ಪುರಾಣ ಪ್ರವಚನ ಕೇಳುವುದರಿಂದ ಮಾನಸಿಕ ನೆಮ್ಮದಿ-  ವಸಂತ್ ಕುಮಾರ್.     

ಜಯ ಧ್ವಜ ನ್ಯೂಸ್ ರಾಯಚೂರು ಜು. 25- ಪುರಾಣ ಪ್ರವಚನ ಕೇಳುವುದರಿಂದ ಮನಸಿಗೆ ನೆಮ್ಮದಿ ಶಾಂತಿ ಸಿಗುತ್ತದೆ ಎಂದು ವಿಧಾನ ಪರಿಷತ್  ಸದಸ್ಯರಾದ ಎ.ವಸಂತ ಕುಮಾರ್ ಹೇಳಿದರು. ಶುಕ್ರವಾರ ರಾತ್ರಿ ಕಿಲ್ಲೇಬೃಹನ್ಮಠದಲ್ಲಿ 101ನೇ ವರ್ಷದ ಶ್ರಾವಣ ಮಾಸದ ಅಂಗವಾಗಿ ನವಲಗುಂದ ಶ್ರೀ ಅಜಾತ ನಾಗಲಿಂಗೇಶ್ವರ ಪುರಾಣ ಪ್ರವಚನ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತಾನಾಡಿದರು. ತಿಂಗಳ ಪರ್ಯಂತ ನಡೆಯುವ ಪುರಾಣ ಪ್ರವಚನದಲ್ಲಿ ನವಲಗುಂದದ ಶ್ರೀ ಅಜಾತ ನಾಗಲಿಂಗೇಶ್ವರ ಪುರಾಣ ಪ್ರವಚನವನ್ನು ಆಯೋಜನೆ ಮಾಡಿರುವುದು ಸಂತಸ ತಂದಿದೆ ಎಂದರು. 101 ನೇ ವರ್ಷದ ಶ್ರಾವಣ ಮಾಸದ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ  ಭಕ್ತರು ಭಕ್ತಿಯಿಂದ ಪಾಲ್ಗೊಳ್ಳಬೇಕೆಂದರು.


ಇಂದಿನ ದಿನಗಳಲ್ಲಿ  ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗದೆ ಭಾರತೀಯ ಸಂಸ್ಕೃತಿ ಪರಂಪರೆಯ ಸಂಪ್ರದಾಯವನ್ನು ಅಳವಡಿಸಿ ಕೊಂಡು ಶ್ರೀಗಳ, ಗುರುಗಳ ಮಾರ್ಗದರ್ಶನದಲ್ಲಿ ನಡೆದು ಕೊಂಡು ನಡಿಯ ಬೇಕಾಗಿದೆ ಎಂದು ತಿಳಿಸಿದರು. ಸಂಸ್ಕೃತ, ಪುರಾಣ,ಇತಿಹಾಸ ಜೀವಂತವಾಗಿದ್ದಾವೆ ಎಂದರೆ ಮಠಗಳ ಕೊಡಿಗೆ ಅಪಾರ ಎಂದು ಮಾತಾನಾಡಿದರು.

 ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ೧೦೮ ಸಾವಿರ ದೇವರು ಷ.ಬ್ರ.ಶಾಂತಮಲ್ಲ ಶಿವಾಚಾರ್ಯ ಸ್ವಾಮಿಗಳು, ಹಿರೇನಾಗಾವಿಯ ಜಯಶಾಂತಲಿಂಗೇಶ್ವರ ಸ್ವಾಮಿಗಳು, ರಾಜೇಶ್ವರ ಸಂಸ್ಥಾನ ಹಿರೇಮಠದ ಘನಲಿಂಗರುದ್ರಮುನಿ ಶಿವಾಚಾ ರ್ಯಸ್ವಾಮಿಗಳು ಅಷ್ಟಗಿ ಹಿರೇಮಠದ ನಿಜಲಿಂಗ ಸ್ವಾಮಿಗಳು  ವಹಿಸಿದ್ದರು. ಅತಿಥಿಗಳಾಗಿ ನಗರಸಭೆಯ ಪ್ರಭಾರಿ ಅಧ್ಯಕ್ಷ ಸಾಜಿದ್ ಸಮೀರ್, ಜಮಾತೆ ಇಸ್ಲಾಮಿ ಹಿಂದ್  ಅಧ್ಯಕ್ಷ ಮಹ್ಮದ್ ಅಸೀಮೊದ್ಧಿನ್ ಅಖ್ತರ್, ಏಕ್ ಮಿನಾರ್ ಮಸೀದಿಯ ಅಧ್ಯಕ್ಷ ಅಬ್ದುಲ್ ಲತಿಪ್, ಮಹಾನಗರ ಪಾಲಿಕೆಯ ಸದಸ್ಯ ದರೂರು ಬಸವರಾಜ, ನಗರಸಭೆ ಮಾಜಿ ಸದಸ್ಯ ಜಿ. ಶಿವಮೂರ್ತಿ, ಜೆಡಿಯಸ್ ಮುಖಂಡರು ಜಾಗಟಗಲ್ ಬುಡ್ಡನಗೌಡರು , ಎಸ್. ಎಲ್. ಕೇಶವರೆಡ್ಟಿ. ರಾಜಾ ಶ್ರೀನಿವಾಸ್, ಡಾ.ಶಿವಕುಮಾರ್,ಚಂದ್ರಶೇಖರ್ ಪಾಟೀಲ ಮಿರ್ಜಾಪೂರ್,ನವಲಗುಂದ ಶ್ರೀ ಅಜಾತ ನಾಗಲಿಂಗೇಶ್ವರ ಪುರಾಣ ಪ್ರವಚನವನ್ನು ಖರಾಬದಿನ್ನಿಯ ವೇದಮೂರ್ತಿ ದೊಡ್ಡಬಸಯ್ಯ ಶಾಸ್ತ್ರಿ , ಭಕ್ತಿಸಂಗೀತ ವೇದಮೂರ್ತಿ ಶರಣಯ್ಯ. ವಿ. ಹಿರೇಮಠ ಸೋಮನಾಳ, ತಬಲ ವಾದಕ ರಾಘವೇಂದ್ರ ಅಶಾಪುರ್, ಜಿ. ಕೇಶವಮೂರ್ತಿ, ಅರೋಲಿ ಗುರುಪಾದಯ್ಯ. ರೇಣಕಾರಾಧ್ಯ ಸ್ವಾಮಿ, ವಿ. ಶರಣಯ್ಯ ಸ್ವಾಮಿ ವೀರೇಶ ಆಲ್ಕೋಡ್ ಮಠ ಹಾಗೂ ಸಮಸ್ತ ಸದ್ಭಕ್ತರು ಬಾಗವಹಿಸಿದ್ದರು ನಂತರ ಅನ್ನದಾಸೋಹ ನಡೆಯಿತು.

Comments

Popular posts from this blog