ರಸ್ತೆ, ಕೆರೆ ಸೇರಿದಂತೆ ಸರ್ಕಾರಿ ಸ್ವತ್ತಿನ ಒತ್ತುವರಿ ತಡೆಗೆ ಕ್ರಮವಹಿಸಲು ಮಹಾನಗರಪಾಲಿಕೆಯ ಅಧಿಕಾರಿಗಳಿಗೆ ಉಪ ಲೋಕಾಯುಕ್ತರಾದ ಬಿ.ವೀರಪ್ಪ ಖಡಕ್ ಸೂಚನೆ 


ಜಯ ಧ್ವಜ ನ್ಯೂಸ್ , ರಾಯಚೂರು, ಆ.28- ರಾಯಚೂರು ಪ್ರವಾಸದಲ್ಲಿದ್ದ ಉಪ ಲೋಕಾಯುಕ್ತರಾದ ನ್ಯಾ. ಬಿ ವೀರಪ್ಪ ಅವರು ಇಂದು ನಗರದಲ್ಲಿನ ಹಳೆಯ ಮಹಾನಗರ ಪಾಲಿಕೆಯ ಕಚೇರಿಗೆ ಭೇಟಿ ನೀಡಿದರು.

 ಬಹುಮುಖ್ಯವಾಗಿ ಸರ್ಕಾರಿ ಸ್ವತ್ತಿನ ಅತಿಕ್ರಮಣವು ಕೂಡಲೇ ತೆರವಾಗಬೇಕು ಎಂದು ಸೂಚಿಸಿದೆ ಅವರು ದಾಖಲಾದ, ದಾಖಲಾಗುವ ದೂರಿನ ಪ್ರಕರಣಗಳ ವಿಲೇವಾರಿಗೆ ಪಾಲಿಕೆಯ ಅಧಿಕಾರಿಗಳು ಮೊದಲಾದ್ಯತೆ ನೀಡಬೇಕು ಎಂದು  ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಸೂಚನೆ ನೀಡಿದರು.


ನಗರದಲ್ಲಿನ ಸಾರ್ವಜನಿಕ ಆಸ್ತಿಗಳಾದ ಕೆರೆ, ಬಾವಿ ಜಾಗ, ರಸ್ತೆ ಪ್ರದೇಶವನ್ನು ಯಾರು ಸಹ ಒತ್ತುವರಿ ಮಾಡದಂತೆ ನೋಡಿಕೊಳ್ಳಬೇಕು. ಇದು ಪಾಲಿಕೆಯ ಬಹುಮುಖ್ಯ ಕಾರ್ಯ, ಕರ ವಸೂಲಿಯನ್ನು ಸಹ ನಿಯಮಿತವಾಗಿ ನಡೆಸಿ ಅದರಿಂದ ಬರುವ ಆದಾಯದಿಂದ ನಗರದ ನಿವಾಸಿಗಳಿಗೆ ಕುಡಿಯುವ ನೀರು, ಬೀದಿ ದೀಪ ಸೇರಿದಂತೆ ಸರಿಯಾದ ಮೂಲಭೂತ ಸೌಕರ್ಯ ಕಲ್ಪಿಸಲು ಒತ್ತು ನೀಡಬೇಕು ಎಂದು ಪಾಲಿಕೆಯ ಅಧಿಕಾರಿ ಮತ್ತು ಸಿಬ್ಬಂದಿಗೆ ಸೂಚನೆ‌ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಿತೀಶ್.ಕೆ, ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮಹೋಪಾತ್ರ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Comments

Popular posts from this blog