ಪರಿಸರ  ಸ್ನೇಹಿ ಗಣಪ:   ಆಲಂಪಲ್ಲಿ ಪ್ರತಿಷ್ಟಾನ ಶ್ಲಾಘನೆ                                             


 ಜಯ ಧ್ವಜ ನ್ಯೂಸ್ , ರಾಯಚೂರು, ಆ.26-                  ಪರಿಸರ ಸ್ನೇಹಿ ಮಣ್ಣಿನ ಗಣಪ ಮಾಡಿದ ಕಲಾವಿದರಾದ ಆನಂದ ಕುಲಕರ್ಣಿ ಅವರಿಗೆ ಆಲಂಪಲ್ಲಿ ಪ್ರತಿಷ್ಟಾನ ರಾಯಚೂರು ವತಿಯಿಂದ ಪ್ರಸನ್ನ ಆಲಂಪಲ್ಲಿ ಸನ್ಮಾನಿಸಿ  ಗೌರವ ಸಮರ್ಪಿಸಿದರು .

ರಾಯಚೂರಿನಲ್ಲಿ ಕಳೆದ 30 ವರ್ಷ ಗಳಿಂದ ಪರಿಸರ ಸ್ನೇಹಿ ಮಣ್ಣಿನ ಗಣಪನ ಮೂರ್ತಿಗಳನ್ನು ತಾವೇ ಸ್ವತಃ ತಮ್ಮ ಕೈಯಿಂದ ತಯಾರಿಸಿ ಆತ್ಮೀಯರಿಗೆ,ಮನೆ ಪಕ್ಕದವರಿಗೆ,ಬಡಾವಣೆ ಜನರಿಗೆ ಮತ್ತು ಬಂಧು ಬಳಗದವರಿಗೆ ಉಚಿತವಾಗಿ ಮಣ್ಣಿನ ಗಣೇಶನನ್ನು  ಯಾವುದೇ ಕೃತಕ ಪರಿಸರಕ್ಕೆ ಹಾನಿಕಾರಕ ಬಣ್ಣಗಳನ್ನು ಬಳಸದೆ ಪರಿಸರ ಸ್ನೇಹಿ ವಾಟರ ಪೇಂಟ್ ನಿಂದಲೇ ಅತ್ಯಾಕರ್ಷಕ ವಿವಿಧ ಭಂಗಿಯ ಗಣೇಶ ಮೂರ್ತಿ ಗಳನ್ನು ತಯಾರಿಸಿ ತಮಗೆ


ದೈವದತ್ತವಾಗಿ ಒಲಿದು ಬಂದ ಕಲೆಯನ್ನು ಉಳಿಸಿಕೊಂಡು ಪ್ರತಿ ಗಣೇಶೋತ್ಸವ ಸಂಧರ್ಭದಲ್ಲಿ ಇಚ್ಛೆ ಪಟ್ಟವರಿಗೆ,ವಿಧ್ಯಾರ್ಥಿಗಳಿಗೆ ಕಲೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರ  ಮಾಡುತ್ತಿರುವ ಉದಾತ್ತ ಮನೋಭಾವನೆಯುಳ್ಳವರು ವಿರಳವಾಗಿದ್ದು ಪರಿಸರ ಸ್ನೇಹಿ ಮನೋಭಾವ ಹೊಂದಿರುವ ಇವರ ಕಾರ್ಯಕ್ಕೆ ನಗರದ ಜನತೆ ಮೆಚ್ಚುಗೆ ವ್ಯಕ್ತಪಡಿಸಿದೆ.

Comments

Popular posts from this blog