ಶೃತಿ ಸಾಹಿತ್ಯ ಮೇಳದಿಂದ ಯಶಸ್ವಿ ಯಾಗಿ ಜರುಗಿದ ದಾಸನಾಗು ವಿಶೇಷನಾಗು ಕಾರ್ಯಕ್ರಮ:            ಕನಕದಾಸರು ಸಮಾಜಕ್ಕೆ ಮೌಲಿಕ ಸಾಹಿತ್ಯವನ್ನು ನೀಡಿದ ಭಕ್ತಿಯ ಸಾಕಾರ ಮೂರ್ತಿ- ಸುಸ್ವರಂ ನಾಗರಾಜಾಚಾರ್ಯ

ಜಯ ಧ್ವಜ ನ್ಯೂಸ್ , ರಾಯಚೂರು , ಆ. 22-ನಗರದ ಸಾಹಿತಿಕ ಹಾಗೂ ಸಾಂಸ್ಕೃತಿಕ ಸಂಘಟನೆಯಾದ ಶ್ರುತಿ ಸಾಹಿತ್ಯ ಮೇಳದಿಂದ ಗುರುವಾರ  ಸಂಜೆ  ಕರ್ನಾಟಕ ಸಂಘದ ಸಭಾಂಗಣದಲ್ಲಿ ಜರುಗಿದ ದಾಸನಾಗು ವಿಶೇಷನಾಗು ಶ್ರೀ ಕನಕದಾಸರ  ಸಾರಸ್ವತ ದರ್ಶನ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು. 

  ಖ್ಯಾತ ವಾಗ್ಮಿಗಳು ಪ್ರವಚನಕಾರರಾಗಿರವ ಸುಸ್ವರಂ ನಾಗರಾಜ ಆಚಾರ್ಯರು ಮಾತನಾಡಿ ಕನಕದಾಸರು ಸಮಾಜಕ್ಕೆ ಮೌಲಿಕ ಸಾಹಿತ್ಯವನ್ನು ನೀಡಿದ ಭಕ್ತಿಯ ಸಾಕಾರ ಮೂರ್ತಿ. ಇವರ ಪರಿಪಕ್ವ ಜೀವನಾನುಭವ, ವಿವೇಕ, ಸಮಚಿತ್ತತೆ, ಮುಂತಾದ ಸಿದ್ಧಿಗಳಿಂದ ಅವರ ಸಾಹಿತ್ಯವು ಎಲ್ಲ ಕಾಲಕ್ಕೂ ನಿಲ್ಲಬಲ್ಲ ಪರಿಪಕ್ವ ಸಾಹಿತ್ಯವಾಗಿದೆ. ಮಹಾಭಾರತ ,ರಾಮಾಯಣ, ಉಪನಿಷತ್ತು, ಶೃತಿ,ಸ್ಮೃತಿ, ಶಾಸ್ತ್ರ  ಮುಂತಾದವುಗಳ ಆಧಾರದ ಮೇಲೆ ರೂಪಗೊಂಡ  ಇವರ ಕೀರ್ತನೆಗಳು  ಸಮಾಜವನ್ನು ತಿದ್ದುವ ಸಂಜೀವಿನಿಗಳಾಗಿವೆ ಎಂದು ಹೇಳಿದರು. 


   ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶೃತಿ ಸಾಹಿತ್ಯ ಮೇಳದ ಗೌರವಾಧ್ಯಕ್ಷರು ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ.ಜಯಲಕ್ಷ್ಮಿ ಮಂಗಳಮೂರ್ತಿಯವರು ಮಾತನಾಡಿ  ಕನಕದಾಸರ ಸಂಕೀರ್ತನೆಗಳು ಸಾಮಾಜಿಕ ಕಳಕಳಿಯನ್ನು ದಟ್ಟವಾಗಿ ತೋರಿಸುತ್ತವೆ. ಆ ಕಾಲದಲ್ಲಿಯೇ ಹಲವಾರು ಮೂಢನಂಬಿಕೆಗಳನ್ನು ಎದೆಗಾರಿಕೆಯಿಂದ ಖಂಡಿಸಿದ ಭಕ್ತಿಯ ಮಹಾ ಚೇತನವೇ ಕನಕದಾಸರು. ಕನಕದಾಸರು ಬೂದಿ ಮುಚ್ಚಿದ ಪ್ರಜ್ಞೆಯ ಕೆಂಡ ಅವರು ವಿನಮ್ರತೆಯ ಅಕ್ಷಯ ನಿಧಿ. ದುರ್ಬಲ ವರ್ಗಗಳ ಜನತೆಯಲ್ಲಿ ನೈತಿಕ ಮೌಲ್ಯಗಳನ್ನು ,ಮಾನವೀಯ ಮೌಲ್ಯಗಳನ್ನು ಬಿತ್ತಿದ ಶ್ರೇಷ್ಠ ಚೇತನರೇ ಕನಕದಾಸರು ಎಂದು ಹೇಳಿದರು. ಕರ್ನಾಟಕ ಸಂಘದ ಅಧ್ಯಕ್ಷರಾದ ಕೆ.ಶಾಂತಪ್ಪ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶೃತಿ ಸಾಹಿತ್ಯ ಮೇಳ ಹಮ್ಮಿಕೊಳ್ಳುವ ಕಾರ್ಯಕ್ರಮಗಳು ಸಮಾಜಮುಖಿಯಾಗಿರುತ್ತವೆ ಎಂದ ಅವರು ದಾಸನಾಗು ವಿಶೇಷನಾಗು ಎಂಬ ಕಾರ್ಯಕ್ರಮವು ತುಂಬಾ ವಿನೂತನವಾದ ಕಾರ್ಯಕ್ರಮವಾಗಿದೆ  ಕನಕದಾಸರ ಪ್ರತಿಯೊಂದು ವಿಚಾರಗಳನ್ನು, ಅವರ ಆದರ್ಶಗಳನ್ನು ನಾವು ಅಳವಡಿಸಿಕೊಂಡಾಗ ಮಾತ್ರ ಕನಕದಾಸರಿಗೆ ಗೌರವ ಕೊಟ್ಟಂತಾಗುತ್ತದೆ ಎಂದು ಹೇಳಿದರು. 

ಮುಖ್ಯ ಅತಿಥಿಗಳಾಗಿ ಬಿಜೆಪಿ ಪಕ್ಷದ ಮುಖಂಡರುಗಳಾದ ಕಡಗೋಲ ಆಂಜನೇಯ, ರವೀಂದ್ರ ಜಲ್ದಾರ್,  ವಿಜಯಕುಮಾರ್ ಸಜ್ಜನ್, ಬ್ರಾಹ್ಮಣ ಸಮಾಜದ ಮುಖಂಡರಾದ ಹನುಮಂತರಾವ್ ಕಲ್ಲೂರ್ಕರ್ಚಲನಚಿತ್ರ ನಿರ್ದೇಶಕರಾದ ಮಧುಸೂದನ್ ಹವಾಲ್ದಾರ್, ಜನಪದ ಪರಿಷತ್ತಿನ ಅಧ್ಯಕ್ಷರಾದ ಶರಣಪ್ಪ ಗೋನಾಳ್,  ವಿದ್ಯಾ ಲಕ್ಷ್ಮಿ ಮಾಲಿ ಪಾಟೀಲ್, ಬಿ.ಜಿ .ಹುಲಿ, ಮಹದೇವಪ್ಪ , ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. 

 ಜಾನ್ಸಿರಾಣಿ , ರಶ್ಮಿ ರಾಘವೇಂದ್ರ ಸಿ.ಎನ್. ಅವರಿಂದ ದಾಸವಾಣಿ ಕಾರ್ಯಕ್ರಮ ಜರಗಿತು.

 ನೂತನವಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ  ಪ್ರತಿನಿಯಾಗಿ ಚುನಾಯಿತರಾದ ರಮೇಶ್ ಕುಲಕರ್ಣಿ ಅವರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.

 ಕಾರ್ಯಕ್ರಮದಲ್ಲಿ ಬಾಬು ಭಂಡಾರಿಗಲ್, ನರಸಿಂಗರಾವ್, ಸುರೇಶ್ ಕಲ್ಲೂರ್, ಪ್ರಸನ್ನ ಆಲಂಪಲ್ಲಿ , ರಮಾಕಾಂತ್ ಕುಲಕರ್ಣಿ ನರಸಿಂಹಮೂರ್ತಿ ಕುಲಕರ್ಣಿ, ವಸುದೇಂದ್ರ ಸಿರವಾರ  ಮುಂತಾದವರು ಉಪಸ್ಥಿತರಿದ್ದರು.                 ರಶ್ಮಿ ರಾಘವೇಂದ್ರ ಸಿ.ಎನ್.ಹಾಗೂ ಜಾನ್ಸಿ ರಾಣಿ ನಾರಾಯಣರಾವ್  ಅವರ ಪ್ರಾರ್ಥನೆ ಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಸ್ವಾಗತವನ್ನು ಶ್ರುತಿ ಸಾಹಿತ್ಯ ಮೇಳದ ಕಾರ್ಯದರ್ಶಿ ಶ್ರೀ ರಮೇಶ್ ಕುಲಕರ್ಣಿ ಅವರು ಮಾಡಿದರೆ. ನಿರೂಪಣೆಯನ್ನು ಸಹ ಕಾರ್ಯದರ್ಶಿ  ಜೆ.ಎಂ. ವೀರೇಶ್ ಮಾಡಿದರು.  ಶೃತಿ ಸಾಹಿತ್ಯದ ಅಧ್ಯಕ್ಷ ಮುರಳಿಧರ್ ಕುಲಕರ್ಣಿ ಅವರ ವಂದನಾರ್ಪಣೆಯೊಂದಿಗೆ ಮುಕ್ತಾಯಗೊಂಡಿತು. ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರಿದ್ದರು.

Comments

Popular posts from this blog