ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಜನಾಕ್ರೋಶ ಪ್ರತಿಭಟನೆ: ಒಳ ಮೀಸಲಾತಿ ಶತಾಯ ಗತಾಯ ಜಾರಿ ಮಾಡಲು ಹೋರಾಟಗಾರರ ಒತ್ತಾಯ. ಜಯ ಧ್ವಜ ನ್ಯೂಸ್, ರಾಯಚೂರು,ಆ.1- ಒಳ ಮೀಸಲಾತಿ ಜಾರಿ ಮಾಡುವಂತೆ ಆಗ್ರಹಿಸಿ ಇಂದು ನಗರದಲ್ಲಿ ಬೃಹತ್ ಜನಾಕ್ರೋಶ ಪ್ರತಿಭಟನೆ ಜರುಗಿತು. ಬೆಳಿಗ್ಗೆ ಅಂಬೇಡ್ಕರ್ ವೃತ್ತದಲ್ಲಿ ಸೇರಿದ ಒಳ ಮೀಸಲಾತಿ ಜಾರಿ ಸಮಿತಿ ಹೋರಾಟಗಾರರು ಸರ್ಕಾರದ ಹಾಗೂ ಸಿಎಂ ವಿರುದ್ಧ ಘೋಷಣೆ ಕೂಗಿದರು.
ಹೋರಾಟಗಾರ ಜೆ.ಬಿ .ರಾಜು ಮಾತನಾಡಿ ಸತತ ಮೂವತ್ತು ವರ್ಷದಿಂದ ಸುಧೀರ್ಘ ಹೋರಾಟ ನಡೆದಿದೆ ಸುಪ್ರೀಂ ಕೋರ್ಟ್ ಒಳ ಮೀಸಲಾತಿ ಜಾರಿ ರಾಜ್ಯ ಸರ್ಕಾರದ ಪರಿಮಿತಿ ಗೆ ಒಳಪಡುತ್ತದೆ ಎಂದು ತೀರ್ಪು ನೀಡಿ ಒಂದು ವರ್ಷವು ಇಂದಿಗೆ ಗತಿಸುತ್ತಿದೆ ಸರ್ಕಾರ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಆಯೋಗ ಸಹ ರಚನೆ ಮಾಡಿತು ಸಮೀಕ್ಷೆ ಸಹ ಪೂರ್ಣಗೊಂಡಿದೆ ಇನ್ನೂ ಏಕೆ ಮೀನಾಮೇಷ ಎಣಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಾನು ಯಾವುದೆ ಪಕ್ಷಕ್ಕೆ ಸೇರಿದ ವ್ಯಕ್ತಿಯಲ್ಲ ಇಂದಿನ ಹೋರಾಟದಲ್ಲಿ ಪಕ್ಷಾತೀತವಾಗಿ ಎಲ್ಲರೂ ಪಾಲ್ಗೊಂಡಿದ್ದಾರೆ ಸರ್ಕಾರ ಶೀಘ್ರವೇ ಒಳ ಮೀಸಲಾತಿ ಜಾರಿ ಮಾಡಬೇಕೆಂದರು.
ಇನ್ನೋರ್ವ ಮುಖಂಡ ಎಂ.ವಿರುಪಾಕ್ಷಿ ಮಾತನಾಡಿ ಒಳ ಮೀಸಲಾತಿ ಜಾರಿ ನಮ್ಮ ರಾಜ್ಯದಲ್ಲಿ ವಿಳಂಬವಾಗುತ್ತಿದೆ ಈಗಾಗಲೆ ಹರಿಯಾಣ, ತೆಲಂಗಾಣ, ಆಂಧ್ರಪ್ರದೇಶದಲ್ಲಿ ಅಲ್ಲಿನ ಸರ್ಕಾರ ಮೀಸಲಾತಿ ನೀಡಿದೆ ರಾಜ್ಯದಲ್ಲಿಯೂ ಒಳ ಮೀಸಲಾತಿ ತ್ವರಿತವಾಗಿ ಜಾರಿಯಾಗಬೇಕೆಂದರು. ಈ ಸಂದರ್ಭದಲ್ಲಿ ರವೀಂದ್ರ ಜಲ್ದಾರ್, ತಿಮ್ಮಪ್ಪ ಫಿರಂಗಿ, ಈರಣ್ಣ ಭಂಡಾರಿ,ಪಿ.ಯಲ್ಲಪ್ಪ,ಸತೀಶ್, ನಾಗರಾಜ್,ಬಸವರಾಜ್ ಎಸ್.ರಾಜು, ಮೌನೇಶ್, ರವಿ, ಮಲ್ಲಿಕಾರ್ಜುನ ಸೇರಿದಂತೆ ಮಾದಿಗ ದಂಡೋರ ಮತ್ತು ವಿವಿಧ ದಲಿತ ಪರ ಸಂಘಟನೆಗಳು, ದಲಿತ ಮುಖಂಡರು ಭಾಗವಹಿಸಿದ್ದರು. ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಕೆಲ ಹೊತ್ತು ವಾಹನ ಸಂಚಾರ ದಟ್ಟಣೆ ಏರ್ಪಟ್ಟಿತ್ತು. ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
Comments
Post a Comment