ಸೆ
.
21ರಂದು ರಾಷ್ಟ್ರಮಟ್ಟದ ಬೆಳಕು ಸಮ್ಮೇಳನ:    ಪ್ರಶಸ್ತಿ ಪ್ರದಾನ, ಕೃತಿ ಬಿಡುಗಡೆ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮ - ಅಣ್ಣಪ್ಪ ಮೇಟಿಗೌಡ


 ಜಯ‌ ಧ್ವಜ ನ್ಯೂಸ್ ,ರಾಯಚೂರು ಸೆ, 18-

ಬೆಳಕು ಸಾಹಿತ್ಯಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ 120ನೇ ಕಾರ್ಯಕ್ರಮ ಸೆಪ್ಟೆಂಬರ್ 21ರಂದು ಮಟ್ಟದ ಬೆಳಕು ಸಮ್ಮೇಳನವನ್ನು ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬೆಳಕು ಟ್ರಸ್ಟ್ ಸಂಸ್ಥಾಪಕರಾದ ಅಣ್ಣಪ್ಪ ಮೇಟಿಗೌಡ ತಿಳಿಸಿದರು.

ಅವರಿಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸಮ್ಮೇಳನದಲ್ಲಿ ಸಾಹಿತ್ಯ-ಸಾಂಸ್ಕೃತಿಕ ಕಾರ್ಯಕ್ರಮಗಳು, ಉಪನ್ಯಾಸ, ಕವಿಗೋಷ್ಠಿ ಹಾಗೂ ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ರಾಷ್ಟ್ರ ಪ್ರಶಸ್ತಿ ಪ್ರದಾನ ಹಾಗೂ ವಿಶೇಷವಾಗಿ 210ಕವಿಗಳು ರಚಿಸಿರುವ ಕವನಗಳನ್ನು ಒಳಗೊಂಡಿರುವ ಸಂಪಾದಿತ ಕವನ ಸಂಕಲನ ಬೆಳಕಿನ ಬುತ್ತಿ ಕೃತಿ ಲೋಕಾರ್ಪಣೆಗೊಳ್ಳಲಿದೆ.ಹಾಗೂ ಬೆಳಕು ಸಂಸ್ಥೆ ಪದಾಧಿಕಾರಿಗಳು ಮಾಡಿರುವ ರೇಂಜ್ ಚಿತ್ರದ ಪೋಸ್ಟರ್ ಅನಾವರಣವಾಗಲಿದೆ, ರಾಷ್ಟ್ರ ಮಟ್ಟದ ಬೆಳಕು ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ ದಾ ಪು ಚಿ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಮಂಡ್ಯ ಜಿಲ್ಲೆಯ ಚಿಕ್ಕಣ್ಣ ಡಿ.ಪಿ ಹಾಗೂ ಸಮ್ಮೇಳನದ ಉದ್ಘಾಟಕರಾಗಿ ನಿವೃತ್ತ ಐಎಎಸ್ ಅಧಿಕಾರಿಗಳು ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು, ಲೇಖಕರು ಮತ್ತು ಕನ್ನಡಪರ ಚಿಂತಕರಾದ ಡಾ.ಸಿ ಸೋಮಶೇಖರ್ ಅವರು ಆಗಮಿಸುತ್ತಿದ್ದಾರೆ.


ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪುಟ್ಟಮಾದಯ್ಯ, ಕರ್ನಾಟಕ ವಿಚಾರ ವೇದಿಕೆಯ ಅಧ್ಯಕ್ಷರಾದ ಪಾಲನೇತ್ರ ಅವರು ಆಗಮಿಸಲಿದ್ದಾರೆ,ಸಚಿವರಾದ ಎನ್.ಎಸ್ ಬೋಸರಾಜು ವಿಶೇಷ ಅತಿಥಿಗಳಾಗಿ ಶಾಸಕರುಗಳಾದ ಡಾ. ಶಿವರಾಜ ಪಾಟೀಲ್ ಬಸನಗೌಡ ದದ್ದಲ್ ಹಾಗೂ ವಿಧಾನಪರಿಷತ್ ಸದಸ್ಯರಾದ ಎ.ವಸಂತ ಕುಮಾರ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ, ಸಮ್ಮೇಳನದಲ್ಲಿ ಅನೇಕ ಜಿಲ್ಲೆಯ ಸಾಹಿತಿಗಳು ಹಾಗೂ ಸಾಧಕರು ಹಾಗೂ ಸ್ಥಳೀಯ ಸಾಹಿತಿಗಳು, ಕಲಾವಿದರು, ಅಧಿಕಾರಿಗಳು ಮುಖಂಡರು, ಭಾಗವಹಿಸಲಿದ್ದಾರೆ,ಸಮ್ಮೇಳನದಲ್ಲಿ ಉಪನ್ಯಾಸ ಕಾರ್ಯಕ್ರಮ ಮಧ್ಯಾಹ್ನ 2 ಗಂಟೆಯಿಂದ ಪ್ರಾರಂಭವಾಗಲಿರುವ ಗೋಷ್ಠಿಯ ಅಧ್ಯಕ್ಷತೆಯನ್ನು ಬೆಂಗಳೂರಿನ ಸಾಹಿತಿಗಳಾದ ಲತಾ ಕೆ ಎಸ್ ಹೆಗಡೆ ವಹಿಸಿಕೊಳ್ಳಲಿದ್ದಾರೆ ಉಪನ್ಯಾಸವನ್ನು ಕನ್ನಡ ಪ್ರಾಧ್ಯಾಪಕರಾದ ಬೆಂಗಳೂರಿನ ಡಾ. ಎಂ ಸೆಲ್ವಿ ಬಾಲಕೃಷ್ಣ ಕನ್ನಡ ಮತ್ತು ಯುವ ಜನತೆಯ ಬಗ್ಗೆ ವಿಷಯ ಮಂಡಿಸಲಿದ್ದಾರೆ, ಮಧ್ಯಾಹ್ನ 3 ಗಂಟೆಯಿಂದ ಪ್ರಾರಂಭವಾಗಲಿರುವ ಕವಿಗೋಷ್ಠಿಯನ್ನು ಸಾಹಿತಿಗಳಾದ ಬೀರಪ್ಪ ಶಂಭೋಜಿ ಉದ್ಘಾಟಿಸಲಿದ್ದಾರೆ, ಅಧ್ಯಕ್ಷತೆಯನ್ನ ಸಾಹಿತಿಗಳಾದ ಅಯ್ಯಪ್ಪಯ್ಯ ಹುಡಾ ವಹಿಸಿಕೊಳ್ಳಲಿದ್ದಾರೆ ಕವಿಗೋಷ್ಠಿಯಲ್ಲಿ ಡಾ.ಬಸಮ್ಮ ಹಿರೇಮಠ ಅವರು ಬರೆದಿರುವ  'ಮನ ಪರಿವರ್ತನೆ' ಹಾಗೂ ಜ್ಯೋತಿ ಮಾಳಿ ಬರೆದಿರುವ 'ಹಾಳು ಗೋಡೆಯಲೊಂದು ಚಿಗುರು' ಕೃತಿ ಬಿಡುಗಡೆಗೊಳ್ಳಲಿದೆ, ಸಂಜೆ 5:00ಗೆ ಸಂಗೀತ ಕಾರ್ಯಕ್ರಮ ನಡೆಯಲಿದ್ದು ಸಮ್ಮೇಳನಕ್ಕೆ  ರಾಜ್ಯ ಹಾಗೂ ಹೊರರಾಜ್ಯದಿಂದ ಹಾಗೂ ಅನಿವಾಸಿ ಭಾರತೀಯರು ಕೂಡ ನೃತ್ಯ,ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದಾರೆ, ರಾಷ್ಟ್ರಮಟ್ಟದ ಪ್ರಶಸ್ತಿ ಹಾಗೂ ಬೆಳಕು ಕೃತಿಯಲ್ಲಿ ಆಯ್ಕೆಗೊಂಡ ಆಯ್ದ ಕವಿಗಳಿಗೆ ದ.ರಾ ಬೇಂದ್ರೆ ಪ್ರಶಸ್ತಿ ನೀಡಲಾಗುತ್ತಿದೆ ಪ್ರಶಸ್ತಿಗೆ ಆಯ್ಕೆಯಾದ ಸಾಧಕರು ಸಾಹಿತಿಗಳು ಹಾಗೂ ಮುಖ್ಯವಾಗಿ ನಮ್ಮ ಬೆಳಕು ಸಂಸ್ಥೆಯ ಎಲ್ಲ ಜಿಲ್ಲೆಯ ಪದಾಧಿಕಾರಿಗಳು ಕೂಡ ಆಗಮಿಸುತ್ತಿದ್ದಾರೆ ಸರ್ವರೂ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಪತ್ರಿಕಾಗೋಷ್ಠಿಯ ಮೂಲಕ ಅಣ್ಣಪ್ಪ ಮೇಟಿಗೌಡ ವಿನಂತಿಸಿಕೊಂಡರು.     
 ಪತ್ರಿಕಾಗೋಷ್ಠಿಯಲ್ಲಿ ಮಾರುತಿ ಬಡಿಗೇರ್, ಅಂಬರೀಶ್ ಪಾಟೀಲ್, ಬಸವರಾಜ್, ಉಪಸ್ಥಿತರಿದ್ದರು

Comments

Popular posts from this blog