ಜು.28 ರಂದು ನಗರಕ್ಕೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ರೆಡ್ಡಿ ಆಗಮನ: ಮಹಿಳಾ ಕಾರ್ಯಕರ್ತೆಯರೊಂದಿಗೆ ಸಮಾಲೋಚನಾ ಸಭೆ- ನಿರ್ಮಲಾ ಬೆಣ್ಣೆ. ಜಯ ಧ್ವಜ ನ್ಯೂಸ್, ರಾಯಚೂರು,ಜು.26- ಕರ್ನಾಟಕ ಪ್ರದೇಶ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆಯಾದ ಸೌಮ್ಯ ರೆಡ್ಡಿ ರವರು ಜು.28ಕ್ಕೆ ನಗರಕ್ಕೆ ಆಗಮಿಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಲಾ ಬೆಣ್ಣೆ ಹೇಳಿದರು.
ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಂದು ಮಧ್ಯಾಹ್ನ ಮಾ ಆಶಾಪೂರೆ ಕಲ್ಯಾಣ ಮಂಟಪದಲ್ಲಿ ಮಹಿಳಾ ಕಾರ್ಯಕರ್ತರೊಂದಿಗೆ ಸಭೆ ನಡೆಸಲಿದ್ದಾರೆ ಎಂದರು. ಸರ್ಕಾರದಿಂದ ಪಂಚ ಗ್ಯಾರಂಟಿ ಗಳ ಅನುಷ್ಟಾನ ಮತ್ತು ಗೃಹ ಲಕ್ಷ್ಮಿ ಯೋಜನೆಯ ಬಗ್ಗೆ ಮಹಿಳೆಯರಿಂದ ಅಭಿಪ್ರಾಯ ಮತ್ತು ಪಂಚ ಗ್ಯಾರಂಟಿ ಗಳಿಂದ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಕಾರಯಾದ ಬಗ್ಗೆ ಜನರಿಗೆ ತಿಳಿಸಿದ್ದಾರೆ ಎಂದರು. ಮುಂಬರುವ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷ ಸಂಘಟನೆ ಮತ್ತು ಮಹಿಳೆಯರನ್ನು ಕಾಂಗ್ರೆಸ್ ನತ್ತ ಒಲುವು ಹೆಚ್ಚಿಸಲು ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆಯೂ ಬೆಳಕು ಚೆಲ್ಲಲ್ಲಿದ್ದಾರೆ ಎಂದರು. ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದಲ್ಲಿ ಯಾವುದೆ ಭಿನ್ನಾಭಿಪ್ರಾಯ ಇಲ್ಲ ಎಲ್ಲರೂ ಒಗ್ಗೂಡಿಕೊಂಡು ಪಕ್ಷವನ್ನು ಸಧೃಡಗೊಳಿಸುತ್ತೇವೆಂದರು. ಈ ಸಂದರ್ಭದಲ್ಲಿ ರಾಣಿ ರಿಚರ್ಡ್, ಸುರೇಖಾ, ಮಂಜುಳಾ ಅಮರೇಶ, ಆರತಿ ಚಂದ್ರಶೇಖರ್, ಜ್ಯೋತಿ, ಪ್ರತಿಭಾ ರೆಡ್ಡಿ, ಶಾಂತಾ, ವಂದನಾ ಶಿವಕುಮಾರ್, ಶ್ರೀ ದೇವಿ ಇದ್ದರು.
Comments
Post a Comment