ನಗರದಲ್ಲಿ ಆ.22 ರಿಂದ 31ರವರೆಗೆ ಮೈಸೂರು ಸ್ಯಾಂಡಲ್ ಸೋಪ್ ಮೇಳ: ನಟಿ ತಮನ್ನಾ ಭಾಟಿಯಾ ರಾಯಭಾರಿಯಾದ ನಂತರ ವಹಿವಾಟು ವೃದ್ಧಿ -ಗಂಗಪ್ಪ. ಜಯ ಧ್ವಜ ನ್ಯೂಸ್, ರಾಯಚೂರು,ಆ.21- ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತವು ನಗರದಲ್ಲಿ ಆ.22ರಿಂದ 31ರವರೆಗೆ ಮೈಸೂರು ಸ್ಯಾಂಡಲ್ ಸೋಪ್ ಮೇಳ ಆಯೋಜಿಸುತ್ತಿದೆ ಎಂದು ಸಂಸ್ಥೆಯ ಮುಖ್ಯ ವ್ಯವಸ್ಥಾಪಕ ಗಂಗಪ್ಪ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿಸೋಪ್ ಮೇಳ ಆಯೋಜಿಸಲಾಗುತ್ತಿದ್ದು ಮೈಸೂರು ದರ್ಬಾರ್ ಸಭಾಂಗಣ ಹೋಲುವ ಒಳಾಂಗಣ ಸೆಟ್ ಹಾಕಲಾಗುತ್ತಿದ್ದು 50 ಕ್ಕೂ ಹೆಚ್ಚು ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದ್ಧು ವಿಶೇಷ ರಿಯಾಯಿತು ಸಹ ನೀಡಲಾಗುತ್ತಿದೆ ಎಂದರು. ಮೈಸೂರು ಮಹಾರಾಜರಿಂದ ಒಂದು ಶತಮಾನದ ಹಿಂದೆ ಸ್ಥಾಪಿಸಲಾದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತವು ಇಂದಿಗೂ ತನ್ನ ಖ್ಯಾತ ಉಳಿಸಿಕೊಂಡಿದ್ದು ಜಾಗತಿಕವಾಗಿ ವಿಶಿಷ್ಟ ಛಾಪು ಮೂಡಿಸಿದೆ ಎಂದರು. ಪ್ರತಿ ವರ್ಷವು ಲಾಭಾಂಷ ಗಳಿಕೆಯಲ್ಲಿ ಏರಿಕೆ ಕಾಣುತ್ತಿದ್ದು ನೈಸರ್ಗಿಕ ಶ್ರೀಗಂಧದ ಎಣ್ಣೆಯಿಂದ ತಯಾರಿಸಲ್ಪಡುವ ಮೈಸೂರು ಸ್ಯಾಂಡಲ್ ಸೋಪ್ ತನ್ನ ಚಾರಿತ್ರಿಕ ಗುಣಮಟ್ಟ ಕಾಯ್ದುಕೊಂಡಿದ್ದು ಮಾರುಕಟ್ಟೆಯಲ್ಲಿ ಇತರೆ ಎಷ್ಟೇ ಸಾಬೂನು ಗಳು ಬಂದರು ನಮ್ಮ ಸಾಬೂನು ತನ್ನ ಮಾರುಕಟ್ಟೆ ಹಿಡಿತ ಕಾಪಾಡಿಕೊಂಡಿದೆ ಎಂದರು. ಶ್ರೀಗಂಧ ಬೆಳೆದು ರೈತರೊಂದಿಗೆ ಒಡಂಬಡಿಕೆ ಮಾಡಿಕೊಂಡು ಅವರಿಂದು ಗಂಧದ ಕಟ್ಟಿಗೆ ಪಡೆದುಕೊಂಡು ರೈತರಿಗೆ ಉತ್ತೇಜನ ನೀಡಲಾಗುತ್ತದೆ ಎಂದರು. ಬಾಲಿವುಡ್ ನಟಿ ತಮನ್ನಾ ಭಾಟಿಯಾ ರಾಯಭಾರಿಯಾದ ನಂತರ ನಮ್ಮ ಸಂಸ್ಥೆಯ ವಹಿವಾಟು ವೃದ್ಧಿಯಾಗಿದೆ ಎಂದ ಅವರು ಕನ್ನಡದ ನಟಿಯರು ಸಹ ಉತ್ಪನ್ನಗಳ ಪ್ರಚಾರ ಕೈಗೊಳ್ಳಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ಗುರು ಪ್ರಸಾದ್ ಇದ್ದರು.
Comments
Post a Comment