ನಿವೃತ್ತ ಶಿಕ್ಷಕರು ಹಾಗೂ ಸಾಹಿತಿಗಳಾದ ತಿಪ್ಪಣ್ಣ ಹೂಗಾರ ನಿಧನ

 ಜಯ ಧ್ವಜ ನ್ಯೂಸ್ ,ರಾಯಚೂರು, ಆ.2-

ನಿವೃತ್ತ ಶಿಕ್ಷಕರು ಹಾಗೂ ಸಾಹಿತಿಗಳಾದ ತಿಪ್ಪಣ್ಣ ಹೂಗಾರ (87) ಅವರು ಶನಿವಾರ ಬೆಳಿಗ್ಗೆ ರಾಯಚೂರಿನ ಎನ್ ಜಿಓ ಕಾಲೋನಿಯ ಸ್ವಗೃಹದಲ್ಲಿ ದೈವಾಧೀನರಾದರು.

ಮೃತರು ಪತ್ನಿ, ಪುತ್ರರಾದ ಹೂಗಾರ ಸಮಾಜದ ಜಿಲ್ಲಾಧ್ಯಕ್ಷರಾದ ಈರಣ್ಣ ಹೂಗಾರ, ಚಂದ್ರಶೇಖರ್ ಹೂಗಾರ ಹಾಗೂ ಇಬ್ಬರು ಪುತ್ರಿಯರು, ಮೊಮ್ಮಕ್ಕಳ ಸೇರಿ ಅಪಾರ ಬಂಧುಗಳವನ್ನು ಬಿಟ್ಟು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಭಾನುವಾರ ಬೆಳಿಗ್ಗೆ 11ಕ್ಕೆ ಬೋಳಮಾನದೊಡ್ಡಿ ರಸ್ತೆಯ ವೀರಶೈವ ರುದ್ರಭೂಮಿಯಲ್ಲಿ ನೆರವೇರಲಿದೆ.

ತಿಪ್ಪಣ್ಣ ಹೂಗಾರ ಅವರು ಶಿಕ್ಷಕರಾಗಿ, ಸಾಹಿತಿಗಳಾಗಿ ಈಶ್ವರಪ್ರಿಯ ಕಾವ್ಯನಾಮದಿಂದ ಸಾಹಿತ್ಯ ರಚಿಸಿದ್ದರು   ಹೀಗಾಗಿ ಅವರ ಸಾಹಿತ್ಯ ಸೇವೆ ಪರಿಗಣಿಸಿ ಮಾನ್ವಿ ತಾಲೂಕಿನ 5 ನೇ ಕನ್ನಡ ಸಾಹಿತ್ಯ ಸಮ್ಮೇಳನ ದ ಸರ್ವಾಧ್ಯಕ್ಷರಾಗಿದ್ದರು. ಮೂಲತಃ ಮಾನ್ವಿ ತಾಲೂಕಿನ ಹಿರೇಕೊಟ್ನೇ ಕಲ್ ಗ್ರಾಮದವರಾಗಿದ್ದರು.

ಸಂತಾಪ : ಸಮಾಜದ ಮೊದಲ ಶಿಕ್ಷಕರು, ಸಾಹಿತಿಗಳಾಗಿದ್ದ  ತಿಪ್ಪಣ್ಣ ಹೂಗಾರ ಅವರ ನಿಧನಕ್ಕೆ ಜಿಲ್ಲಾ ಹಾಗೂ ತಾಲೂಕು ಹೂಗಾರ ಸಮಾಜ ಸಂಘದ ಪದಾಧಿಕಾರಿಗಳು ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ.



Comments

Popular posts from this blog