ಸಮಸ್ತ ಬ್ರಾಹ್ಮಣ ಯುವಕ ಮಂಡಳಿ ಗಣೇಶೋತ್ಸವ: ಗಣಪತಿಗೆ ಗರಿಕೆ ಅರ್ಚನೆ ಹಾಗೂ ದಾಸವಾಣಿ ಭಕ್ತಿ ಸಮರ್ಪಣೆ

 ಜಯ ಧ್ವಜ ನ್ಯೂಸ್, ರಾಯಚೂರು , ಆ. 28- ನಗರದ ಮಾಣಿಕ್ ಪ್ರಭು ದೇವಸ್ಥಾನ ರಸ್ತೆಯ ಬ್ರಾಹ್ಮಣ ವಿದ್ಯಾರ್ಥಿ ನಿಲಯದಲ್ಲಿ ಸಮಸ್ತ ಬ್ರಾಹ್ಮಣ ಯುವಕ ಮಂಡಳಿಯಿಂದ ಪ್ರತಿಷ್ಟಾಪಿಸಲಾದ ಗಣೇಶೋತ್ಸವದಲ್ಲಿ ವಿವಿಧ ಕಾರ್ಯಕ್ರಮ ನಡೆದವು.  ವಿನಾಯಕ ಚತುರ್ಥಿ ಉತ್ಸವದ ಎರಡನೇ  ದಿನವಾದ ಇಂದು ಭಕ್ತಿಭಾವ ಹಾಗೂ ಸಾಂಸ್ಕೃತಿಕ ವೈಭವದ ನಡುವೆ ವಿಜೃಂಭಣೆಯಿಂದ ನೆರವೇರಿತು.

ಸಂಜೆ 6 ಗಂಟೆಗೆ ,ಶ್ರೀ ಗೋಪಿನಾಥ ಆಚಾರ್ ಕೊಪ್ಪರ ಅವರಿಂದ ಗರಿಕೆ ಅರ್ಚನೆ ನೆರವೇರಿತು. ಶ್ರೀ ಗಣಪತಿಯ ಆಶೀರ್ವಾದವನ್ನು ಕೋರುತ್ತಾ ಈ ಅರ್ಚನೆಯಿಂದ ದಿನದ ಕಾರ್ಯಕ್ರಮಗಳಿಗೆ ಶುದ್ಧ ಆಚರಣೆಯ ಆದಿಯನ್ನು ನೀಡಲಾಯಿತು.


ಇದಾದ ನಂತರ, ದಾಸ ಸಾಹಿತ್ಯದ ಮಹತ್ವವನ್ನು ಸಾರುವ  ದಾಸವಾಣಿ ಕಾರ್ಯಕ್ರಮ ನಡೆಯಿತು ದಾಸ ಸಾಹಿತ್ಯಕ್ಕೆ ಅಪಾರ ಕೊಡುಗೆಯನ್ನ ನೀಡಿ ,ದಾಸರ ಕೀರ್ತನೆಗಳನ್ನು  ಮನೆಮನೆಗೆ ತಲುಪಿಸುವಲ್ಲಿ ತಮ್ಮ ಜೀವನವನ್ನೇ ಸಮರ್ಪಿಸಿಕೊಂಡ *ಪೂಜ್ಯ ಶ್ರೀ ಕಟಗೇರಿ ದಾಸರ* ಇತ್ತೀಚಿನ  ಇಹಲೋಕದ ಅಗಲಿಕೆಯ ಹಿನ್ನೆಲೆಯಲ್ಲಿ, ಮೌನಾಚರಣೆಯ ಮೂಲಕ ಅವರಿಗೆ ನಮನ ಸಲ್ಲಿಸಿ ಇಂದಿನ ದಾಸವಾಣಿಯನ್ನು  ಅವರಿಗೆ ಸಮರ್ಪಣೆ ಮಾಡಲಾಯಿತು. 

ದಾಸವಾಣಿಯು ಗುಂಡಾಚಾರ್ ಹೊಳಗುಂದಿ ಮತ್ತು  ಜಯಸಿಂಹಚಾರ್ ಪೆರೂರ್ ಅವರ ಜುಗಲಬಂದಿ ಭಕ್ತಿಭಾವಪೂರ್ಣವಾಗಿ ನಡೆಯಿತು. ಭಕ್ತರೆಲ್ಲರೂ ದಾಸರ ಕೀರ್ತನೆಗಳನ್ನು ಆಲಿಸುತ್ತ ಭಕ್ತಿಪರಿವಶತೆ ಅನುಭವಿಸಿದರು.

ಕಾರ್ಯಕ್ರಮದ ಕೊನೆಗೆ ಮಹಾಮಂಗಳಾರತಿ ನೆರವೇರಿಸುವದರ ಮೂಲಕ ಎರಡನೇ ದಿನದ ಕಾರ್ಯಕ್ರಮಕ್ಕೆ ಮಂಗಳ ಹಾಡಲಾಯಿತು. ಕಾರ್ಯಕ್ರಮದಲ್ಲಿ ಹಿರಿಯರು, ಮಹಿಳೆಯರು, ಸಮಸ್ತ ಬ್ರಾಹ್ಮಣ ಯುವಕರು ಪಾಲ್ಗೊಂಡಿದ್ದರು.



Comments

Popular posts from this blog