ಏಮ್ಸ್  ನೀಡದ ಕೇಂದ್ರ ಸರಕಾರದಿಂದ  ಮಹಾ ದ್ರೋಹ- ಅಂಬಾಜಿರಾವ್ 


ಜಯ ಧ್ವಜ ನ್ಯೂಸ್ ರಾಯಚೂರು,ಆ.2-  ಕಳೆದ ಮೂರು ವರ್ಷಗಳಿಂದ ಏಮ್ಸ್  ಸ್ಥಾಪನೆಗಾಗಿ ಹೋರಾಟ ನಡೆಸಿದರೂ, ಇನ್ನು ಕೇಂದ್ರ ಸರಕಾರ ರಾಯಚೂರಿಗೆ ಎಮ್ಸ್ ನೀಡದೆ ಮಹಾ ದ್ರೋಹವೆಸಗಿದೆ ಎಂದು ಸಮಾಜ ಸೇವಕರಾದ ಅಂಬಾಜಿ ರಾವ್ ಮೈದರ್ಕರ್ ಅವರು ಆರೋಪಿಸಿದ್ದಾರೆ.


ಕರ್ನಾಟಕಕ್ಕೆ ಇನ್ನು ಏಮ್ಸ್ ಸ್ಥಾಪನೆಯಾಗಿಲ್ಲ   ಜಿಲ್ಲೆಯ ಹಾಗೂ ಕಲ್ಯಾಣ ಕರ್ನಾಟಕ  ಜನರ ಕನಸು ನನಸಾಗದೆ ಉಳಿದಿದೆ.

ಭಾರತದ ಪ್ರಮುಖ ಆರೋಗ್ಯ ಸಂಸ್ಥೆಯಾದ ಏಮ್ಸ್ ಕರ್ನಾಟಕಕ್ಕೆ ಬಾರದಂತಾಗಿದೆ. ದೇಶದ ಅನೇಕ ರಾಜ್ಯಗಳಲ್ಲಿ ಏಮ್ಸ್ ನೀಡಲಾಗಿದೆ ರಾಯಚೂರಿಗೆ ಅನ್ಯಾಯ   ಮುಂದುವರೆದಿದೆ  ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ನಮ್ಮ ನಗರ ಮಹಾನಗರ ಪಾಲಿಕೆಯಾಗಿ ಬದಲಾವಣೆ ಆದ್ರೂ ಕೂಡ ಏಮ್ಸ್ ನೀಡದ ಕೇಂದ್ರ ಸರಕಾರದ ಕ್ರಮ ಖಂಡನೀಯ. ರಾಜ್ಯ ಸರ್ಕಾರ ಹಲವಾರು ಬಾರಿ ಪತ್ರ ಬರೆದು ಒತ್ತಡ ಹಾಕಿದರೂ ಕೇಂದ್ರ ಸರಕಾರ ಕುರುಡಾಗಿ ವರ್ತಿಸುತ್ತಿದೆ ಎಂದು ದೂರಿರುವ ಅವರು ಕೇಂದ್ರ ಸರಕಾರದ ನಿರ್ಲಕ್ಷ್ಯ ಹಾಗೂ ಮಲತಾಯಿ ಧೋರಣೆ ನಿಲ್ಲುತ್ತಿಲ್ಲ ಎಂದು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments

Popular posts from this blog