ಶ್ರೀ ಸುಬುಧೇಂದ್ರತೀರ್ಥರಿಗೆ ಹಾಗೂ ಶ್ರೀ ಸತ್ಯಾತ್ಮತೀರ್ಥರಿಗೆ ಕಣ್ವ ಮಠದ ಚಾತುರ್ಮಾಸ್ಯ ಗೌರವ ಸಮರ್ಪಣೆ
ಜಯ ಧ್ವಜ ನ್ಯೂಸ್, ರಾಯಚೂರು, ಆ.30- ಕಣ್ವ ಮಠಾಧೀಶರಾದ ಶ್ರೀ ಶ್ರೀ ೧೦೦೮ ಶ್ರೀ ವಿದ್ಯಾಕಣ್ವ ವಿರಾಜ ತೀರ್ಥ ಶ್ರೀಪಾದಂಗಳವರ ಆಜ್ಞೆಯಂತೆ ಆ.29 ರಂದು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಮಂತ್ರಾಲಯ ಹಾಗೂ ಶ್ರೀ ಉತ್ತರಾಧಿಮಠಾಧೀಶರು ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಹೈದರಾಬಾದ ಗೆ ತೆರಳಿ ಕಣ್ವಮಠ ದ ಚಾತುರ್ಮಾಸ ಗೌರವ ಸಮರ್ಪಣೆ ಯನ್ನು ಮಾಡಲಾಯಿತು. ಮಂತ್ರಾಲಯ ರಾಯರ ಮಠ ಮಠಾಧೀಶರಾದ ಶ್ರೀ ಶ್ರೀ ೧೦೦೮ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಮೂಲಕ ಶ್ರೀಮನ್ಮೂಲ ರಾಮಚಂದ್ರ ದೇವರಿಗೆ ಹಾಗೂ ರಾಘವೇಂದ್ರ ಸ್ವಾಮಿಗಳು ಹಾಗೂ ಹಾಗೂ ಉತ್ತರಾಧಿ ಮಠದ ಮಠಾಧೀಶರಾದ ಶ್ರೀ ಶ್ರೀ ೧೦೦೮ ಶ್ರೀ ಸತ್ಯಾತ್ಮ ತೀರ್ಥ ಶ್ರೀ ಪಾದಂಗಳವರ ಮೂಲಕ ಶ್ರೀ ದಿಗ್ವಿಜಯ ಮೂಲ ರಾಮದೇವರಿಗೆ ಚಾತುರ್ಮಾಸ ಸಮಿತಿ ಹಾಗೂ ಶ್ರೀ ಮತ್ ಕಣ್ವ ಮಠ ಆಡಳಿತಾಭಿವೃದ್ದಿ ಟ್ರಸ್ಟ ಹುಣಸಿಹೊಳೆ ವತಿಯಿಂದ ಫಲಪುಷ್ಪ ಶೇಷವಸ್ತ್ರ ಚಾತುರ್ಮಾಸ ಕಾಣಿಕೆ ಸಹಿತ ನೆರವೇರಿಸಲಾಯಿತು.
ಶ್ರೀ ಮತ್ ಕಣ್ವ ಮಠ ಆಡಳಿತಾಭಿವೃದ್ದಿ ಟ್ರಸ್ಟ ಹುಣಸಿಹೊಳೆ ಕಾರ್ಯಾಧ್ಯಕ್ಷರಾದ ರಾಘವೇಂದ್ರ ಅಲಗೂರ,ಪ್ರಚಾರ ಮತ್ತು ಮಾಧ್ಯಮ ಸಮಿತಿ ಮುಖ್ಯಸ್ಥರಾದ ಪ್ರಸನ್ನ ಆಲಂಪಲ್ಲಿ,ಚಾತುರ್ಮಾಸ ಸಮಿತಿ ಅಧ್ಯಕ್ಷರಾದ ಶ್ರೀ ಪ್ರಕಾಶರಾವ್,ಕಾನೂನು ಸಲಹೆಗಾರರಾದ ವಿ.ಕೆ. ಕೃಷ್ಣ ,ಸಿಂದನೂರು ಮಠಾಧಿಕಾರಿಗಳಾದ ವೇ ಮೂ . ನರಸಿಂಹ ಆಚಾರ ಮಠಾಧಿಕಾರಿ,ಪಂಡಿತರಾದ ರಂಗನಾಥ ಸಾಲಗುಂದ ಇನ್ನಿತರರು ಉಪಸ್ಥಿತರಿದ್ದರು.
Ati uttam 👍🏻👌🏻 innu iddaara yaaraadaru Limgampally Kacheguda matha dalli
ReplyDeleteNanagey bheti aagodide.
Vitthala Jayakrusna vijayatey