ನಾಡಹಬ್ಬ ದಸರಾ ಅಂಗವಾಗಿ ಬಹುಭಾಷಾ ಕವಿಗೋಷ್ಟಿ ಉದ್ಘಾಟನೆ ಜಯ ಧ್ವಜ ನ್ಯೂಸ್ ,ರಾಯಚೂರು, ಸೆ.30- ಮಹಾನಗರಪಾಲಿಕೆ ಮತ್ತು ಐತಿಹಾಸಿಕ ಕೋಟೆ ಅಧ್ಯಯನ ಸಮಿತಿ ರಾಯಚೂರು ವತಿಯಿಂದ ನಾಡಹಬ್ಬ ದಸರಾ-2025 ಅಂಗವಾಗಿ ಬಹುಭಾಷಾ ಕವಿಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಯನ್ನು ಬಸ್ ನಿಲ್ದಾಣ ಎದುರಗಡೆಯಿರುವ ಮಕ್ಕಾದರವಾಜಾ ದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆಯನ್ನು ಮಹಾಪೌರರಾದ ನರಸಮ್ಮ ನರಸಿಂಹಲು ಮಾಡಿಗಿರಿ ನೀಡಿದರು.
ಈ ಸಂದರ್ಭದಲ್ಲಿ ಮಹಾನಗರಪಾಲಿಕೆಯ ಉಪ-ಮಹಾಪೌರರಾದ ಡಾ. ಸಾಜೀದ ಸಮೀರ,ಮಹಾನಗರ ಪಾಲಿಕೆ ಹಿರಿಯ ಸದಸ್ಯರಾದ ಜಯಣ್ಣ,ಉಪ-ಆಯುಕ್ತರಾದ ಸಂತೋಷ ರಾಣಿ, ಹಿರಿಯ ಸಾಹಿತಿಗಳಾದ ಬಾಬು ಬಂಡಾರಿಗಲ್, ಪತ್ರಕರ್ತರಾದ ಕೆ.ಸತ್ಯನಾರಾಯಣ, ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯರಾದ ನರಸಿಂಹಲು ಮಾಡಿಗಿರಿ, ಮಣಿಕಂಠ ,ಕೋಟೆ ಅಧ್ಯಯನ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ವಿವಿಧ ಬಾಷೆಗಳ ಕವಿಗಳು, ಕಾವ್ಯಾಸಕ್ತರು ಉಪಸ್ಥಿತರಿದ್ದರು.
Comments
Post a Comment