ಕಲ್ಯಾಣ ಕರ್ನಾಟಕ ವಿಮೋಚನಾ ಚಳುವಳಿಯಲ್ಲಿ ಭೀಮಸೇನ ರಾವ್ ಕುಲಕರ್ಣಿ , ರಾಘವೇಂದ್ರರಾವ್ ಪಟವಾರಿ ಪಾತ್ರ ಅನನ್ಯ - ಹನುಮಂತರಾವ್ ಕಲ್ಲೂರಕರ್
ಜಯ ಧ್ವಜ ನ್ಯೂಸ್ , ರಾಯಚೂರು, ಸೆ.17-ಕಲ್ಯಾಣ ಕರ್ನಾಟಕ ವಿಮೋಚನಾ ಚಳುವಳಿಯಲ್ಲಿ ಭೀಮಸೇನ ರಾವ್ ಕುಲಕರ್ಣಿ ಗುಂಜಳ್ಳಿ ಮತ್ತು ರಾಘವೇಂದ್ರರಾವ್ ಪಟವಾರಿ ಲಿಂಗನಖಾನ್ ದೊಡ್ಡಿ ಇವರು ಸಕ್ರಿಯವಾಗಿ ಗುರುತಿಸಿಕೊಂಡು ತಮ್ಮ ತ್ಯಾಗ ಬಲಿದಾನದ ಮೂಲಕ ಸ್ವಾತಂತ್ರ ದೊರಕಿಸಿಕೊಡುವಲ್ಲಿ ಅವರ ಪಾತ್ರ ಅನನ್ಯವಾಗಿತ್ತೆಂದು ಬ್ರಾಹ್ಮಣ ಸಮಾಜದ ಹಿರಿಯರಾದ ಹನುಮಂತರಾವ್ ಕಲ್ಲೂರಕರ್ ಹೇಳಿದರು. ಅವರಿಂದು ಸಂಜೆ ನಗರದ ಕರ್ನಾಟಕ ಸಂಘದಲ್ಲಿ ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಹೈ.ಕ ಸ್ವಾತಂತ್ರ್ಯ ಹೋರಾಟಗಾರರ ಉತ್ತರಾಧಿಕಾರಿಗಳ ವೇದಿಕೆಯಿಂದ ಅವರ ಕುಟುಂಬಸ್ಥರು ಆಯೋಜಿಸಿದ ಕಾರ್ಯಕ್ರಮವನ್ನು ಸರದಾರ ವಲ್ಲಬಾಯಿ ಪಾಟೀಲ್, ಮಹಾತ್ಮಾ ಗಾಂಧೀಜಿ,ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಭೀಮಸೇನ ರಾವ್ ಕುಲಕರ್ಣಿ ಗುಂಜಳ್ಳಿ, ರಾಘವೇಂದ್ರರಾವ್ ಪಟವಾರಿ ಲಿಂಗನ್ ಖಾನ್ ದೊಡ್ಡಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ರಾಯಚೂರಿನ ಈ ಇಬ್ಬರು ಮಹನೀಯರು ಕಲ್ಯಾಣ ಕರ್ನಾಟಕ ಏಕೀಕರಣದಲ್ಲಿ ಸರ್ದಾರ್ ವಲ್ಲಬಾಯ್ ಪಟೇಲ್ ಅವರ ಹೋರಾಟಕ್ಕೆ ಕಿಚ್ಚು ಹಚ್ಚಿದ್ದರು ಎಂದರು. ದೇಶಕ್ಕೆ ಸ್ವಾತಂತ್ರ್ಯ ಬಂದು ವರ್ಷದ ನಂತರ ಅನೇಕ
ಹೋರಾಟಗಾರರ ತ್ಯಾಗ ಬಲಿದಾನದಿಂದ ಈ ಭಾಗಕ್ಕೆ ಸ್ವಾತಂತ್ರ್ಯ ದೊರೆತಿದೆ ಎಂದ ಅವರು ಇಂದು ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ನಿಜವಾದ ಸ್ವಾತಂತ್ರ್ಯ ದೊರಕಿದಂತಾಗಿದೆ ಎಂದರು.
ಉಕ್ಕಿನ ಮನುಷ್ಯ ಎಂದೆ
ಪ್ರಸಿದ್ಧರಾದ ವಲ್ಲಬಾಯ್ ಪಟೇಲ್ ಅವರ ಪಾತ್ರ ಅತ್ಯಂತ ಪ್ರಮುಖವಾಗಿದೆ ಇಂತಹ ಮಹಾನ್ ನಾಯಕ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು.
ಎಂದರು.ಮುಖ್ಯ ಭಾಷಣಕಾರರಾಗಿ ಆಗಮಿಸಿದ ವೆಂಕಟರಾವ್ ಕುಲಕರ್ಣಿ ಅವರು ಮಾತನಾಡಿ,
ಕಲ್ಯಾಣ ಕರ್ನಾಟಕ ಭಾಗದ ವಿಮೋಚನಾ ಚಳುವಳಿಯಲ್ಲಿ ಈ ಭಾಗದ ಅನೇಕರ ಮಹನೀಯರ ತ್ಯಾಗ ಬಲಿದಾನದಿಂದ ಸ್ವಾತಂತ್ರ ದೊರಕಿದೆ. ಇಂತಹ ಮಹನೀಯರ ಸ್ಮರಣೆ ಮಾಡುವ ಮೂಲಕ ಹೋರಾಟದ ಕಿಚ್ಚು ಮತ್ತು ಆದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಇತಿಹಾಸ ಅರಿತವರು ಮಾತ್ರ ಇತಿಹಾಸ ಸೃಷ್ಟಿಸುತ್ತಾರೆ ಸ್ವಾತಂತ್ರ ಹೋರಾಟದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡು ಈ ಭಾಗದ ಕಲ್ಯಾಣ ಕರ್ನಾಟಕ ಸ್ವಾತಂತ್ರ ತಂದು ಕೊಡುವಲ್ಲಿ ಅನೇಕ ಮಹನೀಯರು ತಮ್ಮ ಸರ್ವಸ್ವವನ್ನು ಅರ್ಪಿಸಿದ್ದಾರೆ ಎಂದರು. ಭೀಮಸೇನ ರಾವ್ ಕುಲಕರ್ಣಿ ಗುಂಜಳ್ಳಿ, ರಾಘವೇಂದ್ರರಾವ್ ಪಟವಾರಿ ಲಿಂಗಖಾನ್ ದೊಡ್ಡಿ ಅವರು ರಾಯಚೂರು ಭಾಗದಲ್ಲಿ ಹೋರಾಟದ ಕಿಚ್ಚು ಹಚ್ಚಿದ ಧಿಮಾಂತ ನಾಯಕರು ಎಂದರು. ಇವರತ್ಯಾಗ ಬಲಿದಾನ ಮತ್ತು ಸ್ವಾತಂತ್ರ ಹೋರಾಟದ ಕಿಚ್ಚು ನಮಗೆ ಆದರ್ಶ ಪ್ರಾಯವಾಗಬೇಕು ಎಂದರು.ರಾಯಚೂರಿನ ಈ ಸ್ಥಳ ಹೋರಾಟದ ಕಿಚ್ಚು ಹುಟ್ಟಿಸಿದ ಸ್ಥಳಗಳಲ್ಲಿ ಒಂದಾಗಿರುವ ಕರ್ನಾಟಕ ಸಂಘ ಹಾಗೂ ರಾಮಶಾಲೆ ಈ ಎರೆಡು ಸ್ಥಳವನ್ನು ಸ್ಮಾರಕಗಳನ್ನಾಗಿ ಉಳಿಸಿಕೊಂಡು ಮುಂದಿನ ಪೀಳಿಗೆಗೆ ಪ್ರೇರಣೆಯಾಗಬೇಕು ಎಂದರು. ಸತ್ಯ ಯಾವಾಗಲೂ ಕಹಿ ಇರುತ್ತದೆ ಆದರೆ ನಾವು ಮಾಡಿದ ಕಾರ್ಯ ಮಾತ್ರ ಮರಣ ನಂತರ ಜನ ಮಾನಸದಲ್ಲಿ ಜೀವಂತವಾಗಿರಲು ಸಾಧ್ಯ ಎಂದರು. ಪ್ರತಿಯೊಬ್ಬರಲ್ಲಿ ರಾಷ್ಟ್ರಭಿಮಾನ ಬೆಳೆಸಿಕೊಳ್ಳಬೇಕು ಎಂದರು. ಕಿಶನ್ ರಾವ್ ಲಿಂಗನಖಾನ್ ದೊಡ್ಡಿ, ವಿಜಯರಾವ ಕುಲಕರ್ಣಿ, ಪ್ರಹ್ಲಾದ ರಾವ್ ಕಲ್ಮಲಾ , ಜಯ ಕುಮಾರ್ ದೇಸಾಯಿ ಕಾಡ್ಲೂರು, ವೇಣುಗೋಪಾಲ್ ಇನಾಂದಾರ್, ವಿನೋದ್ ಸಗರ್, ರವೀಂದ್ರ ಕುಲಕರ್ಣಿ, ಪಾಂಡುರಂಗ ಕುರ್ಡಿಕರ್ ಸೇರಿದಂತೆ ಅನೇಕರು ಮಾತನಾಡಿದರು. ಅಧ್ಯಕ್ಷತೆಯನ್ನು ಜಿ .ಬಿ ಕುಲಕರ್ಣಿ ವಹಿಸಿದ್ದರು, ಪ್ರಾಸ್ತಾವಿಕವಾಗಿ ರಮಾಕಾಂತರಾವ್ ಕುಲಕರ್ಣಿ ಗುಂಜಳ್ಳಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು. ವೆಂಕಟಲಕ್ಷ್ಮಿ ಪ್ರಾರ್ಥಿಸಿದರು ,ಮುರಳೀಧರ ಕುಲಕರ್ಣಿ ನಿರೂಪಿಸಿ ನಿರ್ವಹಿಸಿದರು . ಕಾರ್ಯಕ್ರಮದಲ್ಲಿ ನರಸಿಂಹಮೂರ್ತಿ ಕುಲಕರ್ಣಿ ,ರಾಘವೇಂದ್ರ ಚೂಡಾಮಣಿ, ಅನಿಲ ಗಾರಲದಿನ್ನಿ, ಸುಬ್ಬರಾವ್, ಹನುಮೇಶ ಸರಾಫ್, ರಾಘವೇಂದ್ರ ಕುಲಕರ್ಣಿ, ವಿಷ್ಣು ತೀರ್ಥ ಸಿರವಾರ, ಪ್ರಹಲ್ಲಾದ ಕುಲಕರ್ಣಿ ಸೇರಿದಂತೆ ಹಿರಿಯರು, ಮಹಿಳೆಯರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
Comments
Post a Comment