ಸಮಸ್ತ ಬ್ರಾಹ್ಮಣ ಯುವಕ ಮಂಡಳಿ ಗಣೇಶೋತ್ಸವ: ಲಕ್ಷ್ಮೀ ಶೋಬಾನೆ ಸಹಿತ ಕುಂಕುಮಾರ್ಚನೆ
ಜಯಧ್ವಜ ನ್ಯೂಸ್, ರಾಯಚೂರು, ಆ. 29- ಸಮಸ್ತ ಬ್ರಾಹ್ಮಣ ಯುವಕ ಮಂಡಳಿ ಗಣೇಶೋತ್ಸವದ ಮೂರನೇ ದಿನವಾದ ಇಂದು ಭಕ್ತಿಭಾವ ಹಾಗೂ ಸಾಂಸ್ಕೃತಿಕ ವೈಭವದ ನಡುವೆ ವಿಜೃಂಭಣೆಯಿಂದ ನೆರವೇರಿತು.
ಸಂಜೆ 6 ಗಂಟೆಗೆ ರಾಯಚೂರಿನ ಸಮಸ್ತ ಸುಮಂಗಲಿ ಸ್ತ್ರೀಯರ ಸಮ್ಮುಖದಲ್ಲಿ ಲಕ್ಷ್ಮೀ ಶೋಭಾನೆ ಸಹಿತ ಕುಂಕುಮಾರ್ಚನೆ ಕಾರ್ಯಕ್ರಮ ನೇರವೇರಿತು.
ಅರವಿಂದ ಆಚಾರ ಸಗರ ಅವರಿಂದ ಪೂಜಾ ಕೈಂಕರ್ಯಗಳು ನೇರವೇರಿದವು.
ಮಾನ್ಯ ಮುಕುಂದಾಚಾರ್ ಜೋಶಿ ಅವರು ಸುಮಂಗಲಿ ಸ್ತ್ರೀಯರಿಗೆ ಲಕ್ಷ್ಮೀ ಮೂರ್ತಿಯನ್ನು ದಾನವಾಗಿ ನೀಡಿದರು. ಕಾರ್ಯಕ್ರಮದ ಕೊನೆಗೆ ಮಹಾಮಂಗಳಾರತಿ ನೆರವೇರಿಸುವದರ ಮೂಲಕ ಮೂರನೇ ದಿನದ ಕಾರ್ಯಕ್ರಮಕ್ಕೆ ಮಂಗಳ ಹಾಡಲಾಯಿತು. ಭಕ್ತಾದಿಗಳಿಗೆಲ್ಲರಿಗೂ ಪ್ರಸಾದ ವಿತರಣೆ ಮಾಡಲಾಯಿತು. ಹೆಚ್ಚನ ಸಂಖ್ಯೆಯಲ್ಲಿ ಮಹಿಳೆಯರು, ಯುವಕರು ಪಾಲ್ಗೊಂಡಿದ್ದರು.
Comments
Post a Comment