ಸಿಂಧನೂರು: ಮನೋಹರ ರಾವ್ ಕುಲಕರ್ಣಿರವರಿಗೆ ವಿಪ್ರ ಶ್ರೀ ಪ್ರಶಸ್ತಿ ಪ್ರದಾನ                                                                                ಜಯ ಧ್ವಜ ನ್ಯೂಸ್, ರಾಯಚೂರು,ಜು.29-                                                                                          ಕಲ್ಯಾಣ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ             ಜು.26 ರಂದು ರಾಯಚೂರು  ಶೃಂಗೇರಿ ಶಾರದಾ ಕಲ್ಯಾಣ ಮಂಟಪದಲ್ಲಿ ನಡೆದ ವಿಪ್ರೋತ್ಸವ ಹಾಗೂ ವಿಪ್ರ ಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅನಾರೋಗ್ಯದ ನಿಮಿತ್ತ ಕಾರ್ಯಕ್ರಮಕ್ಕೆ ಗೈರುಹಾಜರಾಗಿದ್ದ ಮನೋಹರ ರಾವ್ ಕುಲಕರ್ಣಿ "ವಿಪ್ರ ಶ್ರೀ" ಪ್ರಶಸ್ತಿ ಪುರಸ್ಕೃತರನ್ನು ಇಂದು ಸಿಂಧನೂರು ನಗರದಲ್ಲಿ ಅವರ ಮನೆಗೆ ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಪ್ರಶಸ್ತಿ  ನೀಡಿ ಸನ್ಮಾನಿಸಿ ಗೌರವಿಸಲಾಯಿತು.

       ಈ ಸಂದರ್ಭದಲ್ಲಿ  ಕೆಕೆ ಬಿಎಂಎಸ್ ವಿಭಾಗೀಯ ಅದ್ಯಕ್ಷರಾದ ಶ್ರೀ ಜಗನ್ನಾಥ ಕುಲಕರ್ಣಿ, ಹಿರಿಯ ಉಪಾಧ್ಯಕ್ಷರು ಆದ ಶ್ರೀ ವೆಂಕಣ್ಣ ಚಾರ್

ಧೋಟಿಹಾಳ್, ಶ್ರೀ ಹನುಮಂತ ರಾವ್ ಕಲ್ಲೂರಕರ್, ಶ್ರೀ ಹರೀಶ್ ಆಚಾರ್ ಕೊಪ್ಪರ್, ಶ್ರೀ ಗೋಪಾಲಕೃಷ್ಣ ತಟ್ಟಿ, ಪತ್ರಕರ್ತರಾದ ಜಯಕುಮಾರ್ ದೇಸಾಯಿ ಕಾಡ್ಲೂರು, ಶ್ರೀ ಗೋವಿಂದರಾವ್, ರಾಘವೇಂದ್ರ ಕುಲಕರ್ಣಿ, ಪ್ರಭಾಕರ್, ಪತ್ರಕರ್ತರಾದ ಪ್ರಹ್ಲಾದ ಗುಡಿ, ರಾಮಕೃಷ್ಣಚಾರ್ ಹಾಗೂ ಸಿಂಧನೂರಿನ ಅನೇಕ ವಿಪ್ರ ಬಾಂಧವರು ಉಪಸ್ಥಿತರಿದ್ದರು
.

Comments

Popular posts from this blog