ಆ.22 ರಿಂದ 25ರವರೆಗೆ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಬೃಹತ್ ರಕ್ತದಾನ ಶಿಬಿರ- ಸ್ಮಿತಾ ಅಕ್ಕ. ಜಯ ಧ್ವಜ ನ್ಯೂಸ್, ರಾಯಚೂರು,ಆ.20- ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಆ.22 ರಿಂದ ಆ25ರವರೆಗೆ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಿನಿ ಸ್ಮಿತಾ ಅಕ್ಕನವರು ಹೇಳಿದರು. ಅವರಿಂದು ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಗೌರವಾನ್ವಿತ ಪೂರ್ವ ಮುಖ್ಯ ಆಡಳಿತಾಧಿಕಾರಿಯಾಗಿದ್ದ ರಾಜಯೋಗಿನಿ ದಾದಿ ಪ್ರಕಾಶ್ ಮಣಿ ಜೀ ರವರ 18ನೇ ಪುಣ್ಯತಿಥಿ ಅಂಗವಾಗಿ ವಿಶ್ವ ಭ್ರಾತೃತ್ವ ದಿನ ಆ.25ರಂದು ಆಚರಿಸಲಾಗುತ್ತಿದೆ ಎಂದರು.
ರಕ್ತದಾನ ಶಿಬಿರವನ್ನು ಭಾರತ ಮತ್ತು ನೇಪಾಳದಲ್ಲಿ 1500ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಶಿಬಿರ ಆಯೋಜಿಸಲಾಗುತ್ತಿದ್ದು ಸುಮಾರು 1ಲಕ್ಷ ಯೂನಿಟ್ ರಕ್ತ ಸಂಗ್ರಹ ಗುರಿ ಹೊಂದಲಾಗಿದೆ ಎಂದರು.ನಗರದಲ್ಲಿ ವಿವಿಧೆಡೆ ರಕ್ತದಾನ ಶಿಬಿರ ಆಯೋಜಿಸಲಾಗಿದ್ದು ಆ.22ರಂದು ಎಲ್ ವಿ ಡಿ ಮಹಾವಿದ್ಯಾಲಯದಲ್ಲಿ ಬೆಳಿಗ್ಗೆ 10ರಿಂದ 5ಗಂಟೆ ವರೆಗೆ ನಡೆಯಲಿದೆ ಎಂದ ಅವರು ಆ.23ರಂದು ಐಎಂಎ ಸಭಾಂಗಣದಲ್ಲಿ.ಆ.24ರಂದು ಬ್ರಹ್ಮಕುಮಾರಿ ವಿಶ್ವವಿದ್ಯಾಲಯ ಹಾಗೂ ಗದ್ವಾಲ್ ರಸ್ತೆಯ ವೀರಾಂಜನೇಯ ಕಲ್ಯಾಣ ಮಂಟಪದಲ್ಲಿ, ಆ.25ರಂದು ಪೂರ್ಣಿಮಾ ಆಯುರ್ವೇದ ಕಾಲೇಜಿನಲ್ಲಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ನಡೆಯಲಿದ್ದು ರಕ್ತದಾನಿಗಳಿಗೆ ಪ್ರಮಾಣ ಪತ್ರ ನೀಡಿ ಅಭಿನಂದಿಸಲಾಗುತ್ತದೆ ಎಂದರು. ರಕ್ತಕ್ಕೆ ಪರ್ಯಾಯ ದ್ರವವಿಲ್ಲ ಮನುಷ್ಯನಿಗೆ ತುರ್ತು ಸಂದರ್ಭದಲ್ಲಿ ರಕ್ತದ ನೀಡಬೇಕಾದ ಅನಿವಾರ್ಯತೆ ಎದುರಾದಲ್ಲಿ ರಕ್ತದಾನಿಗಳು ನೀಡುವ ರಕ್ತವು ಜೀವದಾನವಾಗಿ ಪರಿಣಮಿಸುತ್ತದೆ ಮತ್ತು ನಮ್ಮ ಶರೀರದಲ್ಲಿ ರಕ್ತ ನೀಡಿದ ವೇಳೆ ಹೊಸ ರಕ್ತದ ಸಂಚಾಲನವಾಗಿ ನವ ಚೈತನ್ಯ ಮೂಡುತ್ತದೆ ಎಂದರು. ಈ ಸಂದರ್ಭದಲ್ಲಿ ತ್ರಿವಿಕ್ರಮ ಜೋಷಿ, ಡಾ.ಶಾಮಣ್ಣ ಮಾಚನೂರು, ಡಾ.ವೆಂಕಟೇಶ ನಾಯಕ, ಶಿವಗಿರೀಶ, ಸುಶ್ರುತ್, ಲಕ್ಷ್ಮೀಕಾಂತ ರೆಡ್ಡಿ, ರಾಜೇಂದ್ರ ಶಿವಾಳೆ ಇದ್ದರು.
Comments
Post a Comment