ವಾರ್ಡ ನಂ.34 : 3 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗೆ ಎ.ವಸಂತ ಕುಮಾರ್ ಹಾಗೂ ಶಿವರಾಜ್ ಪಾಟೀಲ್ ಚಾಲನೆ ಜಯ ಧ್ವಜ ನ್ಯೂಸ್ ರಾಯಚೂರು , ಆ.24- ನಗರದ ವಾರ್ಡ ನಂ.34ರ ಬಂದೇನವಾಜ ಕಾಲೋನಿ, ದೇವರಾಜ ಅರಸ್ ಕಾಲೋನಿ, ಹಾಜಿ ಕಾಲೋನಿ ಹಾಗೂ ಶಾಂತಿ ಕಾಲೋನಿಯ ವಿವಿದ ಬಡಾವಣೆಗಳಲ್ಲಿ ಸುಮಾರು 3 ಕೋಟಿ .ರೂ ವೆಚ್ಚದ ಸಿಸಿ ರಸ್ತೆ ನಿರ್ಮಾಣಕ್ಕೆ ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿ ಯೋಜನೆಯ ಅನುದಾನದಡಿಯಲ್ಲಿ ಕಾಮಗಾರಿ ಅಡಿಗಲ್ಲು ಕಾರ್ಯಕ್ರಮವನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಪರಿಷತ್ ಸದಸ್ಯರಾದ ಎ.ವಸಂತಕುಮಾರ ಮತ್ತು ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಶಿವರಾಜ ಪಾಟೀಲ್ ಜಂಟಿಯಾಗಿ ನೆರವೇರಿಸಿದರು.
ಸದರಿ ಬಡಾವಣೆಗಳಲ್ಲಿ ದಶಕಗಳಿಂದ ಮೂಲಭೂತ ಸೌಕರ್ಯಗಳಿಲ್ಲದೇ ಜನತೆ ಸಂಕಷ್ಟ ಅನುಭವಿಸುತ್ತಿರುವದನ್ನು ಗಮನಿಸಿ ಸರಕಾರದಿಂದ ಅಲ್ಪಸಂಖ್ಯಾತ ಕಾಲೋನಿ ಅಭಿವೃದ್ಧಿ ಯೋಜನೆಯಡಿಯಲ್ಲಿ ಸುಮಾರು 3 ಕೋಟಿ ರೂ ಅನುದಾನ ಮಂಜೂರು ಮಾಡಿ, ಕಾಮಗಾರಿ ಕೈಗೊಳ್ಳಲು ಅಡಿಗಲ್ಲು ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಎ.ವಸಂತಕುಮಾರ ಅವರು ರಾಯಚೂರು ನಗರದಲ್ಲಿ ಹಲವಾರು ಬಡಾವಣೆಗಳು ಮೂಲಭೂತ ಸೌಕರ್ಯಗಳಿಂದ ವಂಚಿತಗೊಂಡಿವೆ, ಆದ್ದರಿಂದ ಹಂತ ಹಂತವಾಗಿ ಮೂಲಭೂತ ಸೌಕರ್ಯ ಒದಗಿಸುವ ಕಾರ್ಯ ಮಾಡಲಾಗುವದು ಎಂದು ಹೇಳಿದರು.
ಡಾ.ಶಿವರಾಜ ಪಾಟೀಲ್ ಮಾತನಾಡಿ ಈ ಭಾಗದ ಕಾಲೋನಿಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಲು ವಸಂತಕುಮಾರ ಅವರ ಜೊತೆಗೂಡು ಅಭಿವೃದ್ಧಿಗೆ ಸಹಕರಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಳಿಯ ನಿವಾಸಿಗಳು ಮತಗಟ್ಟೆ ಕೇಂದ್ರ ಸ್ಥಾಪನೆ, ಕುಡಿಯುವ ನೀರಿನ ಹಾಗೂ ಒಳಚರಂಡಿ ಸಮಸ್ಯೆ ಕುರಿತು ಮನವಿ ಮಾಡಿದರು ಇದಕ್ಕೆ ಸ್ಪಂದಿಸಿ ಅವುಗಳನ್ನು ಸಹ ಬಗೆಹರಿಸುವದಾಗಿ ಭರವಸೆ ನೀಡಲಾಯಿತು.
ಈ ಸಂದರ್ಭದಲ್ಲಿ ಕೆಪಿಸಿಸಿ ವಕ್ತಾರ ಡಾ.ರಝಾಕ ಉಸ್ತಾದ, ನಗರಸಭೆ ಸದಸ್ಯರಾದ ತಿಮ್ಮಪ್ಪ ನಾಯಕ, ಬಸವರಾಜ ದರೂರು, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಬ್ದುಲ್ ಕರೀಮ, ಮೊಹಮ್ಮದ ಉಸ್ಮಾನ, ಮುರಳಿ ಯಾದವ, ಶ್ರಿನಿವಾಸ ಶಿಂದೆ, ಅಂಜಿನಯ್ಯ ಹಾಗೂ ಬಡಾವಣೆ ನಿವಾಸಿಗಳು ಉಪಸ್ಥಿತರಿದ್ದರು.
Comments
Post a Comment