ಕಾಡ್ಲೂರು: ವೆಂಕಟೇಶ್ವರ ದೇವಸ್ಥಾನದಲ್ಲಿ ಪಂಚರಾತ್ರೋತ್ಸವ: ಸೆ.27 ದುರ್ಗಾ ಹೋಮ, 28 ರಂದು ಶ್ರೀನಿವಾಸ ಕಲ್ಯಾಣೋತ್ಸವ . ಜಯಧ್ವಜ ನ್ಯೂಸ್ ,ರಾಯಚೂರು, ಸೆ.26- ತಾಲೂಕಿನ ಕಾಡ್ಲೂರು ಗ್ರಾಮದ ಪುರಾತನ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಪಂಚರಾತ್ರೋತ್ಸವ ಹಮ್ಮಿಕೊಳ್ಳಲಾಗಿದೆ. ಪಂಚರಾತ್ರೋತ್ಸವ ನಿಮಿತ್ಯ ಸೆ.26 ರಂದು ಬೆಳಗ್ಗೆ ಗೋ ಪೂಜೆ ಧ್ವಜಾರೋಹಣ ಕಳಶ ಸ್ಥಾಪನೆ ದಿಂದ ಪ್ರಾರಂಭವಾಗಿ ,ಸೆ.27
ಲೋಕಕಲ್ಯಾಣಕ್ಕಾಗಿ ದುರ್ಗಾ ಹೋಮ ಹಾಗೂ ಸೆ. 28 ಶ್ರೀನಿವಾಸ ಕಲ್ಯಾಣ ಇರುತ್ತದೆ ಹಾಗೂ ವಿಜಯದಶಮಿ ದಿನದಂದು ಬನ್ನಿ ಮುಡಿಯುವ ಕಾರ್ಯಕ್ರಮ ಇರುತ್ತದೆ ಎಲ್ಲರೂ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಶ್ರೀ ವೆಂಕಟೇಶ್ವರ ದೇವಸ್ಥಾನದ ಅರ್ಚಕರಾದ ವಾಸುದೇವ ಆಚಾರ್ಯ ಕಲ್ಯಾಣಿ ವಿನಂತಿಸಿದ್ದಾರೆ.
Comments
Post a Comment