ಅರಕೇರದಲ್ಲಿ ಪತ್ರಕರ್ತರಿಗೆ ಕೊತ್ತದೊಡ್ಡಿ ಏಕಲವ್ಯ ವಸತಿ ಶಾಲೆಯ ಪ್ರಿನ್ಸಿಪಲ್ ನಿಂದನೆ: ಕೆಯುಡ್ಬ್ಲೂಜೆ ಖಂಡನೆ

ಜಯ ಧ್ವಜ ನ್ಯೂಸ್ , ರಾಯಚೂರು,ಆ.24- ಜಿಲ್ಲೆಯ ಅರಕೇರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೊತ್ತದೊಡ್ಡಿ ಏಕಲವ್ಯ ವಸತಿ ಶಾಲೆಯ ಪ್ರಿನ್ಸಿಪಲ್  ಪತ್ರಕರ್ತರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆಯನ್ನು ಜಿಲ್ಲಾ ಕಾರ್ಯನಿರತ  ಪತ್ರಕರ್ತರ ಸಂಘ ತೀವ್ರವಾಗಿ ಖಂಡಿಸಿದೆ.

ಕೊತ್ತದೊಡ್ಡಿ ವಸತಿ ಶಾಲೆಯಲ್ಲಿ ಅನಾರೋಗ್ಯಕ್ಕೆ ತುತ್ತಾದ ವಿದ್ಯಾರ್ಥಿಗಳು ಅರಕೆರ ಪಟ್ಟಣದ ಸಮುದಾಯ ಆರೋಗ್ಯ‌ ಕೇಂದ್ರದಲ್ಲಿ ತಪಾಸಣೆ ಮಾಡಿಸಿಕೊಳ್ಳುವ ಸಂದರ್ಭದಲ್ಲಿ ಪತ್ರಕರ್ತರು  ವಿಡಿಯೋ, ಫೋಟೊ ಚಿತ್ರಿಕರಿಸಿಕೊಂಡಿದ್ದರು. ಜವಬ್ದಾರಿಯುತ ಸ್ಥಾನದಲ್ಲಿದ್ದ ಪ್ರಿನ್ಸಿಪಲ್ ಸುರೇಶ ವರ್ಮಾ ಅವರು ಮಾಹಿತಿ ಮತ್ತು ಚಿತ್ರ ಸಂಗ್ರಹಕ್ಕೆ ಆಗಮಿಸಿದ್ದ ಮಾಧ್ಯಮದವರೊಂದಿಗೆ ಅನುಚಿತವಾಗಿ ವರ್ತಿಸಿ. ಮಾಧ್ಯಮದವರು ಲೋಫರ್ಸ್, ಉಪಯೋಗಕ್ಕೆ ಬಾರದವರು, ಇಡಿಯಟ್ಸ್ ನೀವೆನು ಮಾಹಿತಿ ಪಡಿಯುತ್ತೀರಿ ಎಂದು ನಿಂದಿಸಿರುವುದು ಖಂಡನೀಯ.

 ಪತ್ರಕರ್ತರೊಂದಿಗೆ ಅನುಚಿತವಾಗಿ ವರ್ತಿಸಿದ ಕೊತ್ತದೊಡ್ಡಿ ಏಕಲವ್ಯ ವಸತಿ ಶಾಲೆಯ ಪ್ರಿನ್ಸಿಪಲ್ನನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಿ ಕ್ರಮಕ್ಕೆ ಮುಂದಾಗ ಬೇಕೆಂದು  ಕೆಯುಡಬ್ಲ್ಯೂ ಜೆ ಜಿಲ್ಲಾಧ್ಯಕ್ಷ   ಆರ್. ಗುರುನಾಥ್ ಪ್ರಕಟಣೆ ಮೂಲಕ ಒತ್ತಾಸಿದ್ದಾರೆ.




Comments

Popular posts from this blog