ಧರ್ಮಸ್ಥಳದ ಘನತೆಗೆ ಧಕ್ಕೆ ತರುವವರ‌ ಮೇಲೆ ಕಠಿಣ ಕ್ರಮಕ್ಕೆ ಯುವ ಬ್ರಿಗೇಡ್‌ ಆಗ್ರಹ

ಜಯ ಧ್ವಜ ನ್ಯೂಸ್ ,ರಾಯಚೂರು ಆ.20- ಭಾರತ ದೇಶದ ಪ್ರಸಿದ್ಧ ಹಾಗೂ  ಪ್ರಮುಖ ಧಾರ್ಮಿಕ ಶ್ರದ್ಧಾಕೇಂದ್ರಗಳಲ್ಲಿ ಒಂದಾಗಿರುವ  ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ದೇವಾಲಯ ದಶಕಗಳಿಂದ ಸಮಾಜಮುಖಿ ಕಾರ್ಯಗಳಿಂದ,ಕೋಟ್ಯಂತರ ಭಕ್ತರ ಭರವಸೆಯ ಕೇಂದ್ರವಾಗಿದೆ ಇಂತಹ ಪವಿತ್ರ ಕ್ಷೇತ್ರದ  ಘನತೆಗೆ ಧಕ್ಕೆ ತರುತ್ತಿರುವವರನ್ನು ತಕ್ಷಣ ಬಂಧಿಸಲು ಆಗ್ರಹಿಸಿ ಯುವಾ ಬ್ರಿಗೇಡ್ ಮಾನ್ವಿ ಸಂಘಟನೆಯ ವತಿಯಿಂದ  ಜಿಲ್ಲಾಧಿಕಾರಿಗಳಿಗೆ ಇಂದು ಮನವಿಪತ್ರ ಸಲ್ಲಿಸಲಾಯಿತು.


ಈ ವಿಷಯವನ್ನು ರಾಜ್ಯ ಸರ್ಕಾರ ಈಗಾಗಲೇ ಗಂಭೀರವಾಗಿ ಪರಿಗಣಿಸಿ ಎಸ್ ಐಟಿ ತನಿಖೆ ನಡೆಸುತ್ತಿರುವಾಗಲೇ ಧರ್ಮಸ್ಥಳದ ಘನತೆಗೆ ಧಕ್ಕೆ ತರುವ ರೀತಿಯಲ್ಲಿ ಅವಹೇಳನಕಾರಿ ಹೇಳಿಕೆಗಳು ಸಾರ್ವಜನಿಕವಾಗಿ ಅನೇಕರು ವ್ಯಕ್ತಪಡಿಸುತ್ತಿದ್ದು  ತಕ್ಷಣವೇ ಅವರನ್ನು  ಬಂಧಿಸಿ ವಿಚಾರಣೆಗೆ ಒಳಪಡಿಸಿ,  ಈ ಷಡ್ಯಂತ್ರದ ಪಿತೂರಿ ಮಾಡಿರುವ ಸಮಾಜ ಘಾತುಕರ ವಿರುದ್ಧ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕೆಂದು  ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಯುವಾಬ್ರಿಗೇಡ್  ಜಿಲ್ಲಾ ಸಂಚಾಲಕ ಬಸವರಾಜ ಬೊಮ್ಮನಾಳ್ , ರವಿ ಗೌಡ ಮಿರಾಪುರ, ನಿರಂಜನ್ ದೇವದುರ್ಗ, ಸುದೀಪ್ ಪಾಟೀಲ್, ಕೃಷ್ಣ ಮಾನ್ವಿ, ಸೇರಿದಂತೆ ಇತರರು ಇದ್ದರು.

Comments

Popular posts from this blog