ಕೆಯುಡ್ಬ್ಲೂಜೆ ಜಿಲ್ಲಾ ಘಟಕದಿಂದ ಜು.27 ರಂದು ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ - ಆರ್ .ಗುರುನಾಥ. ಜಯ ಧ್ವಜ ನ್ಯೂಸ್ ರಾಯಚೂರು, ಜು.25- ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತಾಶ್ರಯದಲ್ಲಿ ಜು.27 ರಂದು ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಲಿಂಗಸ್ಗೂರಿನಲ್ಲಿ ಆಯೋಜಿಸಲಾಗಿದೆ ಎಂದು ಕೆಯುಡ್ಬ್ಲುಜೆ ಜಿಲ್ಲಾ ಅಧ್ಯಕ್ಷ ಆರ್.ಗುರುನಾಥ ಹೇಳಿದರು.
ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜು.27 ರಂದು ಲಿಂಗಸ್ಗೂರಿನ ವಿಜಯ ಮಹಾಂತೇಶ್ವರ ಶಾಖಾ ಮಠದ ಸಭಾಂಗಣದಲ್ಲಿ ಬೆಳಿಗ್ಗೆ 11 ಗಂಟೆಗೆ ನಡೆಯುವ ಕಾರ್ಯಕ್ರಮ ಸಾನಿಧ್ಯವನ್ನು ಚಿತ್ತರಗಿ ವಿಜಯ ಮಹಾಂತೇಶ್ವರ ಶಾಖಾ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ವಹಿಸಲಿದ್ದು , ಉದ್ಘಾಟನೆಯನ್ನು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ನೆರವೇರಿಸಲಿದ್ದು ,ಪ್ರಶಸ್ತಿ ಪ್ರದಾನವನ್ನು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ನೆರವೇರಿಸಲಿದ್ದಾರೆ ಎಂದರು. ಆಶಯ ನುಡಿಗಳನ್ನು ಕೆಯುಡ್ಬ್ಲುಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಲಿದ್ದು , ತ್ರಿವರ್ಣ ನ್ಯೂಸ್ ಸಂಪಾದಕ ಬಿ.ಎಂ.ಹನೀಫ್ ಅತಿಥಿ ಉಪನ್ಯಾಸ ನೀಡಲಿದ್ದಾರೆ ಎಂದರು.ಅಧ್ಯಕ್ಷತೆಯನ್ನು ಆರ್ ಗುರುನಾಥ ವಹಿಸಲಿದ್ದು, ಪ್ರಾಸ್ತಾವಿಕವಾಗಿ ಕೆಯುಡ್ಬ್ಲುಜೆ ತಾಲೂಕಾಧ್ಯಕ್ಷ ಗುರುರಾಜ ಗೌಡೂರು ಮಾತನಾಡಲಿದ್ದಾರೆ ಎಂದರು. ಅಮರಯ್ಯ ಘಂಟಿ ಉಪಸ್ಥಿತರಿರಲಿದ್ದಾರೆ ಎಂದರು. ಮುಖ್ಯ ಅತಿಥಿಗಳಾಗಿ ಸಂಸದ ಜಿ.ಕುಮಾರ್ ನಾಯಕ, ಶಾಸಕರಾದ ಹಂಪನಗೌಡ ಬಾದರ್ಲಿ, ಬಸನಗೌಡ ದದ್ದಲ್, ಮಾನಪ್ಪ ವಜ್ಜಲ್,ಡಾ.ಶಿವರಾಜ ಪಾಟೀಲ್, ಬಸನಗೌಡ ತುರ್ವಿಹಾಳ,ಹಂಪಯ್ಯ ನಾಯಕ, ಕರೆಮ್ಮು.ಜಿ.ನಾಯಕ,ವಿಧಾನ ಪರಿಷತ್ ಸದಸ್ಯ ಎ.ವಸಂತ ಕುಮಾರ್, ಶರಣಗೌಡ ಬಯ್ಯಾಪೂರು, ಬಸನಗೌಡ ಬಾದರ್ಲಿ, ಮಾಜಿ ಶಾಸಕರಾದ ಡಿ.ಎಸ್.ಹೂಲಗೇರಿ, ಜಿಲ್ಲಾಧಿಕಾರಿ ನಿತೀಶ್.ಕೆ, ಎಸ್ಪಿ ಪುಟ್ಟಮಾದಯ್ಯ, ಪುರಸಭೆ ಅಧ್ಯಕ್ಷ ಬಾಬುರೆಡ್ಡಿ ಮುನ್ನೂರು ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.
ಜೀವಮಾನ ಸಾಧನೆಗಾಗಿ ದಿ.ಎನ್.ಕೆ.ಕುಲಕರ್ಣಿ ಪ್ರಾಯೋಜಿತ ಪ್ರಶಸ್ತಿಯನ್ನು ಕಂಪಿಲವಾಣಿ ಪತ್ರಿಕೆ ಸಂಪಾದಕ ಭೀಮರಾಯ ಹದ್ದಿನಾಳ ಮತ್ತು ದಿ.ಶಿವಶಂಕರಗೌಡ ಯದ್ದಲದಿನ್ನಿ ಸ್ಮರಣಾರ್ಥ ಪ್ರಶಸ್ತಿಯನ್ನು ವಿಜಯವಾಣಿ ತಾಲೂಕು ವರದಿಗಾರ ಎನ್.ಬಸವರಾಜ ರವರಿಗೆ ನೀಡಲಾಗುತ್ತಿದೆ ಎಂದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿಯನ್ನು ನ್ಯೂಸ್ 18 ಜಿಲ್ಲಾ ವರದಿಗಾರ ವಿಶ್ವನಾಥ್ ಹೂಗಾರ, ಪವರ್ ಟಿವಿ ವರದಿಗಾರ ನೀಲಕಂಠಸ್ವಾಮಿ , ಸಾಕ್ಷಿ ಪತ್ರಿಕೆಯ ಹಿರಿಯ ವರದಿಗಾರ ಹೆಚ್.ವೀರನಗೌಡ,
ವಿವಿಧ ಪತ್ರಿಕೆಗಳ ತಾಲೂಕಾ ವರದಿಗಾರರಾದ ಅಮರೇಶ ಚಲ್ಕರಾಗಿ, ನವೀನ್ ಕುಮಾರ್, ಅಮರೇಶ ಸಾಲಿಮಠ, ಸುನೀಲ್ ಕುಮಾರ್, ರಾಘವೇಂದ್ರ, ಬಿ.ಮಲ್ಲಪ್ಪ, ಶಶಿಧರ ಕಂಚಿಮಠ, ಪತ್ರಿಕಾ ವಿತರಕ ವಿರೇಶ .ಎಂ.ಕರಡಿ ರವರಿಗೆ ಒಟ್ಟು ಹನ್ನೊಂದು ವಾರ್ಷಿಕ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಪ್ರಶಸ್ತಿ ಆಯ್ಕೆಯನ್ನು ಸರ್ವಾನುಮತದಿಂದ ಅಂತಿಮಗೊಳಿಸಲಾಗಿದೆ ಎಂದರು. ಸರ್ಕಾರದಿಂದ ಪತ್ರಕರ್ತರಿಗೆ ಸಿಗಬೇಕಾದ ಸೌಕರ್ಯ ಕೊಡಿಸುವ ಪ್ರಯತ್ನ ನಿರಂತರವಾಗಿ ಸಂಘ ಮಾಡುತ್ತಿದೆ ಆರೋಗ್ಯ ಸಂಜೀವಿನಿ ಮಾನ್ಯತೆ ಪಡೆದ ಪತ್ರಕರ್ತರಿಗಿದ್ದು ಅದನ್ನು ಗ್ರಾಮೀಣ ಪ್ರದೇಶದ ಪತ್ರಕರ್ತರಿಗೆ ವಿಸ್ತರಿಸುವ ಬಗ್ಗೆ ಸರ್ಕಾರಕ್ಕೆ ಮನವಿ ಮಾಡುತ್ತೇವೆಂದ ಅವರು ಪತ್ರಕರ್ತರ ಸಮಸ್ಯೆಗೆ ಧ್ವನಿಯಾಗಿ ಕಾರ್ಯನಿರತ ಪತ್ರಕರ್ತರ ಸಂಘ ಶ್ರಮಿಸಲಿದ್ದು ಏನೆ ಸಣ್ಣ ಪುಟ್ಟ ಭಿನ್ನಾಭಿಪ್ರಾಯವಿದ್ದರೂ ಅದನ್ನು ಸರಿಪಡಿಸಿಕೊಂಡು ಸಾಗುತ್ತೇವೆ ಎಂದರು. ಈ ಸಂದರ್ಭದಲ್ಲಿ ಕೆಯುಡ್ಬ್ಲುಜೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಪಾಷಾ ಹಟ್ಟಿ, ಉಪಾಧ್ಯಕ್ಷ ಶಿವಪ್ಪಮಡಿವಾಳರ್, ಕಾರ್ಯಕಾರಿ ಸಮಿತಿ ಸದಸ್ಯ ಸಿದ್ದಯ್ಯ ಸ್ವಾಮಿ ಕುಕನೂರು ಇದ್ದರು.
Comments
Post a Comment