ಸಚಿವ ಸಂಪುಟದಲ್ಲಿ ಒಳಮೀಸಲಾತಿ ಅಂಗಿಕಾರ ಸ್ವಾಗತಾರ್ಹ, ಶೀಘ್ರ ಜಾರಿಗೆ ಒತ್ತಾಯ- ರವೀಂದ್ರನಾಥ ಪಟ್ಟಿ. ಜಯ ಧ್ವಜ ನ್ಯೂಸ್, ರಾಯಚೂರು,ಆ.21- ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಪರಿಶಿಷ್ಟ ಜಾತಿ ಒಳಮೀಸಲಾತಿ ಕುರಿತು ಆಯೋಗ ನೀಡಿರುವ ವರದಿ ಅಂಗೀಕಾರ ಮಾಡಿದ್ದು ಸ್ವಾಗತಾರ್ಹವಾಗಿದ್ದು ಶೀಘ್ರ ಮೀಸಲಾತಿ ಜಾರಿಗೊಳಿಸಬೇಕೆಂದು ರಾಜ್ಯ ಬಲಗೈ ಸಂಬಂಧಿತ ಛಲವಾದಿ, ಬ್ಯಾಗಾರ ಹಾಗೂ ಮಾಲಾ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿ ಸಂಚಾಲಕ ರವೀಂದ್ರ ನಾಥ್ ಪಟ್ಟಿ ಹೇಳಿದರು. ಅವರಿಂದು ಸುದ್ದಿ ಗೋಷ್ಠಿಯಲ್ಲಿ ಮಾತನಾಡ ಒಳಮಿಸಲಾತಿ ಜಾರಿಗೆ ಸರ್ಕಾರ ತೀರ್ಮಾನ ಮಾಡಿದ್ದು ಸ್ವಾಗತಾರ್ಹವಾಗಿದೆ ಆದರೆ ಅಲೆಮಾರಿ ಜನಾಂಗಕ್ಕೆ ಅನ್ಯಾಯವೆಸಗಲಾಗಿದ್ದು ಅವರನ್ನು ಮತ್ತೊಂದು ಪ್ರವರ್ಗ ಮಾಡಿ ಶೇ.1ರಷ್ಟು ಮೀಸಲಾತಿ ಕಲ್ಪಿಸಬೇಕೆಂದರು. ಅಲ್ಲದೆ ಶೀಘ್ರದಲ್ಲೇ ಈ ನಿರ್ಣಯವನ್ನು ಉಭಯ ಸದನದಲ್ಲಿ ಮಂಡಿಸ ಬೇಕೆಂದರು. ಯಾವುದೆ ಕಾನೂನು ತೊಡಕು ಬಾಧಿಸದಂತೆ ತಾರ್ಕಿಕ ಅಂತ್ಯ ಹಾಡಬೇಕೆಂದು ಅವರು ಬಲಗೈ ಸಂಬಂಧಿತ ಜಾತಿಗಳಾದ ಬೇಗಾರ್, ಬ್ಯಾಗಾರ್ ಜಾತಿಯನ್ನು ಸಿ ಪ್ರ ವರ್ಗದಲ್ಲಿದ್ದು ಅದನ್ನು ಬಿ ಪ್ರ ವರ್ಗದಲ್ಲಿ ಸೇರಿಸಬೇಕು ಸೇರಿದಂತೆ ವಿವಿಧ ಹಕ್ಕೊತ್ತಾಯ ಮಂಡಿಸಿದರು. ಈ ಸಂದರ್ಭದಲ್ಲಿ ನೆಲಹಾಳ ನರಸಿಂಹಲು, ಕೆ.ಪರಶುರಾಮುಲು, ರಾಜು ಪಟ್ಟಿ, ಭಾಸ್ಕರ್ ರಾಜ್, ಯಲ್ಲಪ್ಪ ಬೊಮ್ಮನಾಳ, ಮಹೇಶ್, ಕೆ.ಸಂತೋಷ ಇನ್ನಿತರರು ಇದ್ದರು.
Comments
Post a Comment