ರಾಯಚೂರು ಜಿಲ್ಲೆಗೆ ಹೊಸದಾಗಿ 16 ಆರೋಗ್ಯ ಸೇವೆಗೆ ಮಂಜೂರಾತಿ-  ಸಚಿವ ದಿನೇಶ್ ಗುಂಡೂರಾವ್


ಜಯ ಧ್ವಜ  ನ್ಯೂಸ್  ,ರಾಯಚೂರು ಸೆ.27-

ರಾಜ್ಯ ಸರ್ಕಾರವು ಆರೋಗ್ಯ ಕ್ಷೇತ್ರದ ಬೆಳವಣಿಗೆಯ ಬಗ್ಗೆ ವಿಶೇಷ ಗಮನ ಹರಿಸಿದ್ದು, ಈ ನಿಟ್ಟಿನಲ್ಲಿ ರಾಯಚೂರು  ಜಿಲ್ಲೆಯಲ್ಲಿ ಹೊಸದಾಗಿ 16 ಆರೋಗ್ಯ ಕೇಂದ್ರಗಳಿಗೆ ಮಂಜೂರಾತಿ ನೀಡಿ, ಅನುದಾನ ಒದಗಿಸಿ ಜನತೆಗೆ ಆರೋಗ್ಯ ಸೇವೆ ನೀಡುತ್ತಿದ್ದೇವೆ ಎಂದು ರಾಜ್ಯ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ಹೇಳಿದರು.

ಸಿಂಧನೂರನ ಸತ್ಯ ಗಾರ್ಡನದಲ್ಲಿ ಸೆ.27ರಂದು ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ರಾಯಚೂರು ಜಿಲ್ಲೆಗೆ ಈಗಾಗಲೇ ಹೊಸದಾಗಿ 8 ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರಿ ಮಾಡಿದ್ದೇವೆ. 5 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳೆಂದು ಮೇಲ್ದರ್ಜೇಗೇರಿಸುತ್ತಿದ್ದೇವೆ.

ರಾಯಚೂರ ಸಿಟಿಗು ಸಹ ಆರೋಗ್ಯ ಕೇಂದ್ರ ಮಂಜೂರಿ ಮಾಡಿದ್ದೇವೆ. ಲಿಂಗಸೂಗೂರನಲ್ಲಿ 21 ಕೋಟಿ ರೂ ವೆಚ್ಚದಲ್ಲಿ ಕ್ರಿಟಿಕಲ್ ಕೇರ್‌ ಯುನಿಟ್ ಸ್ಥಾಪನೆಗೆ ಮಂಜೂರಾತಿ ದೊರೆತಿದೆ. ಸಿಂಧನೂರ ತಾಲೂಕಿನಲ್ಲಿ ತಾಯಿ ಮಕ್ಕಳ ಆಸ್ಪತ್ರೆ ಆರಂಭ ಮಾಡಿದ್ದೇವೆ. ಇಲ್ಲಿನ ತಾಲೂಕು ಆಸ್ಪತ್ರೆಯನ್ನು ಜಿಲ್ಲಾಸ್ಪತ್ರೆಯಾಗಿ ಮೇಲ್ದರ್ಜೇಗೆ ಸೇರಿ ಒಟ್ಟಾರೆ ಜಿಲ್ಲೆಗೆ 16 ಆರೋಗ್ಯ ಸೇವೆ ನೀಡುತ್ತಿದ್ದೇವೆ ಎಂದು ತಿಳಿಸಿದರು.

*ಸಿಂಧನೂರಗೆ ಅಗತ್ಯ ಸೌಕರ್ಯ:* ಸಿಂಧನೂರು ತಾಲೂಕಿಗೆ ಮಂಜೂರಾದ ತಾಲೂಕಾಸ್ಪತ್ರೆಯು ಇದೀಗ ಜಿಲ್ಲಾಸ್ಪತ್ರೆಯಾಗಿ ಮೇಲ್ದರ್ಜೆಗೇರಲಿದೆ ಎಂದು ಹೇಳಿದ ಸಚಿವರು, ವೇಗವಾಗಿ ಬದಲಾಗುತ್ತಿರುವ ಸಿಂಧನೂರಗೆ ಅಗತ್ಯವಿರುವ ಎಲ್ಲಾ ವೈದ್ಯಕೀಯ ಸೌಕರ್ಯಗಳನ್ನು ನೀಡುವುದಾಗಿ ತಿಳಿಸಿದರು.

ಪಂಚ ಗ್ಯಾರಂಟಿಯಿಂದ ಅನುಕೂಲ: ಚುನಾವಣಾ ಪೂರ್ವದಲ್ಲಿ ಘೋಷಣೆ ಮಾಡಿದಂತೆ ನಾವು ಪಂಚ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ಸಾಮಾನ್ಯರ ಬಗ್ಗೆ ಹೊಂದಿದ ಕಾಳಜಿಯಿಂದಾಗಿ ಈ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಾಧ್ಯವಾಗಿದೆ. ಬೇರೆ ರಾಷ್ಟ್ರದ ರಾಜಕೀಯ ತಜ್ಞರು, ಚಿಂತಕರು ಇಲ್ಲಿಗೆ ಬಂದು ಅಧ್ಯಯನ ಮಾಡುವ ಮಟ್ಟಿಗೆ ಹೆಸರಾದ ಈ ಪಂಚ ಗ್ಯಾರಂಟಿಗಳನ್ನು ಪೂರ್ಣ ಐದು ವರುಷ ಜನತೆಗೆ ನೀಡುತ್ತೇವೆ. ಇದರ ಜೊತೆಗೆ ಎಲ್ಲಾ ಅಗತ್ಯ ಕಾಮಗಾರಿಗಳಿಗೂ ಅನುದಾನ ನೀಡಿ ಚಾಲನೆ ಕೊಡುತ್ತಿದ್ದೇವೆ ಎಂದರು. 

ದಸರಾ ಕಾರ್ಯಕ್ರಮದಲ್ಲಿ ನಾನಾ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಮೂಲಕ ಶಾಸಕರಾದ ಹಂಪನಗೌಡ ಬಾದರ್ಲಿ ಅವರು ಸಿಂಧನೂರ ಜನತೆಗೆ ವಿಶೇಷ ದಸರಾ ಕೊಡುಗೆ ನೀಡಿದ್ದಾರೆ ಎಂದರು.

ಸಮಾರಂಭದಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ರಾಯಚೂರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ, ಶಾಸಕರಾದ ಹಂಪನಗೌಡ ಬಾದರ್ಲಿ, ಆರ್ ಬಸನಗೌಡ ತುರುವಿಹಾಳ, ವಿಧಾನ ಪರಿಷತ್ ಶಾಸಕರಾದ ಎ  ವಸಂತಕುಮಾರ, ಶರಣಗೌಡ ಪಾಟೀಲ ಬಯ್ಯಾಪುರ, ಬಸನಗೌಡ ಬಾದರ್ಲಿ, ಮಂಜುಳಾ ಪ್ರಭುರಾಜ್, ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಪಾಮಯ್ಯ ಮುರಾರಿ, ಸಿಂಧನೂರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ವೆಂಕನಗೌಡ ಬಾದರ್ಲಿ, ಬಸವರಾಜ ಪಾಟೀಲ ಇಟಗಿ, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ., ಜಿಲ್ಲಾ ಪಂಚಾಯತ್ ಸಿಇಓ ಈಶ್ವರ್ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಎಂ, ತಹಸೀಲ್ದಾರ ಅರುಣಕುಮಾರ ದೇಸಾಯಿ, ತಾಪಂ ಇಓ ಚಂದ್ರಶೇಖರ ಇದ್ದರು.

Comments

Popular posts from this blog