ಸನ್ನಿ ರೋನಾಲ್ಡ್ ಗಡಿಪಾರು ಪ್ರಕರಣದಲ್ಲಿ ರವಿ ಬೋಸರಾಜು ಕೈವಾಡವೆಂದು ಜೆ ಬಿ ರಾಜು ಮಾಡಿರುವ ಆರೋಪದಲ್ಲಿ ಹುರುಳಿಲ್ಲ -ನರಸಿಂಹಲು ಮಾಡಗಿರಿ. ಜಯ ಧ್ವಜ ನ್ಯೂಸ್, ರಾಯಚೂರು, ಜು.30- ಸನ್ನಿ ರೋನಾಲ್ಡ್ ಗಡಿಪಾರು ಪ್ರಕರಣದಲ್ಲಿ ರವಿ ಬೋಸರಾಜು ಕೈವಾಡವಿದೆ ಎಂದು ದಲಿತ ಮುಖಂಡರಾದ ಜೆಬಿ ರಾಜು ಮಾಡಿರುವ ಆರೋಪದಲ್ಲಿ ಹುರುಳಿಲ್ಲವೆಂದು ಕಾಂಗ್ರೆಸ್ ಮುಖಂಡ ಹಾಗೂ ಆರ್ ಡಿ ಎ ಸದಸ್ಯ ನರಸಿಂಹಲು ಮಾಡಗಿರಿ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸನ್ನಿ ರೋನಾಲ್ಡ್ ಸಮಾಜದಲ್ಲಿ ಭಯ ಭೀತಿ ಮತ್ತು ಪೊಲೀಸರ ಮೇಲೆ ಹಲ್ಲೆಯತ್ನ ಪ್ರಕರಣ ಮುಂತಾದವುಗಳಿಂದ ಕಾನೂನು ಕೈಗೆತ್ತಿಕೊಂಡಿದ್ದರಿಂದ ಅವರನ್ನು ಗಡಿಪಾರು ಮಾಡಲಾಗಿದೆ ಪೊಲೀಸರು ಸೂಕ್ತ ಸಾಕ್ಷ್ಯಾಧಾರ ನೀಡಿದ್ದರಿಂದಲೆ ಸಹಾಯಕ ಆಯುಕ್ತರು ಗಡಿಪಾರು ಆದೇಶ ಹೊರಡಿಸಿದ್ದಾರೆ ಇದರಲ್ಲಿ ರವಿ ಬೋಸರಾಜು ಒತ್ತಡ ಹೇಗೆ ಮಾಡಲು ಸಾಧ್ಯವೆಂದು ಪ್ರಶ್ನಿಸಿದರು. ಬಹಿರಂಗವಾಗಿ ತಲ್ವಾರ್ ಹಿಡಿದು ಹೂಂಕರಿಸಿದ ಸನ್ನಿ ರೋನಾಲ್ಡ್ ಕಾನೂನು ಮೀರಿ ವರ್ತಿಸಿದ್ದರಿಂದ ಮತ್ತು ಅನೇಕ ಪ್ರಕರಣಗಳು ಅವರು ಮೇಲೆ ದಾಖಲಾಗಿದ್ದರಿಂದ ಕಾನೂನು ಪ್ರಕಾರ ಕ್ರಮಕೈಗೊಳ್ಳಲಾಗಿದೆ ಎಂದರು. ಬೋಸರಾಜು ರವರು ಯಾವ ದಲಿತರನ್ನು ತುಳಿದಿಲ್ಲ ಅವರ ಗರಡಿಯಲ್ಲಿ ಅನೇಕರು ಪಳಗಿದ್ದಾರೆ ಎ.ವಸಂತ ಕುಮಾರ್ ಸಹ ಅವರ ಸಹಕಾರದಿಂದ ಸ್ಥಾನಮಾನ ಪಡೆದಿದ್ದಾರೆ. ರಾಮಣ್ಣ ಇರಬಗೆರಾ,ಎಸ್. ಮಾರೆಪ್ಪ, ಹೆಚ್ .ಬಿ.ಮುರಾರಿ, ಚಂದ್ರಶೇಖರ್ ಕುರ್ಡಿ, ಹೇಮಲತಾ ಬೂದೆಪ್ಪ, ಕಿರಿ ಲಿಂಗಪ್ಪ, ಪ್ರತಿಭಾ ರೆಡ್ಡಿ, ನರಸಮ್ಮ ಮಾಡಗಿರಿ ಸೇರಿದಂತೆ ಅನೇಕರಿಗೆ ರಾಜಕೀಯ ಮತ್ತು ಅಧಿಕಾರ ಸ್ಥಾನ ಮಾನ ಸಿಗುವಲ್ಲಿ ಬೋಸರಾಜು ಮತ್ತು ರವಿಯವರ ಪಾತ್ರವಿದೆ ಅವರು ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತಾರೆ ಯಾವ ತಾರತಮ್ಯ ಸಹ ಮಾಡಿಲ್ಲವೆಂದರು. ಜೆಬಿ ರಾಜು ಇದೆ ರೀತಿ ಇಲ್ಲಸಲ್ಲದ ಆರೋಪ ಮಾಡಿದರೆ ತಕ್ಕ ಪಾಠ ಕಲಿಸಲಾಗುತ್ತದೆ ಎಂದು ಎಚ್ಚರಿಸಿದರು . ಈ ಸಂದರ್ಭದಲ್ಲಿ ಈರಣ್ಣ ಭಂಡಾರಿ, ಆಂಜನೇಯ ಕುರುಬದೊಡ್ಡಿ, ಯುವ ಕಾಂಗ್ರೆಸ್ ಮುಖಂಡ ವಸಂತಕುಮಾರ್, ಬೂದೆಪ್ಪ, ಪ್ರತಿಭಾ ರೆಡ್ಡಿ, ಮರಿಸ್ವಾಮಿ,ರಾಮ ಪ್ರಸಾದ್ ಇನ್ನಿತರರು ಇದ್ದರು.

Comments
Post a Comment