ಕಣ್ವ ಮಠದ ಪರಂಪರೆ ಪೂರ್ವ ಯತಿಗಳಾದ ಅಕ್ಷೋಭ್ಯ ತೀರ್ಥರ ಮಧ್ಯಾರಾಧನೆ ಸಂಪನ್ನ         
                      ಜಯ‌ಧ್ವಜ ನ್ಯೂಸ್ , ರಾಯಚೂರು, ಸೆ.20- ಶ್ರೀಮತ್  ಕಣ್ವ ಮಠ ಪರಂಪರೆಯ ಪೂರ್ವ ಯತಿ ಗಳಾದ   ಶ್ರೀ ಶ್ರೀ ೧೦೦೮ ಶ್ರೀ  ಅಕ್ಷೋಭ್ಯತೀರ್ಥ* ಶ್ರೀ ಪಾದಂಗಳವರ *ಮಧ್ಯಾರಾಧನೆಯ ವೈಭವದಿಂದ  ನೆರವೇರಿತು. ಆರಾಧನೆ ಪ್ರಯುಕ್ತ ಕಣ್ವ ಮಠಾಧಿಶರಾದ  *ಶ್ರೀಶ್ರೀ ೧೦೦೮ ಶ್ರೀ ವಿದ್ಯಾ ಕಣ್ವ ವಿರಾಜ ತೀರ್ಥ* ಶ್ರೀಪಾದಂಗಳವರಿಂದ ಬೃಂದಾವನಕ್ಕೆ ವಿಶೇಷ ಪೂಜೆ, ಭಜನಾಮಂಡಳಿ ಸದಸ್ಯರಿಂದ *ಭಜನೆ, ಭಕ್ತಾದಿಗಳಿಂದ ಪಾದಪೂಜೆ ಮುದ್ರಾಧಾರಣೆ, ಶ್ರೀಗಳಿಂದ ಸಂಸ್ಥಾನ ಪೂಜೆ,ಅಲಂಕಾರ ಬ್ರಾಹ್ಮಣರಿಗೆ ಬೋಜನ,ವೃಂದಾವನ ವಿಶೇಷ ಅಲಂಕಾರ ನಡೆಯಿತು.

ವೇದಿಕೆ ಕಾರ್ಯಕ್ರಮ ದಲ್ಲಿ ಶ್ರೀ ರಾಮರಾವ್ ಕುಲಕರ್ಣಿ ಧಾರ್ಮಿಕ ಆಚರಣೆಗಳು ಕುರಿತು ಆಧ್ಯಾತ್ಮಿಕ ಪ್ರವಚನ,ಶ್ರೀ ಅರುಣ ಕುಮಾರ ದೇಸಾಯಿ ಅವರಿಂದ ಸತ್ಸಂಗ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ದೇಶಪಾಂಡೆ ಹಾಗೂ ನಾಗೂರ ಕುಟುಂಬ ಮತ್ತು ಸಕಲ ಭಕ್ತಾದಿಗಳ ಸೇವಾಸಮಿತಿ ಸಹಕಾರದಿಂದ  ಯಶಸ್ವಿಯಾಗಿ ನೆರವೇರಿದವು.


ಸಕಲ ಭಕ್ತಾದಿಗಳಿಗೆ ತೀರ್ಥಪ್ರಸಾದದ ನಂತರ ಶ್ರೀ ಪಾದಂಗಳವರು  ಆಶಿರ್ವಾದ ಪೂರ್ವಕ ಫಲಮಂತ್ರಾಕ್ಷತೆ ವಿತರಿಸಿದರು ಎಂದು  ಶ್ರೀ ಮತ್ ಕಣ್ವ ಮಠ ಆಡಳಿತಾಭಿವೃದ್ದಿ ಟ್ರಸ್ಟ -ಪ್ರಚಾರ ಹಾಗೂ ಮಾಧ್ಯಮ ಸಮಿತಿ ಮುಖ್ಯಸ್ಥಾರಾದ ಶ್ರೀ ಪ್ರಸನ್ನ ಆಲಂಪಲ್ಲಿ ಮಾಹಿತಿ ನೀಡಿದರು.

Comments

Popular posts from this blog