ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಕಡ್ಡಾಯವಾಗಿ ಹಿಂದೂ ಬ್ರಾಹ್ಮಣ ಎಂದು ನಮೂದಿಸಿ- ದೇಶಪಾಂಡೆ
ಜಯ ಧ್ವಜ ನ್ಯೂಸ್ , ರಾಯಚೂರು, ಸೆ.20- ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗದ ಆಯೋಗವು ಇದೇ ತಿಂಗಳ 22 ನೇ ತಾರೀಖಿನಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಕೈಗೊಳ್ಳಲಿದ್ದು, ಈ ಒಂದು ಸಮೀಕ್ಷೆಯಲ್ಲಿ ಕಡ್ಡಾಯವಾಗಿ ಜಿಲ್ಲೆಯ ಎಲ್ಲಾ ಬ್ರಾಹ್ಮಣ ಬಂಧುಗಳು ಭಾಗವಹಿಸಿ ತಮ್ಮ ವಿವರಗಳನ್ನು ನೀಡಿ, ಸಮೀಕ್ಷೆಯಲ್ಲಿನ 60 ಅಂಶಗಳ ವಿವರವನ್ನು ನೀಡುತ್ತಾ ,ಧರ್ಮ ಕಾಲಂನಲ್ಲಿ ಕಡ್ಡಾಯವಾಗಿ ಹಿಂದೂ ಎಂದು ಬರೆಯಿಸಿ ಹಾಗೂ ಜಾತಿ ಕಾಲಂನಲ್ಲಿ ಬ್ರಾಹ್ಮಣ ಎಂದು ನಮೂದಿಸಬೇಕೆಂದು ರಾಯಚೂರು ಜಿಲ್ಲಾ ಬ್ರಾಹ್ಮಣ ಮಹಾಸಭಾದ ಮಹಾಪೋಷಕರಾದ ನರಸಿಂಗರಾವ್ ದೇಶಪಾಂಡೆ ಮನವಿ ಮಾಡಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಮೀಕ್ಷೆಯಲ್ಲಿ ಸಮಾಜ ಬಾಂಧವರು ಉಪಜಾತಿಯನ್ನು ಹೇಳುವ ಅವಶ್ಯಕತೆ ಇರುವುದಿಲ್ಲವೆಂದು ಈಗಾಗಲೇ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಅಧ್ಯಕ್ಷರು ತಿಳಿಸಿದ್ದು ಇದು ಕೇವಲ ಜಾತಿಗಣಿತಿಯಾಗಿರುವುದಿಲ್ಲ ಸರ್ಕಾರವು ಸಮಸ್ತ ರಾಜ್ಯದ ಜನರ ಶೈಕ್ಷಣಿಕ ಸಾಮಾಜಿಕ ಸಮೀಕ್ಷೆಯನ್ನು ಕೈಗೊಂಡಿದ್ದು ಇದರಲ್ಲಿ ಬ್ರಾಹ್ಮಣ ಸಮಾಜದ ಎಲ್ಲಾ ಬಂಧುಗಳು ಪಾಲ್ಗೊಂಡು ಎಲ್ಲಾ ವಿವರಗಳನ್ನು ನೀಡಿ ನಿಮ್ಮ ಮನೆಯ ಮುಂದೆಗಡೆ ಆಯೋಗದ ವತಿಯಿಂದ ಅಂಟಿಸಿರುವ ಸ್ಟಿಕ್ಕರ್ ಕಾಪಾಡಿಕೊಂಡು ಸಮೀಕ್ಷೆಯ ಅಧಿಕಾರಿಗಳು ಬಂದಾಗ ,
ಸಂಯಮದಿಂದ ಎಲ್ಲ ವಿವರಗಳನ್ನು ನೀಡಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಜಂಟಿ ಕಾರ್ಯದರ್ಶಿಗಳಾದ ಜಯಕುಮಾರ ಗಬ್ಬೂರು , ಜಿಲ್ಲಾ ಬ್ರಾಹ್ಮಣ ಮಹಾಸಭಾ ಸಂಚಾಲಕರಾದ ವೇಣುಗೋಪಾಲ ಇನಾಮದಾರ್, ಹಿರಿಯ ಉಪಾಧ್ಯಕ್ಷರಾದ ಪ್ರಾಣೇಶ ಮುತಾಲಿಕ್ , ಪ್ರವೀಣ್ ಕುಮಾರ್ ಜಾಗೀರ್ದಾರ್, ನಗರ ಸಂಚಾಲಕರಾದ ರಾಮರಾವ್ ಗಣೆಕಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಅನಿಲ್ ಕುಮಾರ್ ಗಾರಲದಿನ್ನಿ, ವಿನೋದ ಸಗರ್ ಉಪಸ್ಥಿತರಿದ್ದರು.
Comments
Post a Comment