ಸದ್ಭಾವನಾ ಯಾತ್ರೆ ಮೂಲಕ ಸಾಮರಸ್ಯ ಸಾರುತ್ತಿರುವ ಕಿಲ್ಲೇಮಠ - ತಿಪ್ಪರಾಜು ಹವಾಲ್ದಾರ್               
                                                                                        ಜಯ ಧ್ವಜ ನ್ಯೂಸ್ ,ರಾಯಚೂರು.ಆ.೩೧ನಗರದ ಸಾವಿರ ದೇವರ ಸಂಸ್ಥಾನ ಕಿಲ್ಲೇ ಬ್ರಹನ್ಮಠದಲ್ಲಿ ೧೯ ನೇ ವರ್ಷದ ಸದ್ಬಾವನ ಪಾದಯಾತ್ರೆ ಮತ್ತು ಕೋಳಂಕಿ ಜೀವೈಕ್ಯ ಗುರುಪಾದ ಶಿವಯೇಗೀಶ್ವರ ಶಿವಾಚಾರ್ಯ  ಮಹಾಸ್ವಾಮಿಗಳ ೯೭೪ ನೆ ವರ್ಷದ ಜಯಂತಿಯ ಪರ್ವ ಸಮಾರಾಧನೆಯ ಅಂಗವಾಗಿ ಅಯೋಜನೆ ಮಾಡಿದ ಸಭೆ ಯಲ್ಲಿ ಜ್ಯೋತಿ ಬೆಳಗಿಸಿ  ಗ್ರಾಮೀಣ ಕ್ಷೇತ್ರದ  ಮಾಜಿ ಶಾಸಕ ತಿಪ್ಪರಾಜ ಹವಲ್ದಾರ್ ಮಾತಾನಾಡಿದರು. ಶಾಂತಿ ಸಾಮ ರಸ್ಯದ ಸಂಕೇತ ಮಠಗಳು   ಪಾದಯಾತ್ರಗೆ ಜಾತಿ ಮತ ಬೇಧ ಭಾವವಿಲ್ಲದೆ ನಡಿಯುವ ಪಾದಯಾತ್ರೆ ಮಾಡುವಿಕೆ ಮೂಲಕ ಜನರಿಗೆ,ರೈತರಿಗೆ ಒಳಿತಾಗಳಿ ಎಂದು ಪ್ರಸ್ತಾಪಿಸಿದರು.ಮಾಜಿ ನಗರ ಸಭೆ ಸದಸ್ಯರಾದ ಮೋಹಮ್ಮದ ಶಾಲಂ ಮಾತಾನಾಡುತ್ತ ಪಾದಯಾತ್ರೆಯಿಂದ ಸಮಾಜದಲ್ಲಿ ಶಾಂತಿ ಸಾಮರಸ್ಯವನ್ನು  ಸಾರಿದ ಮಠದ ಶ್ರೀ ಗಳು ಮಾಡುತ್ತಿರುವುದು‌ ಸಂತಸ  ತಂದಿದೆ ಎಂದು ತಿಳಿಸಿದರು. ಸೋಮವಾರ ಪೇಟ ಹೀರೆಮಠದ ಮಠಾಧೀಶರಾದ ಅಬಿನವ ರಾಚೋಟಿ ಶಿವಾಚಾರ್ಯ ಮಹಾಸ್ವಾಮಿಗಳು ಧರ್ಮ ಸಂದೇಶ ನೀಡಿದರು,ಸಮಾಜದಲ್ಲಿ ಮಾನವ ಕಷ್ಟವನ್ನು ಅರಿತಿಕೊಂಡು ಮುನ್ನಡೆ ಸಾಧಿಸಲು ಸಾಧ್ಯವಾಯಿತು.ಸುಖ:ದುಖಗಳನ್ನು ಸಮಾನವಾಗಿ ಕಾಣುವ ಪ್ರಯತ್ನಗಳು ನಡೆಯುತ್ತಿವೆ ಎಂದು ವಿವರಿಸಿದರು. ಗಂಗಾಧರ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ಮಾಡಿ ಭಕ್ತರನ್ನುದ್ದೇಶಿಸಿ ಮಾತನಾಡಿ ೮೪ ಲಕ್ಷ ಜೀವರಾಶಿಗಳ ಪೈಕಿ ಮನುಷ್ಯನಿಗೆ ಸದ್ಬಾವನೆಯನ್ನು‌ ಮನಗಾಣ ಬೇಕಾಗಿದೆ ಅರಿಷಡ್ ವರ್ಗಗಳನ್ನು ತ್ಯಜಿಸಿ ಸದ್ಬಾವನ ಪಾದಯಾತ್ರೆ ಮೂಲಕ ಗುರುಗಳ ದರ್ಶನ ಯೋಗವನ್ನು ಪಡಿಯಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಅಭಿನವ ಸೋಮನಾಥ ಶಿವಾಚಾರ್ಯ, ಶಂಭು ಸೋಮನಾಥ ಶಿವಾಚಾರ್ಯ,         ಕ್ಷೀರಲಿಂಗೇಶ್ವರ ಶರಣರು, ವೇದಮೂರ್ತಿ ರಾಚಯ್ಯಪ್ಪ ತಾತ ಶರಣರು, ನಗರ ಸಭೆ ಸದಸ್ಯರಾದ ಬಸವರಾಜ್ ದರೂರು,ಶಿವ ಶಂಕರ್,ಡಾ.ಜವಳಿ ನಿಜಗುಣಪ್ಪ,ನರಸಿಂಹುಲು,ಪಂಪಾಪತಿ ಶಾಸ್ತ್ರೀ, ನರಸಪ್ಪ, ತಿಮ್ಮಾರೆಡ್ಡಿ, ಶಿವಮೂರ್ತಿ,ರೇಣುಕಾ‌ ಸ್ವಾಮಿ,ಶರಣಯ್ಯ,ಬಸವರಾಜ್ ,ವೆಂಕಟೇಶ ಮತ್ತು ಭಕ್ತರು ಭಾಗವಹಿಸಿದ್ದರು.

Comments

Popular posts from this blog