ರಾಯಚೂರು,

ಪತ್ರಿಕೆ ಮಾಧ್ಯಮಕ್ಕೆ ಬಹುದೊಡ್ಡ ಜವಾಬ್ದಾರಿ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರ ಕಾಶ ಪಾಟೀಲ್   ಹೇಳಿದರು.

ಲಿಂಗಸೂಗೂರಿನ ವಿಜಯ ಮಹಾಂತೇಶ್ವರ ಶಾಖ ಮಠದಲ್ಲಿ ನಡೆದ ಜಿಲ್ಲಾ ಕಾರ್ಯಕರ್ತ ಪತ್ರಕರ್ತ ಸಂಘ,

ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

"ಸತ್ಯ ಮತ್ತು ಅಹಿಂಸೆಯ ಮಾರ್ಗದಲ್ಲಿ ನಮ್ಮ ದೇಶ ಪ್ರಜಾಪ್ರಭುತ್ವವನ್ನು ಪಡೆಯಿತು. ಸಂವಿಧಾನವು ಸಮಾಜದಲ್ಲಿ ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಿದೆ. ಜಾಗೃತಿಯನ್ನು ಮೂಡಿಸುವ ಕೆಲಸ ಪತ್ರಕರ್ತರು ಮಾಡುತ್ತಿದ್ದಾರೆ. ಅವರು ಸರಿ-ತಪ್ಪುಗಳನ್ನು ಎತ್ತಿ ತೋರಿಸುತ್ತಿದ್ದಾರೆ" ಎಂದು ಅವರು ಹೇಳಿದರು.

ಅವರು ಪ್ರಸ್ತುತ ಪತ್ರಿಕೋದ್ಯಮದ ಬದಲಾದ ಧೋರಣೆಗಳ ಬಗ್ಗೆ ಮಾತನಾಡುತ್ತಾ, "ಹಿಂದಿನಂತೆ ಇಂದು ಪ್ರಿಂಟ್ ಮಾಧ್ಯಮದ ಪ್ರಭಾವ ಕಡಿಮೆಯಾಗಿದ್ದು, ಡಿಜಿಟಲ್ ಮಾಧ್ಯಮ ಹೆಚ್ಚಾಗಿದೆ. 24x7 ಸುದ್ದಿ ನೀಡುವ ಡಿಜಿಟಲ್ ಮಾಧ್ಯಮಗಳು ಎಲ್ಲವನ್ನೂ ತಕ್ಷಣ ನೀಡುತ್ತವೆ. ಆದರೆ ಇದರ ಹಿಂದಿನ ಪೂರಕ ಮಾಹಿತಿ ಇಲ್ಲದಿದ್ದರೆ ಅಪಾಯಕಾರಿಯಾಗುತ್ತದೆ. ಈಗ ಪತ್ರಿಕೋದ್ಯಮವು ಸಾಮಾಜಿಕ ಕಳಕಳಿಯ ಹಾದಿಯಿಂದ ಹೊರ ಹೋಗಿ, ಬಹುತೇಕ ಕರ್ಪೋರೇಟ್ ಮಾಲೀಕತ್ವದಲ್ಲಿ ನಡೆಯುತ್ತಿದೆ ಎಂಬುದು ಆತಂಕಕಾರಿ ವಿಷಯ" ಎಂದರು.

ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅನೇಕ ಪತ್ರಕರ್ತರು ಆರ್ಥಿಕ ಹಾಗೂ ಸಾಮಾಜಿಕ ಕಷ್ಟಕ್ಕೆ ಒಳಗಾಗುತ್ತಿದ್ದಾರೆ ಎಂಬುದನ್ನು ಅವರು ಉಲ್ಲೇಖಿಸಿ, "ಪತ್ರಕರ್ತರ ಜೀವನದ ಭದ್ರತೆಕ್ಕಾಗಿ ವಿಶೇಷ ನೂತನ ಕಾಯ್ದೆ ಜಾರಿಗೆ ತರಬೇಕಾದ ಅವಶ್ಯಕತೆ ಇದೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ಮಾಡಬೇಕು" ಎಂದು ಹೇಳಿದರು.

ಈ ಸಂಧರ್ಭದಲ್ಲಿ ಮಾತನಾಡಿದ ಅವರು ಈ ದೇಶದಲ್ಲಿ ಪತ್ರಿಕೋದ್ಯಮಕ್ಕೆ ವಿಶೇಷ ಸ್ಥಾನಮಾನವಿದೆ, ಆದರೆ ಕೆಲವು ರಾಷ್ಟ್ರ ಮಟ್ಟದ ಪತ್ರಿಕೆಗಳು ಕರ್ಪೋರೆಟ್ ಗಳ ಕೈಯಲ್ಲಿವೆ ಅದರಿಂದ ಸಮಾಜದಲ್ಲಿ ಅಶಾಂತಿ ಉಂಟಾಗುತ್ತಿದೆ.ಜಿಲ್ಲಾ ಮಟ್ಟದ ಪತ್ರಿಕೆಗಳ ಜವಾಬ್ದಾರಿ ಹೆಚ್ಚಿದೆ ಅದರಿಂದ ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು. 

 ಸಮಾರಂಭದಲ್ಲಿ ವಿಶೇಷವಾಗಿ ಜೀವಮಾನ ಶ್ರೇಷ್ಠ ಸಾಧನೆಗಾಗಿ ಭೀಮರಾಯ ಹದ್ದಿನಾಳ, ಎನ್ ಬಸವರಾಜ್ ಅವರಿಗೆ ಸಚಿವರಾದ ಎನ್ ಎಸ್ ಬೋಸರಾಜು ಪ್ರಶಸ್ತಿ ಪ್ರದಾನ ಮಾಡಿದರು.  ಈ ಸಮಾರಂಭದಲ್ಲಿ ಶಾಸಕರಾದ ಮಾನಪ್ಪ ವಜ್ಜಲ್, ಬಸನಗೌಡ ದದ್ದಲ್, ಮಾಜಿ ಸಚಿವರಾದ ಅಮರೇಗೌಡ ಬಯ್ಯಪುರ, ಮಾಜಿ ಶಾಸಕರಾದ ಡಿ ಎಸ್ ಹುಲಗೇರಿ, ವಿಧಾನ ಪರಿಷತ್ ಸದಸ್ಯರಾದ ಎ. ವಸಂತಕುಮಾರ್, ಶರಣಗೌಡ ಬಯ್ಯಪುರು, ರಾಜ್ಯ ಕಾರ್ಯಕಾರಣಿ ಸದಸ್ಯರಾದ ಶಿವಮೂರ್ತಿ ಹಿರೇಮಠ,ಜಿಲ್ಲಾಧ್ಯಕ್ಷರಾದ ಆರ್ ಗುರುನಾಥ,ಪ್ರಧಾನ ಕಾರ್ಯದರ್ಶಿ ಪಾಷಾ ಹಟ್ಟಿ, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಎಸ್ ಪಿ ಪುಟ್ಟಮಾದಯ್ಯ, ತಾಲೂಕು ಅಧ್ಯಕ್ಷರಾದ ಗುರುರಾಜ್, ಪ್ರಧಾನ ಕಾರ್ಯದರ್ಶಿ ಅಮರಯ್ಯ ಘಂಟಿ, ಭೂಪನಗೌಡ, ಸೇರಿದಂತೆ ಜಿಲ್ಲೆಯ ಆನೇಕ ಪತ್ರಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು

Comments

Popular posts from this blog