ಎಲ್‌ಐಸಿ ವತಿಯಿಂದ ಟ್ರಾಫಿಕ್ ಬ್ಯಾರಿಕೇಡ್ ವಿತರಣೆ 


ಜಯ ಧ್ವಜ ನ್ಯೂಸ್,ರಾಯಚೂರು, ಜು.26ಲೈಫ್ ಇನ್ಸೂರನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಲ್‌ಐಸಿ) ಸಂಸ್ಥೆಯ ರಾಯಚೂರು ವಿಭಾಗೀಯ ಕಚೇರಿಯಲ್ಲಿ ಶನಿವಾರ ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ (CSR) ಚಟುವಟಿಕೆಯಡಿಯಲ್ಲಿ ಪೊಲೀಸ್ ಟ್ರಾಫಿಕ್ ಬ್ಯಾರಿಕೇಡ್ ಹಸ್ತಾಂತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಹೈದರಾಬಾದ್‌ನ ದಕ್ಷಿಣ ಮಧ್ಯ ವಲಯದ ವಲಯ ವ್ಯವಸ್ಥಾಪಕರಾದ ಪುನೀತ್ ಕುಮಾರ್ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು, 20 ಟ್ರಾಫಿಕ್ ಬ್ಯಾರಿಕೇಡ್‌ಗಳನ್ನು ರಾಯಚೂರು ಟ್ರಾಫಿಕ್ ಪೊಲೀಸ್ ಇಲಾಖೆಗೆ ಹಸ್ತಾಂತರಿಸಿದರು.


ಈ ಸಂದರ್ಭದಲ್ಲಿ ದಕ್ಷಿಣ ಮಧ್ಯ ವಲಯದ ಮುಖ್ಯ ಇಂಜಿನಿಯರ್ ಎಎಎಂ ಹಿಲಾಲಿ ಉಪಸ್ಥಿತರಿದ್ದು, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ರಾಯಚೂರು ವಿಭಾಗದ ಹಿರಿಯ ವಿಭಾಗೀಯ ವ್ಯವಸ್ಥಾಪಕರಾದ  ವೈ.ವಿ.ರಾವ್, ಬಿ. ಪ್ರಸಾದ್ ಬಸವರಾಜ ಹಾಗೂ ಮಾರ್ಕೆಟಿಂಗ್ ವ್ಯವಸ್ಥಾಪಕರಾದ ಎ.ಚಿರಂಜೀವಿ, ಮಾರಾಟ ವ್ಯವಸ್ಥಾಪಕ ಬಿ. ರಮೇಶ್ ಕಾರ್ಯಕ್ರಮವನ್ನು ಸಂಯೋಜಿಸಿದರು.

ಈ ಸಂದರ್ಭದಲ್ಲಿ  ಆಡಿಷನಲ್ ಎಸ್ ಪಿ  ಕುಮಾರಸ್ವಾಮಿ, ಸಿಪಿಐ ವೆಸ್ಟ್ ನಾಗರಾಜ್, ಪಿಎಸ್ಐ ಟ್ರಾಫಿಕ್ ಸಣ್ಣ ಈರೇಶ್ ಸೇರಿದಂತೆ  ಅಧಿಕಾರಿಗಳು ಭಾಗವಹಿಸಿದ್ದರು. ಸಾರ್ವಜನಿಕರ ಸುರಕ್ಷತೆಗೆ ನೆರವಾಗುವ ನಿಟ್ಟಿನಲ್ಲಿ ಎಲ್‌ಐಸಿ ಕೈಗೊಂಡಿರುವ ಕಾರ್ಯ ಮೆಚ್ಚುಗೆಗೆ ಪಾತ್ರವಾಯಿತು.

Comments

Popular posts from this blog