ಯರಗೇರಾ ತಾಲೂಕು ರಚನೆ ಹೋರಾಟ ಸಮಿತಿಯಿಂದ ಕಂದಾಯ ಸಚಿವರು, ವಿರೋಧ ಪಕ್ಷದ ನಾಯಕರು, ಬಿಜೆಪಿ ರಾಜ್ಯಾಧ್ಯಕ್ಷರ ಭೇಟಿ

ಜಯ ಧ್ವಜ ನ್ಯೂಸ್, ರಾಯಚೂರು, ಜು.23- ಯರಗೇರಾ ತಾಲೂಕು ಹೋರಾಟ ಸಮಿತಿ ವತಿಯಿಂದ   ಬೆಂಗಳೂರಿನಲ್ಲಿ   ಮಾನ್ಯ ಕಂದಾಯ ಸಚಿವರಾದ   ಕೃಷ್ಣ ಬೈರೇಗೌಡ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಚಲುವಾದಿ ನಾರಾಯಣ ಸ್ವಾಮಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರರವರನ್ನು  ಭೇಟಿಯಾಗಿ ಮನವಿ ಮಾಡಲಾಯಿತು .


ಯರಗೇರಾ ತಾಲೂಕ ಘೋಷಣೆ ಮಾಡಲು ಹೋರಾಟ ಸಮಿತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು.  ಈ ಮನವಿ ಪತ್ರ  ಸ್ವೀಕರಿಸಿದ ಸಚಿವರು  ಯರಗೇರಾ ತಾಲೂಕ ಘೋಷಣೆಗೆ ಉತ್ತಮ ರೀತಿಯಲ್ಲಿ  ಸ್ಪಂದಿಸಿ ಆಶ್ವಾಸನೆ ನೀಡಿದ್ದು ಇತರ ನಾಯಕರು ಸಹ ಬೆಂಬಲಿಸುವುದಾಗಿ ತಿಳಿಸಿದ್ದಾರೆ. 

ಈ ಸಂದರ್ಭದಲ್ಲಿ ಹೋರಾಟ ಸಮಿತಿ ಪ್ರಧಾನ ಸಂಚಾಲಕರರಾದ  ಮಹ್ಮದ್  ನಿಜಾಮುದ್ದೀನ್ , ಸಂಚಾಲಕರಾದ  ಬಸವರಾಜ್ ಹೂಗಾರ್  ಮತ್ತು ಪದಾಧಿಕಾರಿಗಳಾದ ಶ್ರೀ ವಿದ್ಯಾನಂದ ರೆಡ್ಡಿ, ಮೆಹಬೂಬ್ ಪಟೇಲ್, ರಾಘವೇಂದ್ರ ಚಾರ್ಯ   ಜೋಷಿ ,ಟಿ. ಜನಾರ್ಧನ,  ವೈ . ಭೀಮಸೇನ  ನಾಯಕ, ಮೂತಿ೯  ಶೆಟ್ಟಿ,  ಮಹಮ್ಮದ್ ರಫಿ, ಜಗದೀಶ್ ರೆಡ್ಡಿ,ರಮೇಶ್  ಮಿಲ್ ,ಮಹಾದೇವ  ನಾಯಕ್,  ನರಸಿಂಹ ಗುಂಜಳ್ಳಿ,  ಅನಿಲ್ ಕುಮಾರ್ ಗುಂಜಳ್ಳಿ, ಫಾರೂಕ್ ಎಲ್ಐಸಿ, ಸುನೀಲ್ , ಮುಕ್ತರ , ಇನ್ನಿತರರು ಉಪಸ್ಥಿತರಿದ್ದರು.

Comments

Popular posts from this blog