ವಾರ್ಡ್ ನಂ.17ರಲ್ಲಿ ಕುಂಟುತ್ತಾ ಸಾಗಿದ ಚರಂಡಿ ರಸ್ತೆ ಕಾಮಗಾರಿ ಹಿಡಿಶಾಪ ಹಾಕುತ್ತಿರುವ ಜನತೆ ಜಯ ಧ್ವಜ ನ್ಯೂಸ್ , ರಾಯಚೂರು ,ಆ.25- ನಗರದ ವಾರ್ಡ್ ನಂ.17ರ ಓಣಿಯಲ್ಲಿ ಚರಂಡಿ ಹಾಗು ಸಿಸಿ ರಸ್ತೆ ಕಾಮಗಾರಿ ಕುಂಟುತ್ತಾ ಮಂದಗತಿಯಲ್ಲಿ ಸಾಗಿದೆ ಒಂದು ತಿಂಗಳಿನಿಂದ ಕಾಮಗಾರಿ ಸಾಗಿದ್ದು ಬೇಕಾ ಬಿಟ್ಟಿಯಾಗಿ ನಡೆದಿದೆ ರಸ್ತೆ ನಿರ್ಮಿಸುವ ಪೂರ್ವದಲ್ಲಿ ಒಳಚರಂಡಿ ಪೈಪು ಅಳವಡಿಸದೆ ರಸ್ತೆ ನಿರ್ಮಿಸಲು ಜೆಲ್ಲಿ ಕಲ್ಲು ಹಾಕಿ ಇದೀಗ ಮತ್ತೆ ಅದನ್ನು ಅಗೆದು ಪೈಪು ಅಳವಡಿಕೆ ಮಾಡುತ್ತಿದ್ದಾರೆ.
ಮನೆಗಳ ಮೋರಿಯನ್ನು ಬಂದ್ ಮಾಡಿ ಚರಂಡಿ ನಿರ್ಮಾಣ ಮಾಡಿದ್ದು ನಿವಾಸಿಗಳು ಹಿಡಿಶಾಪ ಹಾಕುತ್ತಿದ್ದಾರೆ ಅರೆಬರೆ ಕಾಮಗಾರಿಯಿಂದ ಜನರಿಗೆ ಓಡಾಡಲು ಕಿರಿಕಿರಿಯಾಗಿದೆ ಅಲ್ಲದೆ ಕಾಮಗಾರಿ ನಿರ್ವಹಣೆ ಸೂಕ್ತ ನಿಗಾಯಿಲ್ಲದ ಕಾರಣ ಕಳಪೆಯಿಂದ ಕೂಡಿದೆ ಎಂಬ ದೂರುಗಳು ಸಹ ಕೇಳಿಬಂದಿದೆ ಮಹಾನಗರಪಾಲಿಕೆ ಆಯುಕ್ತರು ಈ ಬಗ್ಗೆ ಕಾಮಗಾರಿ ಗುತ್ತಿಗೆ ಪಡೆದವರಿಂದ ನಿಗಾವಹಿಸಲು ಸೂಚಿಸಬೇಕೆನ್ನುವುದು ನಿವಾಸಿಗಳ ಆಗ್ರಹವಾಗಿದೆ.
Comments
Post a Comment