ಶೃಂಗೇರಿ ಶ್ರೀ ಶಂಕರ ಮಠದಲ್ಲಿ ಶ್ರಾವಣ ಮಾಸ ಅಮಾವಾಸ್ಯೆಯಂದು ಬುತ್ತಿ ಪೂಜೆ ಹಾಗೂ ಮೃತ್ಯುಂಜಯ ಹೋಮ
ಜಯ ಧ್ವಜ ನ್ಯೂಸ್ , ರಾಯಚೂರು , ಆ. 24- ಶ್ರಾವಣ ಮಾಸದ ನಿಮಿತ್ಯ ಶಂಕರ ಮಠದಲ್ಲಿ ಮೃತ್ಯುಂಜಯ ಹೋಮ ಹಾಗೂ ಬುತ್ತಿ ಪೂಜೆ ಮತ್ತು ಅಭಿಷೇಕ ನಡೆಸಲಾಯಿತು. ಸಾಯಂಕಾಲ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿತ್ತು .ಈ ಕಾರ್ಯಕ್ರಮದಲ್ಲಿ ಅರ್ಚಕ ವೃತ್ತಿಯಲ್ಲಿ ಬಹಳ ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಪಂಡಿತರಾದ ವೇದಮೂರ್ತಿ ಶೀಲಾ ಕುಮಾರ್ ಶಾಸ್ತ್ರಿ, ಇವರಿಗೆ ವಿಪ್ರಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ನಮ್ಮ ಮಠದಲ್ಲಿ ಅನೇಕ ದಿನಗಳಿಂದ ಸೇವೆ ಸಲ್ಲಿಸುತ್ತಿರುವ ಶ್ರೀಯುತ ರಾಮಚಂದ್ರ ಶೆಲವಡಿ ಹಾಗೂ ಶ್ರೀನಾಥ್ ಆನಂತ್ ಭಟ ಇವರನ್ನು ಸನ್ಮಾನಿಸಲಾಯಿತು. ಇದರ ಜೊತೆಗೆ ಆರು ಜನ ವಿದ್ಯಾರ್ಥಿಗಳನ್ನು ಹೆಚ್ಚಿನ ಅಂಕಗಳಿಸಿದ್ದಕ್ಕಾಗಿ ಹಾಗೂ ವಿಶೇಷ ಪ್ರತಿಭೆ ಮಾಡಿದವರಿಗೆ ಪುರಸ್ಕರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಎಲ್ ವಿ ಡಿ ಕಾಲೇಜಿನಲ್ಲಿ ಗಣಿತ ಶಾಸ್ತ್ರದ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿದ ಶ್ರೀಯುತ ಸುಬ್ರಮಣ್ಯಂ ಇವರು ಆಗಮಿಸಿದ್ದರು. ಅವರು ತಮ್ಮ ಅತಿಥಿ ಭಾಷಣದಲ್ಲಿ ಇಂದಿನ ಕಾಲದಲ್ಲಿ ನಮ್ಮ ಸಮಾಜವು, ಪೂರ್ಣ ಹಿಂದೆ ಇರುವುದರಿಂದ ನಮ್ಮ ಸಮಾಜ ವಿದ್ಯಾರ್ಥಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ತೇರ್ಗಡೆಯಾಗುವುದು ಬಹಳ ಅವಶ್ಯಕವಿದೆ ಎಂದು ನುಡಿದರು. ಪ್ರಾರ್ಥನಾ ಗೀತೆಯನ್ನು ಗಾಯತ್ರಿ ಶೆಲವಡಿ ನಡೆಸಿಕೊಟ್ಟರು. ಅತಿಥಿಗಳ ಪರಿಚಯವನ್ನು ಹರೀಶ್ ಗವಾರ್ ನಡೆಸಿಕೊಟ್ಟರು. ಸಭೆಯ ಅಧ್ಯಕ್ಷತೆಯನ್ನು ಆದಿ ಶಂಕರ್ ಸೇವಾ ಸಂಘದ ಅಧ್ಯಕ್ಷರಾದ ವಿ ಹನುಮಂತ ರಾವ್ ರವರು ವಹಿಸಿದ್ದರು. ಅಧ್ಯಕ್ಷರು, ಸ್ವಾಗತ ಭಾಷಣವನ್ನು ನೆರವೇರಿಸಿದರು. ಸಂಘದ ಖಜಾಂಚಿಯವರಾದ ಶ್ರೀಯುತ ಈಶ್ವರ ಹೆಗಡೆಯವರು ಪ್ರಾಸ್ತಾವಿಕ ನುಡಿಗಳನ್ನು ಮಾಡಿದರು ವಂದನಾರ್ಪಣೆಯನ್ನು ಶ್ರೀಯುತ ಉದಯ್ ಶಂಕರ್ ದೇಸಾಯಿ ನಡೆಸಿ ಕೊಟ್ಟರು. ವೇದಿಕೆಯ ಮೇಲೆ ಅತಿಥಿಗಳಾದ ಸುಬ್ರಹ್ಮಣ್ಯಂ ಅಧ್ಯಕ್ಷರಾದ ವಿ ಹನುಮಂತ ರಾವ್ ಕಾರ್ಯದರ್ಶಿಯರಾದ ಸಿ. ವಸಂತ್ ರಾವ್ ಖಜಾಂಜಿಯರಾದ ಶ್ರೀ ಈಶ್ವರ ಹೆಗಡೆ ಹಾಗೂ ಶಂಕರ್ ಮಠದ ವ್ಯವಸ್ಥಾಪಕರಾದ ಕೃಷ್ಣಮೂರ್ತಿ ಹೆಬಸೂರು ವೇದಿಕೆಯನ್ನು ಅಲಂಕರಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಸುಪ್ರಿಯ ಶಿವಪ್ರಸಾದ್ ನೆರವೇರಿಸಿಕೊಟ್ಟರು. ಈ ಕಾರ್ಯಕ್ರಮಕ್ಕೆ ಮಠದ ಹಿರಿಯರು , ಮುಖಂಡರು ಹಾಗೂ ಭಕ್ತಾದಿಗಳು ಶಾರದಾಂಬ ಮಹಿಳಾ ಭಜನಾ ಮಂಡಳಿ ಮಹಿಳೆಯರು ಇನ್ನು ಅನೇಕ ಭಕ್ತರು ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು . ಕಾರ್ಯಕ್ರಮದ ನಂತರ ಪಲ್ಲಕ್ಕಿ ಸೇವೆ, ಮಹಾಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು.
Comments
Post a Comment