ಸುಮಧುರವಾಗಿ ಮೂಡಿಬಂದ ದಾಸನಾಗು ವಿಶೇಷನಾಗು ಕಾರ್ಯಕ್ರಮ:   
                                                          ನಾಗರಾಜರಾಚಾರ್ಯರ ನಿರರ್ಗಳ ಉಪನ್ಯಾಸ; ಉದಯೋನ್ಮುಖ ಸಂಗೀತಗಾರರಿಂದ  ಸುಮಧುರ ದಾಸವಾಣಿ         
                                                                           ಜಯ ಧ್ವಜ ನ್ಯೂಸ್ , ರಾಯಚೂರು , ಆ.22- ಶೃತಿ ಸಾಹಿತ್ಯ ಮೇಳದಿಂದ ನಿನ್ನೆ ಗುರುವಾರ ಸಂಜೆ ಕರ್ನಾಟಕ ಸಂಘದ ಸಭಾಂಗಣದಲ್ಲಿ ಜರುಗಿದ ದಾಸನಾಗು ವಿಶೇಷನಾಗು ಎಂಬ ವಿನೂತನ ಕಾರ್ಯಕ್ರಮ ಅಪಾರ ಜನಮೆಚ್ಚುಗೆ ಗಳಿಸಿತು.                   ಕಾರ್ಯಕ್ರಮದಲ್ಲಿ ಖ್ಯಾತ ವಾಗ್ಮಿಗಳು, ಆಧ್ಯಾತ್ಮ ಚಿಂತಕರು, ಪ್ರವಚನಕಾರರಾದ ಸ್ವಸ್ವರಂ ನಾಗರಾಜ ಆಚಾರ್ಯರ     ನಿರರ್ಗಳವಾಗಿ ಸುಶ್ರಾವ್ಯ ಸಂಗೀತ ಲೇಪನದ ಶ್ರೀ ಕನಕದಾಸರ ಸಾರಸ್ವತ ದರ್ಶನದ ಉಪನ್ಯಾಸವು ಸೇರಿದ ಪ್ರೇಕ್ಷಕರನ್ನೆಲ್ಲ ಯಾವುದೋ ಅವ್ಯಕ್ತ ಲೋಕಕ್ಕೆ ಕೊಂಡೊಯಿತು. ಕನಕದಾಸರ ಕೀರ್ತನೆಗಳ ವಿಶ್ಲೇಷಣೆ ಹೃದಯ ಸ್ಪರ್ಶಿಯಾಗಿತ್ತು. 

 ಸಭಾಂಗಣದಲ್ಲಿ  ಸೇರಿದ ಪ್ರೇಕ್ಷಕರಲ್ಲಿ ಭಾವಾವೇಷಕ್ಕೊಳಗಾದರು.  ಸುಂದರವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದವರೆಲ್ಲರೂ ಒಳ್ಳೆಯ ಕಾರ್ಯಕ್ರಮ ಎಂದು ಕೊಂಡಾಡಿದರು. 


   ಸಂಗೀತಗಾರಾದ ಜಾನ್ಸಿರಾಣಿ ಹಾಗೂ ರಶ್ಮಿ ರಾಘವೇಂದ್ರ ಸಿ.ಎನ್. ಇವರ ದಾಸವಾಣಿ ಎಲ್ಲರ ಮನ ಸೆಳೆಯಿತು.   ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಜಯಲಕ್ಷ್ಮಿ ಮಂಗಳಮೂರ್ತಿ ಅವರ ಅಧ್ಯಕ್ಷೀಯ ಭಾಷಣ, ಉದ್ಘಾಟಕರಾದ ಕರ್ನಾಟಕ ಸಂಘದ ಅಧ್ಯಕ್ಷರಾದ ಕೆ. ಶಾಂತಪ್ಪ ಅವರ ಉದ್ಘಾಟನಾ ಭಾಷಣ ಮೌಲಿಕವಾಗಿದ್ದವು. 


  ಇದೆ ವೇಳೆ ಕಾರ್ಯಕ್ರಮದಲ್ಲಿ ಸುಸ್ವರಂ ನಾಗರಾಜ ಆಚಾರ್ಯರ ಹುಟ್ಟುಹಬ್ಬವನ್ನು ಆಚರಿಸಿದ್ದು ವಿಶೇಷವಾಗಿತ್ತು. 

ಅನೇಕ ಹಿರಿಯರು ಭಾಗವಹಿಸಿದ್ದರು. ವೇದಿಕೆಯ ಮೇಲೆ ಬಿಜೆಪಿ ಮುಖಂಡರುಗಳಾದ ರವೀಂದ್ರ ಜಲ್ದಾರ್, ಕಡಗೋಲ್ ಆಂಜನೇಯ,  ವಿಜಯಕುಮಾರ್ ಸಜ್ಜನ್, ಚಿತ್ರ ನಿರ್ದೇಶಕರಾದ ಮಧುಸೂದನ್ ಹವಾಲ್ದಾರ್, ಹನುಮಂತ್ ರಾವ್ ಕಲ್ಲೂರ್ಕರ್, ಶರಣಪ್ಪ ಗೋನಾಳ್, ವಿದ್ಯಾ ಲಕ್ಷ್ಮಿ,  ಬಾಬು ಭಂಡಾರಿಗಳು, ಬಿಜಿ ಹುಲಿ, ಕುರುಬ ಸಮಾಜದ ಪ್ರಧಾನ ಕಾರ್ಯದರ್ಶಿ ಮಹದೇವಪ್ಪ, ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ  ಮುರಳೀಧರ ಕುಲಕರ್ಣಿ,ರಮೇಶ್ ಕುಲಕರ್ಣಿ ,ಸುರೇಶ್ ಕಲ್ಲೂರ್, ನರಸಿಂಹಮೂರ್ತಿ ಕುಲಕರ್ಣಿ, ಪ್ರಸನ್ನ ಆಲಂಪಲ್ಲಿ , ಜೆ.ಎಂ.ವೀರೇಶ, ರಮಾಕಾಂತ್ ಕುಲಕರ್ಣಿ ಸೇರಿದಂತೆ ಅನೇಕರು ಉತ್ಸಾಹದಿಂದ ಭಾಗವಹಿಸಿದ್ದರು.

  

Comments

Popular posts from this blog