಂಡಿಸಿ ಅವರ ವಿರುದ್ಧ ಏಮ್ಸ್ ಹೋರಾಟಗಾರರಿಂದ ನಿಂದನೆ ಆರೋಪ ಹಿನ್ನಲೆಯಲ್ಲಿ ಇಂದು ನಗರದ ಪಶ್ಚಿಮ‌ ಠಾಣೆಯಲ್ಲಿ ಐವರು ಮೇಲೆ ಪ್ರಕರಣ ದಾಖಲಾಗಿದೆ.                                                         ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಪಾಟೀಲ್ ಲೆಕ್ಕಿಹಾಳ ದೂರಿನ ಮೇರೆಗೆ ಏಮ್ಸ್ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಬಸವರಾಜ ಕಳಸ, ಅಶೋಕ್ ಕುಮಾರ್ ಜೈನ್, ಎಸ್.ಮಾರೆಪ್ಪ, ಶ್ರೀನಿವಾಸ್ ಎಂ.ಆರ್.ಬೇರಿ ಇನ್ನಿತರರ ಮೇಲೆ ಪ್ರಕರಣ ದಾಖಲಾಗಿದೆ.             ಇಂದು ನಗರ ಶಾಸಕ ಡಾ.ಎಸ್ . ಶಿವರಾಜ ಪಾಟೀಲ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಛೇರಿಗೆ ತೆರಳಿ ಕೇಂದ್ರ ಸಚಿವರ ಮೇಲೆ ನಿಂದನೆ ಮಾಡಿದವರು ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಿ ಬೃಹತ್ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ ಬೆನ್ನೆಲ್ಲೆ ಅವರ ಮೇಲೆ ಪ್ರಕರಣ ದಾಖಲಾಗಿದ್ದು  ಏಮ್ಸ್ ಹೋರಾಟಗಾರರು ಮತ್ತು ಶಾಸಕರ ನಡುವಿನ ವಾಕ್ಸಮರ ಮತ್ಯಾವ ತಿರುವು ಪಡೆಯುತ್ತದೆ ಎಂಬುದು ಕಾದು ನೋಡಬೇಕಿದೆ.

Comments

Popular posts from this blog