ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸೇರಿದಂತೆ ವಿವಿಧೆಡೆ ಜು.26 ರಿಂದ 28ರವರೆಗೆ ಡಾ.ಈ.ವಿ.ಸ್ವಾಮಿನಾಥನ್ ರವರಿಂದ ಉಪನ್ಯಾಸ ಕಾರ್ಯಕ್ರಮ -ಸ್ಮಿತಾ ಅಕ್ಕ. ಜಯ ಧ್ವಜ ನ್ಯೂಸ್, ರಾಯಚೂರು, ಜು.24- ಪ್ರಸಿದ್ಧ ಉಪನ್ಯಾಸಕಾರ ರಾದ ಡಾ.ಈ.ವಿ.ಸ್ವಾಮಿನಾಥನ್ ಮುಂಬೈ ಅವರಿಂದ ಜು.26 ರಿಂದ 28 ವರೆಗೆ ಈಶ್ವರೀಯ ವಿಶ್ವವಿದ್ಯಾಲಯ ಸೇರಿದಂತೆ ನಗರದ ವಿವಿಧೆಡೆ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸ್ಮಿತಾ ಅಕ್ಕ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜು.26 ರಂದು ರಿಮ್ಸ್ ಆಸ್ಪತ್ರೆಯಲ್ಲಿ ಮಾನಸಿಕ ಮತ್ತು ಭಾವನಾತ್ಮಕ ವಿಷಯ ಕುರಿತು ಬೆಳಿಗ್ಗೆ 9.30 ರಿಂದ 11.30ರವರೆಗೆ ಉಪನ್ಯಾಸ ನಂತರ ರಂಗಮಂದಿರದಲ್ಲಿ ಶಿಕ್ಷಕರು ಮತ್ತು ಅಧ್ಯಾಪಕರಿಗೆ ಪರಿಣಾಮಕಾರಿ ಬೋಧನೆ ಬಗ್ಗೆ ಉಪನ್ಯಾಸ ನಂತರ ಸಂಜೆ 5.30ರಿಂದ 7.30 ವರೆಗೆ ಉದ್ಯಮಿದಾರರು , ವಕೀಲರು, ಬ್ಯಾಂಕ್ ಉದ್ಯೋಗಿಗಳಿಗೆ, ಎನ್ ಜಿ ಓ ಸಂಸ್ಥೆಗಳ ಸದಸ್ಯರಿಗೆ ಮಾನಸಿಕ ಒತ್ತಡ ನಿವಾರಣೆ ಕುರಿತು ಉಪನ್ಯಾಸ ನಡೆಯಲಿದೆ ಎಂದರು.
ಜು.27 ರಂದು ಬೆಳಿಗ್ಗೆ 6ಕ್ಕೆ ಪೋಲೀಸ್ ಮೈದಾನದಲ್ಲಿ ಪೋಲೀಸರಿಗೆ ಸ್ವ ಸಬಲಿಕರಣ ಕುರಿತು ಉಪನ್ಯಾಸ ನಂತರ 8ಕ್ಕೆ ಬ್ರಹ್ಮಕುಮಾರಿ ಈಶ್ವರೀಯ ವಿವಿಯಲ್ಲಿ ರಾಜಯೋಗ ಶಕ್ತಿ ಕುರಿತು ವೈದ್ಯರಿಗೆ ಉಪನ್ಯಾಸ ನಡೆಯಲಿದೆ ಎಂದರು. ಜು.28 ರಂದು ಬೆಳಿಗ್ಗೆ 6ಕ್ಕೆ ಪೊಲೀಸ್ ಮೈದಾನದಲ್ಲಿ ಒತ್ತಡ ನಿವಾರಣೆ ಬಗ್ಗೆ ಪೊಲೀಸರಿಗೆ ಉಪನ್ಯಾಸ ನಡೆಯಲಿದೆ ಎಂದರು. ಎಲ್ಲರೂ ಈ ಕಾರ್ಯಕ್ರಮದ ಸದುಪಯೋಗ ಪಡೆಯುವಂತೆ ಕೋರಿದರು. ಈ ಸಂದರ್ಭದಲ್ಲಿ ಕಮಲ್ ಕುಮಾರ್ ಜೈನ್, ಪವನ್ ಕಿಶೋರ್ ಪಾಟೀಲ್, ಶ್ರೀಪಾದ ಶೆಟ್ಟಿ, ಮಲ್ಲಿಕಾರ್ಜುನ್, ಕೃಷ್ಣಮೂರ್ತಿ,ಲಕ್ಷ್ಮೀಕಾಂತ ರೆಡ್ಡಿ , ರಾಜಶೇಖರ ಇನ್ನಿತರರು ಇದ್ದರು.
Comments
Post a Comment