ದಾಸ ಸಾಹಿತ್ಯದ ಮಹಾಮಹಿಮರು ಶ್ರೀ ಮೋಹನ ದಾಸರು -ಮುರಳಿಧರ ಕುಲಕರ್ಣಿ

ಜಯ ಧ್ವಜ ನ್ಯೂಸ್,    ರಾಯಚೂರು, ಜೂ.1ದಾಸ ಸಾಹಿತ್ಯಕ್ಕೆ ಸೈದ್ಧಾಂತಿಕ ಮಹತಿಯನ್ನು ತಂದುಕೊಟ್ಟ, ಹರಿದಾಸ ಸಂಸ್ಕೃತಿಯ ದಾಸವರೇಣ್ಯರಾದ ಶ್ರೀ ವಿಜಯದಾಸ ರಿಂದ ಅನುಗ್ರಹಿತರಾಗಿ ದಾಸ ದೀಕ್ಷೆಯನ್ನು ಪಡೆದು ಮೋಹನ ವಿಠಲ ಎಂಬ ಅಂಕಿತದಿಂದ ಹಲವಾರು ಸಂಕೀರ್ತಿನೆಗಳನ್ನು ರಚಿಸಿದ ಮಹಾಮಹಿಮರೆ ಶ್ರೀ ಮೋಹನದಾಸರು ಎಂದು ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿ ಅವರು ಹೇಳಿದರು.

    ಅವರು ಇಂದು  ಸಂಜೆ ನಗರದ ಜವಾಹರ ನಗರದ ಬಯಲು ಆಂಜನೇಯ ದೇವಸ್ಥಾನದಲ್ಲಿ ಶ್ರೀ ಮೋಹನ ದಾಸರ 210ನೇ ಮಧ್ಯರಾಧನೆಯ ಕಾರ್ಯಕ್ರಮದಲ್ಲಿ  ಅಧ್ಯಕ್ಷತೆ ವಹಿಸಿ ಮಾತನಾಡಿದರು. 


     ಮೋಹನದಾಸರು ಶ್ರೀವಿಜಯ ದಾಸರಿಗೆ ಸಾಕುಮಗ, ಹಂಪಿಯ ಚಕ್ರತೀರ್ಥದ ಬಳಿ ಕಷ್ಟದಿಂದ, ದುಃಖದಿಂದ ನಿರ್ಗತೀಕರಕಾರಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ  ಮಾಡಿಕೊಳ್ಳುವ ಸಂದರ್ಭದಲ್ಲಿ ತಾಯಿ ಮತ್ತು ಮಗುವನ್ನು ಸಂರಕ್ಷಿಸಿ ಮಗುವನ್ನು ತಾವೇ ಸ್ವತಹ: ಬೆಳೆಸಿ ದಾಸ ಸಾಹಿತ್ಯದ ಧ್ರುವ ತಾರೆಯನ್ನಾಗಿ ಮಾಡಿದ ಕೀರ್ತಿ ಶ್ರೀ ವಿಜಯದಾಸರಿಗೆ ಸಲ್ಲುತ್ತದೆ ಎಂದ ಅವರು ಶ್ರೀ ಮೋಹನ ದಾಸರು ಮೋಹನ ವಿಠಲ ಅಂಕಿತದಿಂದ 40 ಸಂಕೀರ್ತನೆಗಳು, 3 ಸುಳಾದಿ ಗಳು, 217 ನುಡಿಯ ಜಾನಪದ ಶೈಲಿಯ ಕೋಲಾಟ ಪದವನ್ನು ರಚಿಸಿ ದಾಸ ಸಾಹಿತ್ಯಕ್ಕೆ ವಿಶೇಷ ಕೊಡುಗೆಯನ್ನು ನೀಡಿದ್ದಾರೆ ಎಂದು ಹೇಳಿದರು. 


   ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ  ಪತ್ರಕರ್ತರಾದ ಜಯಕುಮಾರ್ ದೇಸಾಯಿ ಕಾಡ್ಲೂರು , ಮಾತನಾಡಿ ಶ್ರೀ ಮೋಹನದಾಸರ ಕಾಲವನ್ನು 1731 ರಿಂದ 1815 ರ ವರೆಗೆ ಎಂದು ಗುರುತಿಸಲಾಗಿದೆ ಇವರ ಕೃತಿಗಳಲ್ಲಿ ಭಕ್ತಿ ಮಾರ್ಗದ ಮುಖಾಂತರ ಮುಕ್ತಿಯ ಸಾಧನೆಯನ್ನು ಜನಸಾಮಾನ್ಯರಿಗೆ ತಿಳಿಸಿ ಹೇಳಿದ್ದಾರೆ, ಇವರ ಕೀರ್ತನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು.


 

ಕಾರ್ಯಕ್ರಮವನ್ನು ಹಿರಿಯರಾದ  ಸುರೇಶ್ ಕಲ್ಲೂರ್ ಅವರು ಉದ್ಘಾಟಿಸಿ ಶ್ರೀ ಮೋಹನ ದಾಸರ ಕೃತಿಗಳನ್ನು  ಸುಶ್ರಾವ್ಯವಾಗಿ ಹಾಡಿ  ಕಾರ್ಯಕ್ರಮಕ್ಕೆ  ಮೆರುಗು ತಂದರು.


   ಶ್ರೀ ಮೋಹನದಾಸರ ಭಾವಚಿತ್ರಕ್ಕೆ ಅರ್ಚಕರಾದ ಶ್ರೀಧರಾಚಾರ್ಯ ಮುಂಗಲಿ ಅವರು ಪೂಜೆಯನ್ನು ಸಲ್ಲಿಸಿ, ಮಂಗಳಾರತಿಯನ್ನು ಮಾಡಿದರು. 

 ಈ ಸಂದರ್ಭದಲ್ಲಿ  ರತ್ನ ಕಲ್ಲೂರ್,  ಸುಷ್ಮಾ ಕರಣಂ , ಅದಿತಿ ಕರಣಂ ಇವರಿಂದ ದಾಸವಾಣಿ ಜರುಗಿತು. 

 ಕಾರ್ಯಕ್ರಮದಲ್ಲಿ ರಾಘವೇಂದ್ರ ಜಾಗೀರದಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಹಲವಾರು ಭಜನಾ ಮಂಡಳಿಯ ಸದಸ್ಯರು ಮೋಹನದಾಸರ ಕೀರ್ತನೆಗಳನ್ನು ಭಜನೆಗೈದರು.

Comments

Popular posts from this blog