ಪರೋಪಕಾರಿ ಮನೋಭಾವದ ಪ್ರಹ್ಲಾದ್ ರಾವ್ ಕುಲಕರ್ಣಿ ರವರಿಗೆ ಒಲಿದ "ವಿಪ್ರ ಸಮಾಜ ಸೇವಾ" ಪ್ರಶಸ್ತಿ


 ಜಯ ಧ್ವಜ ನ್ಯೂಸ್, ರಾಯಚೂರು,ಜು.25- ಪರೋಪಕಾರಿ ಮನೋಭಾವದ ಪ್ರಹ್ಲಾದ್ ರಾವ್ ಕುಲಕರ್ಣಿ ರವರಿಗೆ ಒಲಿದ "ವಿಪ್ರ ಸಮಾಜ ಸೇವಾ" ಪ್ರಶಸ್ತಿ .                                 ಪ್ರಹ್ಲಾದ ರಾವ ಕುಲಕರ್ಣಿ ಅವರು ಪ್ರತಿಷ್ಠಿತ ರಾಯಚೂರಿನ ರಾಯಕೆಮ್  ಆಂಟಿಬೋಟಿಕ್  ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ಇವರು ರಾಯಚೂರಿನಲ್ಲಿ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ನಿರಂತರ ಕಾರ್ಯ ಚಟುವಟಿಕೆಗಳಿಗೆ ಪ್ರಸಿದ್ಧಿಯನ್ನು ಪಡೆದು ಪರೋಪಕಾರಿ ಮನೋಭಾವ ಬೆಳೆಸಿಕೊಂಡು ಸಮಾಜಕ್ಕೆ ಮಾದರಿಯಾಗಿದ್ದಾರೆ. 

ಹಲವಾರು ಮಠಮಾನ್ಯಗಳಿಗೆ ,ದೇವಾಲಯಗಳಿಗೆ, ಸಂಘ ಸಂಸ್ಥೆಗಳಿಗೆ ಅವಶ್ಯಕತೆಗೆ ತಕ್ಕಂತೆ ಸೇವೆಯನ್ನು ಸಲ್ಲಿಸುತ್ತಿದ್ದಾರೆ. 

 ವಿಶೇಷವಾಗಿ ಆಸರೆ ವೃದ್ಧ ಆಶ್ರಮದ ಹಿರಿಯ ಜೀವಿಗಳ ರಕ್ಷಣೆಗಾಗಿ ಸುಸಜ್ಜಿತವಾದ ಅಂಬುಲೆನ್ಸ್ ಒದಗಿಸುವ ಮೂಲಕ ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.  ಅಲ್ಲದೆ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉಚಿತ ಊಟದ ವ್ಯವಸ್ಥೆಯನ್ನು, ಬಡ ಮಕ್ಕಳಿಗೆ ಕಂಪ್ಯೂಟರ್ ತರಬೇತಿ ಕೇಂದ್ರವನ್ನು ಪ್ರಾರಂಭಿಸಿ ಫಲಪ್ರದವಾದ ಸಾಮಾಜಿಕ ಸೇವೆಯನ್ನು ಮಾಡುತ್ತಿದ್ದಾರೆ.   ಇದಲ್ಲದೆ ಹಲವಾರು ಬಡ ವಿದ್ಯಾರ್ಥಿಗಳಿಗೆ ಧನಸಹಾಯ, 

ಸಂಘ ಸಂಸ್ಥೆಗಳ  ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡುವುದರ ಮೂಲಕ  ರಾಯಚೂರಿನ ಅಚ್ಚುಮೆಚ್ಚಿನ  ಸಹೃದಯ ರಾಗಿದ್ದಾರೆ.

 ಇವರ ಸಮಾಜ ಸೇವೆಯನ್ನು ಪರಿಗಣಿಸಿ ಜು. 26 ಶನಿವಾರದಂದು ಸಂಜೆ ಗಾಜಗಾರ ಪೇಟೆಯ ಶ್ರೀ ಶೃಂಗೇರಿ ಶಾರದಾ ಕಲ್ಯಾಣ ಮಂಟಪ   ರಾಯಚೂರಿನಲ್ಲಿ   ಕಲ್ಯಾಣ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ    ನಡೆಯುತ್ತಿರುವ ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ಇವರಿಗೆ "ವಿಪ್ರ ಸಮಾಜ ಸೇವಾ ಪ್ರಶಸ್ತಿ"  ನೀಡಿ ಗೌರವಿಸಿ ಅಭಿನಂದಿಸಲಾಗುತ್ತಿದೆ.



Comments

Popular posts from this blog