ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಹಂಗಾಮಿ ಅಧ್ಯಕ್ಷರನ್ನು ನೇಮಿಸಿ - ಮೇಟಿಗೌಡ
ಜಯ ಧ್ವಜ ನ್ಯೂಸ್ , ರಾಯಚೂರು, ಸೆ.25-
ಕನ್ನಡದ ಅಸ್ಮಿತೆಯನ್ನ ಉಳಿಸಿ ಬೆಳೆಸಲು ಸರ್ಕಾರದ ಅಂಗಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ ರಾಜ್ಯದಲ್ಲಿ ಸಾಂಸ್ಕೃತಿಕ, ಸಾಹಿತ್ಯ,ಸಾಮಾಜಿಕ, ಶೈಕ್ಷಣಿಕವಾಗಿ ತನ್ನದೇ ಆದ ಮಹತ್ವ ಹೊಂದಿದೆ, ಹಲವಾರು ಸಂಘ ಸಂಸ್ಥೆಗಳಿಗೆ ಕಸಾಪ ಆಲದಮರವಿದ್ದಂತೆ ಆದರೆ ಕ್ಷಣಕೊಂದು ಗೊಂದಲ ಸೃಷ್ಟಿಯಾಗುವ ಆದೇಶಗಳನ್ನು ಮಾಡುತ್ತಿರುವದರಿಂದ ರಾಯಚೂರಿನಲ್ಲಿ ಕಸಾಪ ಘನತೆ ಬೀದಿಗೆ ಬಂದಿದ್ದು ಇದರಿಂದ ಹಲವಾರು ಕನ್ನಡಿಗರ ಮನಸ್ಸಿಗೆ ಧಕ್ಕೆ ತರುತ್ತಿದೆ, ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ರಾಜೀನಾಮೆ ನೀಡಬೇಕು ಹಾಗೂ ಹಂಗಾಮಿ ಅಧ್ಯಕ್ಷರನ್ನು ನೇಮಿಸಬೇಕು ಎಂದು ಬೆಳಕು ಟ್ರಸ್ಟ್ ಅಧ್ಯಕ್ಷರಾದ ಅಣ್ಣಪ್ಪ ಮೇಟಿಗೌಡ ಒತ್ತಾಯ ಮಾಡಿದರು.
ಅವರಿಂದು ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ರಾಯಚೂರು ಜಿಲ್ಲೆಯಲ್ಲಿ ಏಳು ತಾಲೂಕಗಳ ತಾಲೂಕು ಅಧ್ಯಕ್ಷರ ನೇಮಕಾತಿ ಪಟ್ಟಿ ಸೆ. 24ರಂದು ಜಿಲ್ಲಾಧ್ಯಕ್ಷರು ಹೊಸ ತಾಲೂಕು ಅಧ್ಯಕ್ಷರನ್ನಾಗಿ ನೇಮಕ ಮಾಡಿರುವ ಪಟ್ಟಿ ಸಾಮಾಜಿಕ ಜಾಲತಾಣದ ಮೂಲಕ ಹಾಕಿದರು ಆದರೆ ಅದಾದ ಕೆಲವೇ ಕ್ಷಣಗಳಲ್ಲಿ ಅವರು ನೀಡಿದ ಆದೇಶಕ್ಕೆ ಉತ್ತರವಾಗಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಗೌರವ ಕಾರ್ಯದರ್ಶಿಗಳು ಜಿಲ್ಲಾಧ್ಯಕ್ಷರಾದ ರಂಗಣ್ಣ ಪಾಟೀಲ್ ಅವರು ನೀಡಿದ ಆದೇಶ ಸರಿಯಿಲ್ಲ ಇದು ಕಸಾಪ ಬೈಲಾ ಪ್ರಕಾರ ಇಲ್ಲ, ಸಿಂಧನೂರು ತಾಲೂಕು ಅಧ್ಯಕ್ಷರಾಗಿರುವ ಪಂಪಯ್ಯ ಸ್ವಾಮಿ ಅವರು ಜಿಲ್ಲಾ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಆಯ್ಕೆ ಆದ ನಂತರ ನಮಗೆ ಪಟ್ಟಿ ಕಳಿಸಿದ ನಂತರ ನಾವು ಅನುಮೋದನೆ ನೀಡಿದ ಮೇಲೆ ಅಧ್ಯಕ್ಷರನ್ನಾಗಿ ಮಾಡಿದ್ವಿ, ಆದರೆ ಈಗ ನೀವು ಏಕಾಏಕಿ ಜಿಲ್ಲಾ ಕಾರ್ಯಕಾರಿಣಿ ಸಭೆ ಮಾಡಿ ನಿರ್ಣಯ ತೆಗೆದುಕೊಂಡು ಆದೇಶ ಹೊರಡಿಸಿದ್ದು ಕಸಾಪ ಬೈಲಾ ಪ್ರಕಾರ ತಪ್ಪು, ನೀವೂ ಈ ರೀತಿ ಅಧ್ಯಕ್ಷರನ್ನು ಬದಲಾವಣೆ ಮಾಡಿದ್ದು ಸರಿಯಲ್ಲ, ಪಂಪಯ್ಯ ಅವರು ಈಗಾಗಲೇ ವಕೀಲರ ಮೂಲಕ ಲೀಗಲ್ ನೋಟಿಸ್ ಪರಿಷತ್ ಗೆ ನೀಡಿರುತ್ತಾರೆ ಹಾಗಾಗಿ ನೀವು ನೀಡಿದ ಆದೇಶ ಊರ್ಜಿತವಲ್ಲ, ಅವರನ್ನೇ ಮುಂದುವರಿಸಬೇಕೆಂದು ತಿಳಿಸಿರುತ್ತಾರೆ, ಜಿಲ್ಲಾದ್ಯಕ್ಷರೇ ಎಲ್ಲಾ ತಾಲೂಕಿನ ಅಧ್ಯಕ್ಷರು ಅದೇ ರೀತಿ ಲೀಗಲ್ ನೋಟಿಸ್ ಕೊಟ್ಟರೆ ನಿಮ್ಮ ಆದೇಶಕ್ಕೆ ಬೆಲೆ ಎಲ್ಲಿಂದ ಬಂತು, ನೀವು ಒಂದು ಜವಾಬ್ದಾರಿ ಸ್ಥಾನದಲ್ಲಿದ್ದು ಯಾವ ರೀತಿ ಪಟ್ಟಿ ಕಳುಹಿಸಬೇಕೆನ್ನುವುದು ತಿಳಿದಿರಲಿಲ್ಲವೇ, ಈಗ ಹೊಸದಾಗಿ ನೇಮಕವಾದವರು ಗೊಂದಲದಲ್ಲಿ ಇದ್ದಾರೆ ಎಂದರೆ ತಪ್ಪಾಗಲಾರದು, ಯಾಕೆಂದರೆ ಅಭಿನಂದನೆಗಳನ್ನು ಸ್ವೀಕರಿಸಲು ಹಿಂದೆ ಮುಂದೆ ಜರಿಯುತ್ತಿದ್ದಾರೆ ಹಾಗೆ ಪದಗ್ರಹಣ ಮಾಡಲು ಈಗಿರುವ ಅಧ್ಯಕ್ಷರು ಅಧಿಕಾರ ಹಸ್ತಾಂತರ ಮಾಡಬೇಕಾಗಿದ್ದಿದೆ ಒಂದು ವೇಳೆ ನೀವೂ ಮಾಡಿದ ಆದೇಶ ಎಲ್ಲರದು ರದ್ದುಗೊಂಡರೆ ಈಗ ನೀವು ನೇಮಕ ಮಾಡಿದವರಿಗೂ ಕೂಡ ಮುಜುಗರ ಆಗುವುದರಲ್ಲಿ ಎರಡು ಮಾತಿಲ್ಲ ಹಾಗಾಗಿ ಇಂತಹ ತಪ್ಪುಗಳು ಹಲವಾರು ಆಗಿವೆ, ಹಾಗೂ ಕಸಾಪ ಜಿಲ್ಲಾಧ್ಯಕ್ಷರಾಗಿ ನಾಲ್ಕು ವರ್ಷ ಆದ್ರೂ ಕೂಡ ಒಂದು ಜಿಲ್ಲಾ ಸಮ್ಮೇಳನ, ಒಂದು ಕಥಾ ಕಮ್ಮಟ, ಕೆಲವು ದತ್ತಿ ಕಾರ್ಯಕ್ರಮ, ಹಾಗೂ ಬೇರೆಯವರ ಪ್ರಕಾಶನದ ಪುಸ್ತಕ ಬಿಡುಗಡೆ ಬಿಟ್ರೆ ನೀವೂ ಏನು ಹೇಳಿಕೊಳ್ಳುವ ಕಾರ್ಯ ಮಾಡಿಲ್ಲ, ಪಕ್ಕದ ಮಂತ್ರಾಲಯದಲ್ಲಿ ಗಡಿನಾಡ ಸಮ್ಮೇಳನ ನಡೆದರೂ ಕೂಡ ನಿಮ್ಮನ್ನು ಪರಿಗಣಿಸಲಿಲ್ಲ ರಾಜ್ಯ ಅಧ್ಯಕ್ಷರು ಯಾಕೆ ಎಂದು ನಾವು ಅವರನ್ನು ಪ್ರಶ್ನೆ ಮಾಡಿದಾಗ ಅವರು ಯಾವುದೇ ಕಾರ್ಯ ಮಾಡುತ್ತಿಲ್ಲ ನಮಗೆ ಸರಿಯಾದ ಸ್ಪಂದನೆ ಇಲ್ಲ ಎಂದು ತಿಳಿಸಿದರು, ನೀವು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿದ್ದೇ ಆಗಿದ್ದರೆ ಅವರು ನಿಮ್ಮನ್ನು ಯಾಕೆ ಕೈ ಬಿಡುತ್ತಿದ್ದರು ಆದರೂ ಕೂಡ ನಿಮ್ಮ ಪರವಾಗಿ ನಾವು ಧ್ವನಿಯೆತ್ತಿದ್ದೆವು, ನಿಮ್ಮ ಅನಾರೋಗ್ಯದ ದೃಷ್ಟಿಯಿಂದ ಹಾಗೂ ಜಿಲ್ಲೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷರಾದ ರಂಗಣ್ಣ ಪಾಟೀಲ್ ಅವರ ನಡೆ ಬೇಸರ ತಂದಿದೆ,ಜಿಲ್ಲೆಯಲ್ಲಿ ನಿಷ್ಕ್ರಿಯಗೊಂಡಿರುವ ಕನ್ನಡ ಕಾರ್ಯ ಕಸಾಪದ ಜವಾಬ್ದಾರಿಯುತ ಜಿಲ್ಲಾಧ್ಯಕ್ಷ ಸ್ಥಾನದಲ್ಲಿ ಇದ್ದು ನಿಮ್ಮ ಕೈಯಲ್ಲಿ ಕನ್ನಡದ ಕೆಲಸ ಮಾಡಲು ಆಗದೇ ಇರುವ ಕಾರಣಕ್ಕೆ ತಕ್ಷಣವೇ ರಂಗಣ್ಣ ಪಾಟೀಲ್ ಅವರು ರಾಜೀನಾಮೆ ನೀಡಬೇಕು, ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷರಿಗೆ ಹಾಗೂ ಸರ್ಕಾರಕ್ಕೆ ವಿಸ್ತೃತ ವರದಿಯನ್ನು ನೀಡಿ ಆಡಳಿತ ಅಧಿಕಾರಿ ಅಥವಾ ಹಾಗಾಮಿ ಜಿಲ್ಲಾಧ್ಯಕ್ಷರಾಗಿ ಕನ್ನಡದ ಕಾರ್ಯ ಮಾಡುವ ನಮ್ಮ ಜಿಲ್ಲೆಯಲ್ಲಿರುವರನ್ನೇ ನೇಮಿಸಲು ಮನವಿ ನೀಡುತ್ತೇವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಾರುತಿ ಬಡಿಗೇರ್ , ಅಂಬು ಪಾಟೀಲ್ ಉಪಸ್ಥಿತರಿದ್ದರು.
Comments
Post a Comment