ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಆ.1 ಬೃಹತ್ ಪ್ರತಿಭಟನೆ:                                                  ಪಕ್ಷಾತೀತವಾಗಿ ಹೋರಾಟದಲ್ಲಿ ನಾಯಕರು ಭಾಗಿ- ವಿರುಪಾಕ್ಷಿ.                                                                                                     ಜಯ ಧ್ವಜ ನ್ಯೂಸ್, ರಾಯಚೂರು, ಜು.31- ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಆ.1 ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಒಳ ಮೀಸಲಾತಿ ಜಾರಿ ಹೋರಾಟ ಸಮಿತಿ ಸಂಚಾಲಕರಾದ ಎಂ.ವಿರುಪಾಕ್ಷಿ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಆ.1 ರಂದು ಬೆಳಿಗ್ಗೆ 10 ಕ್ಕೆ ನಗರದ ಅಂಬೇಡ್ಕರ್ ವೃತ್ತದಲ್ಲಿ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ನಡೆಯುವ ಹೋರಾಟದಲ್ಲಿ ಒಳ ಮೀಸಲಾತಿ ಒಳಪಡುವ ಸಮುದಾಯಗಳ ಎಲ್ಲಾ ಹೋರಾಟ ಸಂಘಟನೆಗಳು, ಪಕ್ಷಗಳ ನಾಯಕರು, ನೌಕರರು, ವಕೀಲರು, ವಿದ್ಯಾವಂತರು, ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ ಎಂದರು. ಸತತ ಮೂವತ್ತು ವರ್ಷಗಳ ಹೋರಾಟ ಫಲವಾಗಿ ಒಳ ಮೀಸಲಾತಿ ಜಾರಿ ನಿರ್ಣಾಯಕ ಹಂತದಲ್ಲಿದ್ದು ಸುಪ್ರೀಂ ಕೋರ್ಟ್ ಒಳ ಮೀಸಲಾತಿ ಜಾರಿ ರಾಜ್ಯ ಸರ್ಕಾರದ ಜವಾಬ್ದಾರಿ ಎಂದು ತೀರ್ಪು ನೀಡಿದ ಬಳಿಕ ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ ರವರ ಅಧ್ಯಕ್ಷತೆಯಲ್ಲಿ ಏಕ ಸಮಿತಿ ರಚಿಸಿತು ಇಂಪೀರಿಕಲ್ ಡಾಟಾ ಪಡೆಯಲು ಸರ್ಕಾರ ಸಮೀಕ್ಷೆ ಕೈಗೊಂಡು ಈಗಾಗಲೆ ದತ್ತಾಂಶ ಸಂಗ್ರಹ ಮುಗಿದಿದೆ ಸರ್ಕಾರ ಮಳಿಗಾಲದ ಅಧಿವೇಶನದಲ್ಲಿ ವರದಿ ಅಂಗಿಕರಿಸಿ ಮೀಸಲಾತಿ ಜಾರಿ ಮಾಡಬೇಕೆಂದು ಒತ್ತಾಯಿಸಿದರು. ಹರಿಯಾಣ, ತೆಲಂಗಾಣ, ಆಂಧ್ರ ಪ್ರದೇಶದಲ್ಲಿ ಒಳ ಮೀಸಲಾತಿ ಜಾರಿಗೊಳಿಸಲಾಗಿದೆ ನಮ್ಮ ರಾಜ್ಯದಲ್ಲಿ ವಿನಾಕಾರಣ ವಿಳಂಬ ಸಲ್ಲದು ಎಂದರು‌.

ಮಾಜಿ ಸಚಿವ ಹೆಚ್.ಆಂಜಿನೇಯರವರು ನಮ್ಮ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ ಸರ್ಕಾರ ಒಳ ಮೀಸಲಾತಿ ಜಾರಿ ಮಾಡುತ್ತದೆ ಪ್ರತಿಭಟನೆ ಕೈಬಿಡಿ ಎಂದಿದ್ದಾರೆ ಆದರೆ ನಾವು ಅದನ್ನು ಪುರಸ್ಕರಿಸದೆ ಹೋರಾಟದ ಮಾಡುವ ದಿಟ್ಟ ತೀರ್ಮಾನ ಮಾಡಿದ್ದೇವೆಂದರು. ಯಾವುದೆ ದಲಿತ ಸಂಘಟನೆಗಳು ಒಳ ಮೀಸಲಾತಿಗಾಗಿ ಹೋರಾಟ ನಡೆಸಿದರೂ ಅದು ಪ್ರತ್ಯೇಕ ಹೋರಾಟವೆಂದು ಭಾವಿಸುವುದಿಲ್ಲ ಎಲ್ಲರ ಹೋರಾಟ ಒಳ ಮೀಸಲಾತಿ ಪಡೆಯುವ ಉದ್ದೇಶಕ್ಕಾಗಿ ಎಂದು ಉದಾತ್ತ ಭಾವನೆ ನಮ್ಮದಾಗಿದೆ ಎಂದರು.        ಈ ಸಂದರ್ಭದಲ್ಲಿ ಮುಖಂಡರಾದ ರವೀಂದ್ರ ಜಲ್ದಾರ್, ಪಿ.ಯಲ್ಲಪ್ಪ, ಈರಣ್ಣ ಭಂಡಾರಿ,ತಿಮ್ಮಪ್ಪ ಫಿರಂಗಿ, ನಾಗರಾಜ್,ಶಂಶಾಲಂ, ಸುಭಾಷ್, ಬಸವರಾಜ ,ಎನ್.ಶಂಕರ್ ಸೇರಿದಂತೆ ಅನೇಕರಿದ್ದರು.

Comments

Popular posts from this blog