ವಿಪ್ರಶ್ರೀ ಪ್ರಶಸ್ತಿಗೆ ವಿಜಯರಾವ್ ಗುಂಜಳ್ಳಿ ಆಯ್ಕೆ
ಜಯ ಧ್ವಜ ನ್ಯೂಸ್ , ರಾಯಚೂರು, ಜು.25- ಉದ್ಯಮಿ ಹಾಗೂ ಧಾರ್ಮಿಕ ಚಟುವಟಿಕೆ ಕ್ಷೇತ್ರದಲ್ಲಿ ಸಾಧನೆಗೈದ ವಿಜಯರಾವ್ ಗುಂಜಳ್ಳಿಯವರನ್ನು ಕಲ್ಯಾಣ ಕರ್ನಾಟಕ ಬ್ರಾಹ್ಮಣ ಮಹಾಸಭಾ ವಿಪ್ರ ಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿದೆ ಅವರು ಮೂಲತಃ ಗುಂಜಳ್ಳಿ ಗ್ರಾಮದವರಾಗಿದ್ದು ಕೃಷಿಕರಾಗಿದ್ದಾರೆ.
ಇವರ ತಂದೆ ಭೀಮಸೇನ್ ರಾವ್ ಗುಂಜಳ್ಳಿ, ತಾಯಿ ಕಲ್ಯಾಣ ಭಾಯಿ. ಇವರ ತಂದೆಯಾದ ಭೀಮಸೇನ್ ರಾವ್ ಗುಂಜಳ್ಳಿ ಯವರು ಸ್ವತಂತ್ರ ಹೋರಾಟಗಾರರು ಹಾಗೂ ಕಲ್ಯಾಣ ಕರ್ನಾಟಕದ ವಿಮೋಚನೆಗಾಗಿ ಹೋರಾಡಿ ಜೈಲು ವಾಸ ಅನುಭವಿಸಿದ ಧೀರ ಹೋರಾಟ ಗಾರರಾ ಗಿದ್ದರು.
ಶ್ರೀ ವಿಜಯರಾವ್ ಗುಂಜಳ್ಳಿ ಅವರು ಡಿ ಫಾರ್ಮ್ ವಿದ್ಯಾಭಾಸವನ್ನು ಮುಗಿಸಿದ ನಂತರ 50 ವರ್ಷಗಳವರೆಗೆ ಮೆಡಿಕಲ್ ಸ್ಟೋರ್ ಹಾಗೂ ಪೆಟ್ರೋಲ್ ಬಂಕ್ ಸ್ಥಾಪಿಸಿದ್ದಾರೆ ಇವರು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಗುಂಜಳ್ಳಿಯಲ್ಲಿ ರಾಮಲಿಂಗೇಶ್ವರ ದೇವಸ್ಥಾನ, ಶ್ರೀ ಹನುಮಂತ ದೇವಸ್ಥಾನ, ಶ್ರೀ ಚನ್ನಕೇಶವ ದೇವಸ್ಥಾನ ಗಳನ್ನು ಜೀರ್ಣೋದ್ಧಾರಗೊಳಿಸಿ ಅಲ್ಲಿ ಧಾರ್ಮಿಕ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಕರೋನ ಸಮಯದಲ್ಲಿ ಇವರು ಅವಶ್ಯಕತೆ ಇದ್ದಂತ ಜನರಿಗೆ ಹಾಗೂ ಪೊಲೀಸ್ ಸಿಬ್ಬಂದಿಗಳಿಗೆ, ಆಸ್ಪತ್ರೆಗಳಿಗೆ ಬಿಸಿ ಊಟದ ವ್ಯವಸ್ಥೆಯನ್ನು ಮಾಡಿ ಸಾಮಾಜಿಕ ಕಾರ್ಯವನ್ನು ಕೈಗೊಂಡಿದ್ದಾರೆ.
ಇವರ ಸಾಮಾಜಿಕ, ಧಾರ್ಮಿಕ, ಕೃಷಿ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಪರಿಗಣಿಸಿ ಕಲ್ಯಾಣ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಯಚೂರು ವತಿಯಿಂದ ಇದೇ ಜುಲೈ 26ರಂದು ಶ್ರೀ ಶೃಂಗೇರಿ ಶಾರದ ಕಲ್ಯಾಣ ಮಂಟಪ ಗಾಜರ ಪೇಟೆಯಲ್ಲಿ ಜರಗುವ ಪ್ರತಿಬೋತ್ಸವ ಕಾರ್ಯಕ್ರಮದಲ್ಲಿ ಇವರಿಗೆ ವಿಪಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿ ಅಭಿನಂದಿಸುತ್ತಿದೆ ಎಂದು ಕಲ್ಯಾಣ ಕರ್ನಾಟಕ ಬ್ರಾಹ್ಮಣ ಮಹಾಸಭಾ ತಿಳಿಸಿದೆ.
Comments
Post a Comment