ಗಾಯಿತ್ರಿ ಭವನ ನಿರ್ಮಾಣಕ್ಕೆ 25 ಲಕ್ಷ ರೂ ಅನುದಾನ - ಎ.ವಸಂತ ಕುಮಾರ್.         
                                                         ಜಯ ಧ್ವಜ ನ್ಯೂಸ್, ರಾಯಚೂರು,ಜು.26- ನಗರದಲ್ಲಿ ನಿರ್ಮಾಣಹಂತದಲ್ಲಿರುವ ಬ್ರಾಹ್ಮಣ ಸಮಾಜದ ಗಾಯಿತ್ರಿ ಭವನ ಪೂರ್ಣಗೊಳಿಸಲು 25 ಲಕ್ಷ ರೂ. ಅನುದಾನ ನೀಡುತ್ತೇನೆಂದು  ವಿಧಾನಪರಿಷತ್ ಸದಸ್ಯರಾದ ಎ.ವಸಂತ ಕುಮಾರ್ ಘೋಷಿಸಿದರು. ಅವರಿಂದು ನಗರದ  ಶೃಂಗೇರಿ ಶಾರದಾ ಕಲ್ಯಾಣ ಮಂಟಪದಲ್ಲಿ ಕಲ್ಯಾಣ ಕರ್ನಾಟಕ ಬ್ರಾಹ್ಮಣ ಮಹಾಸಭಾ ಹಮ್ಮಿಕೊಂಡಿದ್ದ ವಿಪ್ರ ಶ್ರೀ ಹಾಗೂ ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಬ್ರಾಹ್ಮಣರು ಮೂಲತಃ ಪ್ರತಿಭಾವಂತರು ಬ್ರಹ್ಮ ದೇವರು ಅವರನ್ನು ಪ್ರತಿಭೆಯುಳ್ಳವರಾಗಿ ಎಂದು ಹಣೆಬರಹ ಬರೆದು ಕಳಿಸಿದ್ದಾರೆ ಎಂದರು.ಅವರಿಗೆ ಪ್ರತಿಭೋತ್ಸವ ಹಮ್ಮಿಕೊಳ್ಳುವ  ಅವಶ್ಯಕತೆಯಿಲ್ಲ ಆದರೆ ಅವರಲ್ಲಿರುವ ಯುವ ಪ್ರತಿಭೆಯನ್ನು  ಪ್ರೋತ್ಸಹಿಸುವುದಕ್ಕಾಗಿ ಪ್ರತಿಭೋತ್ಸವ ಮಾಡಲಾಗುತ್ತಿದೆ ಎಂದರು. ಬ್ರಾಹ್ಮಣ ಸಮಾಜ ಅತ್ಯಂತ ನಿಸ್ವಾರ್ಥ ಸಮಾಜ ಮತ್ತು ಇದ್ದದ್ದರಲ್ಲಿಯೆ ತೃಪ್ತಿ ಪಟ್ಟುಕೊಳ್ಳುವ ಆಡಂಬರಕ್ಕೆ ಆಕರ್ಷಣೆಗೆ ಮಾರು ಹೋಗದಿರುವ ಸಮಾಜ ಈ ಸಮಾಜದಲ್ಲಿಯೂ ಆರ್ಥಿಕವಾಗಿ ಹಿಂದುಳಿದವರು ಇದ್ದಾರೆ ಅದನ್ನು ಹೋಗಲಾಡಿಸಲು ಎಲ್ಲರು ಪ್ರಯತ್ನಿಸ ಬೇಕು ಎಂದರು. ಬ್ರಾಹ್ಮಣರು ಯಾರು ತಂಟೆಗೆ ಹೋಗುವವರೆಲ್ಲ ಅವರು ತಮ್ಮ ಅರ್ಚಕ ವೃತ್ತಿ ಮೂಲಕ ದೇವರನ್ನು ಪೂಜಿಸುವ ಕಾರ್ಯ ನಿಷ್ಟೆಯಿಂದ ಮಾಡುವವರು ಎಲ್ಲರಿಗೂ ದೇವರ ಅನುಗ್ರಹ ಸಿಗಲೆಂದು ಪ್ರಾರ್ಥಿಸುವವರು ಇಂದಿನ ದಿನಗಳಲ್ಲಿ ನಿಮ್ಮಲ್ಲಿರುವ ಪ್ರತಿಭಾವಂತರು ವಿದೇಶಕ್ಕೆ ಹೋಗಿ ಅಲ್ಲಿಯೇ ನೆಲೆಸುತ್ತಿದ್ದಿರಿ ಅದು ನಿಲ್ಲಬೇಕು ನಮ್ಮ ದೇಶಕ್ಕೆ ,ನಾಡಿಗೆ ಬ್ರಾಹ್ಮಣ ಪ್ರತಿಭೆಗಳ ಕೊರತೆಯಾಗಬಾರದೆಂದರು. ಈ ಹಿಂದೆ ರಾಜಕೀಯವಾಗಿ ಬ್ರಾಹ್ಮಣ ಸಮಾಜ ಮುಂಚೂಣಿಯಲ್ಲಿತ್ತು ಅತಿ ಹೆಚ್ಚು ಪ್ರಧಾನಿಯಾದವರು ಬ್ರಾಹ್ಮಣ ಸಾಮಾಜದವರು ಅಲ್ಲದೆ ಐಎಎಸ್ ಮುಂತಾದ ಉನ್ನತ ಹೆಜ್ಜೆಗಳಲ್ಲಿ ಇದ್ದವರು ಬ್ರಾಹ್ಮಣರು ಇತ್ತೀಚಿನ ದಿನಗಳಲ್ಲಿ ನಿಮ್ಮಲ್ಲಿ ರಾಜಕೀಯ ಪ್ರಜ್ಞೆ ಕಡಿಮೆಯಾಗುತ್ತಿದೆ ಅದು ಹೆಚ್ಚಳವಾಗಬೇಕು ನೀವು ರಾಜಕೀಯ ಪ್ರಾತಿನಿಧ್ಯ ಪಡೆಯಬೇಕೆಂದರು. ಸಮಾಜದಲ್ಲಿ ರಾಜಕೀಯ ನಾಯಕತ್ವಯಿಲ್ಲದಿದ್ದರೆ ಅಭಿವೃದ್ಧಿ ಅಸಾಧ್ಯವೆಂದರು. ನಾನು ಬಾಲ್ಯದಿಂದಲೂ ಬ್ರಾಹ್ಮಣರ ಒಡನಾಟದಲ್ಲಿ ಬೆಳೆದವನು ಅವರಿಂದು ಸಂಸ್ಕಾರ ಸನ್ನಡತೆ ಕಲೆತಿದ್ದೇನೆ ನನ್ನಲ್ಲಿರುವ ಒರಟುತನ ಹೋಗಲಾಡಿಸಿದ್ದು ಬ್ರಾಹ್ಮಣ ಸ್ನೇಹಿತರ ಸಂಪರ್ಕವೆಂದ ಅವರು ಬ್ರಾಹ್ಮಣ ಸಮಾಜ ಎಲ್ಲಾ ಸಮಾಜಗಳಿಗೆ ಆದರ್ಶ ಪ್ರಾಯವೆಂದರು.

Comments

Popular posts from this blog